Menu

ಕೆಆರ್‌ಎಸ್ ಡ್ಯಾಂ ಭರ್ತಿಗೆ 7 ಅಡಿ ಬಾಕಿ

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂ ಭರ್ತಿಯಾಗಲು ಇನ್ನು 7 ಅಡಿಗಳಷ್ಟೇ ಬಾಕಿಯಿದೆ. ಜಲಾಶಯ ಭರ್ತಿಯಾಗುತ್ತಿ ರುವುದು ರೈತರಿಗೆ ಸಂತಸ ತಂದಿದೆ.

ಜಲಾಶಯಕ್ಕೆ 23,473 ಕ್ಯೂಸೆಕ್ ಒಳಹರಿವು ಇದ್ದು, ಒಳಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಡ್ಯಾಂನಲ್ಲಿ 39.847 ಟಿಎಂಸಿ ನೀರು ಸಂಗ್ರಹವಾಗಿದ್ದು, 1,252 ಕ್ಯೂಸೆಕ್ ಒಳಹರಿವು ಇದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿದ್ದು, ಕೆಆರ್‌ಎಸ್ ಡ್ಯಾಂನಲ್ಲಿ 117.80 ಅಡಿ ನೀರಿದೆ. ಭರ್ತಿಗೆ 7 ಅಡಿ ಬಾಕಿಯಿದೆ.
124.80 ಅಡಿಗಳ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ 117.80 ಅಡಿ ನೀರಿದ್ದು, ಸಂಪೂರ್ಣ ಭರ್ತಿಗೆ 7 ಅಡಿಗಳಷ್ಟೇ ಬಾಕಿಯಿದೆ. ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

2,859 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ 2849.77 ಅಡಿ ನೀರಿದೆ. ಜಲಾಶಯಕ್ಕೆ 3,070 ಕ್ಯೂಸೆಕ್ ನೀರಿನ ಒಳಹರಿವಿದ್ದು, 3,070 ಕ್ಯುಸೆಕ್ ಹೊರಹರಿವಿದೆ. 37.103 ಟಿಎಂಸಿ ಸಂಗ್ರಹ ಸಾಮರ್ಥ್ಯವಿರುವ ಹೇಮಾವತಿ ಜಲಾಶಯದಲ್ಲಿ 29.350 ಟಿಎಂಸಿ ನೀರಿದೆ. 13,273 ಕ್ಯುಸೆಕ್ ಒಳಹರಿವಿದ್ದು, 4,750 ಕ್ಯೂಸೆಕ್ ಹೊರಹರಿವಿದೆ

Related Posts

Leave a Reply

Your email address will not be published. Required fields are marked *