ಬ್ಯಾಂಕಾಕ್: ಮಹಿಳೆಯೊಬ್ಬರ ಮೊಬೈಲ್ ನಲ್ಲಿ ಬೌದ್ಧ ಸನ್ಯಾಸಿಗಳ ರಾಸಲೀಲೆಯ ವೀಡಿಯೋ ಸೇರಿದಂತೆ 80,000ಕ್ಕೂ ಅಧಿಕ ಜನರ ನಗ್ನ ಫೋಟೊಗಳು ಪತ್ತೆಯಾದ ಘಟನೆ ಥಾಯ್ಲೆಂಡ್ ಬೆಚ್ಚಿಬಿದ್ದಿದೆ.
ವಿಲಾವನ್ ಎಮ್ಹಾವತ್ (30) ಎಂಬ ಮಹಿಳೆಯ ಹನಿಟ್ರ್ಯಾಪ್ ಗೆ ಬಿದ್ದ ಸಾವಿರಾರು ಮಂದಿಯಲ್ಲಿ ಹಲವಾರು ಮಂದಿ ಬ್ಲಾಕ್ ಮೇಲ್ ಗೆ ಒಳಗಾಗಿದ್ದು, ಇದರಿಂದ ಆಕೆ 102 ಕೋಟಿ ರೂ. ಸುಲಿಗೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ʻಮಿಸ್ಡ್ ಗಾಲ್ಫ್ʼ ಎಂದೇ ಖ್ಯಾತಿ ಪಡೆದಿರುವ ವಿಲಾವತ್ 9 ಸನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು, ಬೌದ್ಧ ಸನ್ಯಾಸಿಗಳ ರಾಸಲೀಲೆಯ ವೀಡಿಯೊ ಹೊರಗೆ ಬರುತ್ತಿದ್ದಂತೆ ಬುದ್ದರ ಪ್ರಾಬಲ್ಯವಿರುವ ದೇಶದ ಜನತೆ ಬೆಚ್ಚಿಬಿದ್ದಿದ್ದಾರೆ. 9 ಬೌದ್ಧ ಸನ್ಯಾಸಿಗಳನ್ನು ಸನ್ಯಾಸತ್ವದಿಂದ ವಜಾಗೊಳಿಸಲಾಗಿದೆ.
ಉತ್ತರ ಬ್ಯಾಂಕಾಕ್‌ನಲ್ಲಿರುವ ನೋಂಥಬುರಿಯಲ್ಲಿ ರಾಯಲ್ ಥಾಯ್ ಪೊಲೀಸ್ ಕೇಂದ್ರ ತನಿಖಾ ಬ್ಯೂರೋ ವಿಲಾವನ್ ಎಮ್ಸಾವತ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಫೋನ್ ಪರಿಶೀಲನೆ ನಡೆಸಿದ ಬಳಿಕ ಬೌದ್ಧ ಬಿಕ್ಕುಗಳೊಂದಿಗೆ ಸಂಪರ್ಕ ಹೊಂದಿದ್ದ ವಿಡಿಯೋಗಳು ಸೇರಿ 80 ಸಾವಿರ ಮಂದಿಯ ಬೆತ್ತಲೆ ಫೋಟೊಗಳು ಲಭ್ಯವಾಗಿದೆ. ಅವರಿಂದ ಬ್ಲ್ಯಾಕ್ ಮೇಲ್ ಮಾಡಿರುವುದು ದೃಢಪಟ್ಟಿದೆ.
ಕೆಲವು ಬೌದ್ಧ ಬಿಕ್ಕುಗಳು ಈಕೆಯ ಬ್ಲಾಕ್ ಮೇಲ್ ನಿಂದ ರೋಸಿಹೋಗಿ ದೇಗುಲಗಳ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ.
ವಿಲಾವನ್ ಕಳೆದ ಮೂರು ವರ್ಷಗಳಲ್ಲಿ ಈ ರೀತಿ ಸುಮಾರು 385 ಮಿಲಿಯನ್ ಬಹ್ತ್ ಅಂದರೆ 102 ಕೋಟಿ ರೂ. ಸುಲಿಗೆ ಮಾಡಿದ್ದಾಳೆ. ಈ ಹಣವನ್ನ ಆನ್‌ಲೈನ್ ಜೂಜಿನಲ್ಲಿ ಕಳೆದುಕೊಂಡಿದ್ದಾಳೆ ಎಂಬ ಮಾಹಿತಿಯೂ ಸಿಕ್ಕಿದೆ.
ಮತ್ತೊಂದು ವರದಿಯ ಪ್ರಕಾರ, ವಿಲಾವನ್ ಎಮ್ಸಾವತ್ ಲೈಂಗಿಕ ಕ್ರಿಯೆ ನಡೆಸಿದ ಸನ್ಯಾಸಿಗಳಲ್ಲಿ ಒಬ್ಬರಿಂದ ತನಗೆ ಮಗು ಜನಿಸಿದೆ ಎಂಬುದಾಗಿಯೂ ಹೇಳಿಕೊಂಡಿದ್ದಾಳೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಜೂನ್ ತಿಂಗಳ ಮಧ್ಯದಲ್ಲಿ ಹಿರಿಯ ಸನ್ಯಾಸಿ ಮಹಿಳೆಯಿಂದ ಬ್ಲ್ಯಾಕ್ ಮೇಲ್‌ಗೆ ಒಳಗಾಗಿದ್ದು, ಕೂಡಲೇ ಸನ್ಯಾಸತ್ವ ತೊರೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ನಾಪತ್ತೆಯಾಗಿದ್ದರು. ಈ ಬೆಳವಣಿಗೆ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಥಾಯ್ಲೆಂಡ್‌ನಲ್ಲಿ ಶೇ.90ಕ್ಕಿಂತ ಹೆಚ್ಚು ಬೌದ್ಧ ಸಮುದಾಯದ ಜನರಿದ್ದಾರೆ. ಸುಮಾರು 2,00,000 ಸನ್ಯಾಸಿಗಳಿದ್ದು, 85 ಸಾವಿರ ಬೌದ್ಧ ಬಿಕ್ಕುಗಳ ಶಿಷ್ಯರಿದ್ದಾರೆ. ಸದ್ಯ ಸನ್ಯಾಸಿಗಳನ್ನೇ ಗುರಿಯಾಗಿಸಿದ್ದ ಈ ಪ್ರಕರಣ ಬೌದ್ಧ ಸಮುದಾಯದವನ್ನ ಬೆಚ್ಚಿ ಬೀಳಿಸಿದೆ.