Saturday, February 22, 2025
Menu

ಎಟಿಎಂ ಯಂತ್ರಗಳಿಗೆ ಹಣ ಹಾಕುವಾಗಲೇ ದೋಚುತ್ತಿದ್ದ ಕ್ಯಾಶ್ ಆಫೀಸರ್ ಸೇರಿ 6 ಮಂದಿ ಸೆರೆ

ಬೆಂಗಳೂರು:ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಸ್ವಲ್ಪ ಹಾಕಿ ಉಳಿದ ಹಣವನ್ನು ಲಪಟಾಯಿಸುತ್ತಿದ್ದ ಹಾಗೂ ಪಾಸ್ ವರ್ಡ್ ಬಳಸಿ ಹಣ ಕದಿಯುತ್ತಿದ್ದ ಏಜೆನ್ಸಿಯೊಂದರ 6 ಮಂದಿ ನೌಕರರನ್ನು ಬಂಧಿಸಿ 90 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ನಂದಿನಿ ಲೇಔಟ್ ನ ಕ್ಯಾಶ್ ಆಫೀಸರ್ ಸಮೀರ್ (26), ಕ್ಯಾಶ್ ಲೋಡರ್ ಮನೋಹರ(29), ಗಿರೀಶ್ (26), ಜಗ್ಗೇಶ್ (28), ಗೂಡ್ಸ್ ವಾಹನದ ಚಾಲಕ ಶಿವು (27) ಹಾಗೂ ಲಗ್ಗೆರೆಯ ಜಶ್ವಂತ (27) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 51.76 ಲಕ್ಷ ನಗದು 3 ಕಾರುಗಳು ಸೇರಿ 90 ಲಕ್ಷ ಮೌಲ್ಯದ ಮಾಲುಗಳನ್ನು ವಶ ಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಆರೋಪಿಗಳು ಲಪಟಾಯಿಸಿದ ಹಣದಿಂದ ಮೂರು ಕಾರುಗಳನ್ನು ಖರಿದೀಸಿದ್ದು, ಅವುಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಈ ಆರೋಪಿಗಳು ಎಟಿಎಂನಿಂದ ಹಣ ಕಳ್ಳತನ ಮಾಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.ಕೆಂಪೇಗೌಡ ಲೇಔಟ್, ಸರ್ವೀಸ್ ರಸ್ತೆಯಲ್ಲಿರುವ ಟೀ ಶಾಪ್ ಬಳಿ ಆರು ಮಂದಿ ಸೇರಿಕೊಂಡು ಹಣಕಾಸಿನ ವಿಚಾರವಾಗಿ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ತಕ್ಷಣ ಸ್ಥಳಕ್ಕೆ ದಾವಿಸಿದ ಪೊಲೀಸರು ಈ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಎ.ಟಿ.ಎಂ ಗಳಲ್ಲಿ ಹಣವನ್ನು ಕಳವು ಮಾಡಿದ್ದಾಗಿ ಹಾಗೂ ಕಳವು ಮಾಡಿದ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಪರಸ್ಪರ ಜಗಳವಾಡುತ್ತಿದ್ದುದ್ದಾಗಿ ಹೇಳಿದ್ದಾರೆ.ಈ ಆರು ಮಂದಿಯನ್ನು ಠಾಣೆಗೆ ಕರೆದೊಯ್ದು ಒಂದು ಕಾರು ಮತ್ತು 43,76,000 ರೂ. ನಗದನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸುದೀರ್ಘವಾಗಿ ವಿಚಾರಣೆ ಮಾಡಿದಾಗ ಆರೋಪಿಗಳು ಎ.ಟಿ.ಎಂಗಳಿಗೆ ಹಣವನ್ನು ತುಂಬುವ ಹಾಗೂ ಎ.ಟಿ.ಎಂಗಳನ್ನು ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಎಟಿಎಂಗಳಿಗೆ ಹಣವನ್ನು ತುಂಬುವಾಗ ಕಡಿಮೆ ಹಣವನ್ನು ತುಂಬಿ ಉಳಿದ ಹಣವನ್ನು ಲಪಟಾಯಿಸುತ್ತಿದ್ದರಲ್ಲದೆ, ಎ.ಟಿ.ಎಂ ಮೆನ್ಗಳನ್ನು ರಿಪೇರಿ ಮಾಡುವಾಗ ಪಾಸ್ವರ್ಡ್ನ್ನು ಪಡೆದು ಎ.ಟಿ.ಎಂಗಳಲಿದ್ದ ಹಣವನ್ನು ಕಳವು ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಗೊತ್ತಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪೈಕಿ ಲಗ್ಗೆರೆಯ ಚೌಡೇಶ್ವರಿ ನಗರದ ಆರೋಪಿಯ ಮನೆಯಲ್ಲಿ 8ಲಕ್ಷ ನಗದು, ಮತ್ತೋಬ್ಬ ಆರೋಪಿಯು ಕಳವು ಮಾಡಿದ ಹಣದಲ್ಲಿ ಆತನ ಪತ್ನಿಗೆ ಕೊಡಿಸಿದ್ದ ಕಾರನ್ನು ನಂದಿನಿ ಲೇಔಟ್ನಲ್ಲಿರುವ ಸಿದ್ದೇಶ್ವರ ಲೇಔಟ್ನ ಆತನ ವಾಸದ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತೋಬ್ಬ ಆರೋಪಿಯು ಕಳವು ಮಾಡಿದ ಹಣದಲ್ಲಿ ಖರೀದಿಸಿದ್ದ ಕಾರನ್ನು ಆತನ ನಂದಿನಿ ಲೇಔಟ್ನ, ಲಕ್ಷಿದೇವಿ ನಗರದ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತ ಸೈದುಲು ಅಡಾವತ್ ರವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ, ಇನ್‌್ಸಪೆಕ್ಟರ್ ಮಂಜು ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Related Posts

Leave a Reply

Your email address will not be published. Required fields are marked *