Menu

5 ವರ್ಷದಲ್ಲಿ ಪತ್ನಿಯರಿಗೆ ಬಲಿಯಾದ 785 ಗಂಡಂದಿರು: ವರದಿ

ದೇಶಾದ್ಯಂತ ಪತ್ನಿಯರಿಂದ ಹತ್ಯೆಯಾಗುವ ಗಂಡಂದಿರ ಸಂಖ್ಯೆ ಇತ್ತೀಚೆಗೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕಳೆದ 5 ವರ್ಷಗಳಲ್ಲಿ ಕೇವಲ 5 ರಾಜ್ಯಗಳಲ್ಲಿ 785 ಗಂಡಂದಿರು ಹತ್ಯೆಗೀಡಾಗಿದ್ದಾರೆ ಎಂಬುದು ಪೊಲೀಸರ ವರದಿಯಲ್ಲಿ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸಮಾಜದಲ್ಲಿ ಹೆಚ್ಚುತ್ತಿರುವ ವಿವಾಹೇತರ ಸಂಬಂಧ ಸೇರಿದಂತೆ ನಾನಾ ಕಾರಣಗಳಿಗಾಗಿ ಪತ್ನಿಯರಿಂದ ಗಂಡಂದಿರು ಹತ್ಯೆ ಆಗುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ವಿಶೇಷ ಅಂದರೆ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ.ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಈ ರೀತಿ ಕೊಲೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು.

ಪೊಲೀಸರು ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 5 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 274 ಗಂಡಂದಿರ ಹತ್ಯೆಯಾಗಿದ್ದಾರೆ.  2020ರಲ್ಲಿ 50, 2021ರಲ್ಲಿ 50, 2022ರಲ್ಲಿ 52, 2023 ರಲ್ಲಿ 55 ಮತ್ತು 2024 ರಲ್ಲಿ 62 ಮಂದಿ ಪತ್ನಿಯರಿಂದ ಗಂಡಂದಿರು ಕೊಲೆಯಾಗಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಬಿಹಾರದಲ್ಲಿ 186 ಗಂಡಂದಿರ ಹತ್ಯೆಯಾಗಿದ್ದಾರೆ. 2020 ರಲ್ಲಿ 30, 2021 ರಲ್ಲಿ 35, 2022 ರಲ್ಲಿ 40, 2023 ರಲ್ಲಿ 39 ಮತ್ತು 2024 ರಲ್ಲಿ 42. ರಾಜಸ್ಥಾನದಲ್ಲಿ 138 ಗಂಡಂದಿರ ಹತ್ಯೆಯಾಗಿದೆ. 2020 ರಲ್ಲಿ 20. 2021 ರಲ್ಲಿ 25. 2022 ರಲ್ಲಿ 28, 2023 ರಲ್ಲಿ 30 ಮತ್ತು 2024 ರಲ್ಲಿ 35 ಮಂದಿ ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 100 ಗಂಡಂದಿರು, 2020 ರಲ್ಲಿ 15, 2021 ರಲ್ಲಿ 18, 2022 ರಲ್ಲಿ 20, 2023 ರಲ್ಲಿ 22 ಮತ್ತು 2024 ರಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 87 ಗಂಡಂದಿರು. 2020 ರಲ್ಲಿ 12. 2021 ರಲ್ಲಿ 15. 2022 5 18, 2023 50 20 2 2024 ರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ.

ಈ ಕೊಲೆಗಳಿಗೆ ಪ್ರಮುಖ ಕಾರಣ ವಿವಾಹೇತರ ಸಂಬಂಧಗಳು ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. ಕೆಲವು ಗಂಡಂದಿರು ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ. ಕೆಲವು ಮಹಿಳೆಯರು ಗಂಡಂದಿರನ್ನು ಪ್ರಿಯಕರನಿಂದ ದೂರವಿಡಲು ಪ್ರಯತ್ನಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಉಂಟಾದ ಘರ್ಷಣೆಗಳು ಕೊಲೆಯಲ್ಲಿ ಅಂತ್ಯಕಂಡಿವೆ.

ಪ್ರಕರಣಗಳ ತನಿಖೆಯಲ್ಲಿ ಮೊಬೈಲ್ ಕರೆ ಡೇಟಾ ಪ್ರಮುಖ ಪಾತ್ರ ವಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೋನ್ ಸ್ಥಳಗಳು, ಸಂದೇಶಗಳು ಸಂದೇಶ ಮತ್ತು ಕರೆದಾಖಲೆಗಳ ಆಧಾರದ ಮೇಲೆ, ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಅನೇಕ ಆರೋಪಿಗಳು ಜೈಲಿಗೆ ಅಟ್ಟಿದ್ದಾರೆ.

Related Posts

Leave a Reply

Your email address will not be published. Required fields are marked *