ಮ್ಯಾನ್ಮರ್ ಮತ್ತು ಬ್ಯಾಂಕಾಕ್ ನಲ್ಲಿ ಸಂಭವಿಸಿದ 2 ಪ್ರಬಲ ಭೂಕಂಪನದಿಂದ ಪ್ರಾಥಮಿಕ ಮಾಹಿತಿ ಪ್ರಕಾರ 20 ಮಂದಿ ಮೃತಪಟ್ಟಿದ್ದು, ಹಲವಾರು ಬಹುಮಹಡಿ ಕಟ್ಟಡಗಳು ಧರೆಗುರುಳಿದಿದೆ. ಇದರಿಂದ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಭೀತಿದೆ.
ಶುಕ್ರವಾರ ಮಧ್ಯಾಹ್ನ 12.50ರ ಸುಮಾರಿಗೆ ಸಂಭವಿಸಿದ ಭೀಕರ ಭೂಕಂಪನದಿಂದ ಎರಡು ದೇಶಗಳು ತತ್ತರಿಸಿವೆ. ಮೊದಲ ಬಾರಿ ಸಂಭವಿಸಿದ ಪ್ರಬಲ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.7ರ ತೀವ್ರತೆ ದಾಖಲಾಗಿದ್ದರೆ, ಎರಡನೇ ಬಾರಿ ಸಂಭವಿಸಿದ ಭೂಕಂಪನ 6.8ರಷ್ಟು ತೀವ್ರತೆ ದಾಖಲಾಗಿದೆ.
ಮ್ಯಾನ್ಮರ್ ನಲ್ಲಿ ಸಾಂಗೈಗ್ ನಗರದಿಂದ 10 ಕಿ.ಮೀ. ದೂರದಲ್ಲಿ ಭೂಕಂಪನ ಸಂಭವಿಸಿದ್ದು, ಶುಕ್ರವಾರ ನಮಾಜ್ ಸಲ್ಲಿಸುವ ವೇಳೆ ಮಸೀದಿ ಕುಸಿದು ಬಿದ್ದಿದ್ದರೆ, ಮತ್ತೊಂದೆಡೆ 1000 ಹಾಸಿಗೆಯ ಆಸ್ಪತ್ರೆಗೆ ಕುಸಿದುಬಿದ್ದಿದೆ. ಇಲ್ಲಿ ಎಷ್ಟು ಜನರಿದ್ದರು ಎಂದು ಊಹಿಸುವುದು ಕೂಡ ಕಷ್ಟವಾಗಿದ್ದು, ಸಾವಿನ ಸಂಖ್ಯೆ ಸಾವಿರ ದಾಟುವ ಭೀತಿ ಇದೆ.
ಇದೇ ವೇಳೆ ಚೀನಾ ಕೂಡ ನೆಟ್ ವರ್ಕ್ ಸೆಂಟರ್ ನಲ್ಲಿ 7,9 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಹೇಳಿಕೊಂಡಿದೆ. ಚೀನಾದಲ್ಲಿ ಅಲ್ಲದೇ ಭಾರತದ ಕೋಲ್ಕತಾ, ಮಣಿಪುರ, ಬಾಂಗ್ಲಾದೇಶದ ಚಿತ್ತಗಾಂಗ್ ಮುಂತಾದ ಕಡೆಗಳಲ್ಲಿ ಭೂಕಂಪನ ಸಂಭವಿಸಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಭೂಕಂಪನ ಸಂಭವಿಸುವ ಸಾಧ್ಯತೆ ಇದೆ ಎಂದು ಭೂವಿಜ್ಞಾನಿಗಳು ಎಚ್ಚರಿಸಿದ್ದಾರೆ.