ಪಣಜಿ: ಜಾತ್ರೆಯ ಮೆರವಣಿಗೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 6 ಮಂದಿ ಅಸುನೀಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಗೋವಾದಲ್ಲಿ ಸಂಭವಿಸಿದೆ.
ರಾಜಧಾನಿ ಪಣಜಿಯಿಂದ 40 ಕಿ.ಮೀ. ದೂರದಲ್ಲಿರುವ ಶುಕ್ರವಾರ ತಡರಾತ್ರಿ ಶ್ರೀದೇವಿ ಲಹಿರಿ ಜಾತ್ರೆ ವೇಳೆ ಈ ದುರಂತ ಸಂಭವಿಸಿದೆ.
ಜಾತ್ರೆಯಲ್ಲಿ ಸಾವಿರಾರು ಭಕ್ತರು ಸೇರಿದ್ದು, ಮೆರವಣಿಗೆ ವೇಳೆ ವಿದ್ಯುತ್ ಪ್ರವಾಹ ಹರಿದ ಕಾರಣ ದಿಗಿಲುಗೊಂಡ ಭಕ್ತರು ಏಕಾಏಕಿ ಓಡಲು ಆರಂಭಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಬೆನ್ನಲ್ಲೇ 1000ಕ್ಕೂ ಅಧಿಕ ಪೊಲೀಸರನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ.
ಜಾತ್ರೆ ವೇಳೆ ಸಂಭವಿಸಿದ ದುರಂತಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಘಟನೆ ತಿಳಿದು ಆಘಾತವಾಯಿತು. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಎಕ್ಸ್ ನಲ್ಲೊ ಮೋದಿ ಪೋಸ್ಟ್ ಮಾಡಿದ್ದಾರೆ.