Menu

6.5 ಲಕ್ಷ ಭಕ್ತರಿಂದ ಹಾಸನಾಂಬೆ ದೇವಿ ದರ್ಶನ, 5 ಕೋಟಿ ಸಂಗ್ರಹ: ಸಚಿವ ಕೃಷ್ಣ ಭೈರೇಗೌಡ

ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನ ಸುಗಮವಾಗಿ ನಡೆಯುತ್ತಿದ್ದು, ಕಳೆದ 5 ದಿನಗಳಲ್ಲಿ 6,40,700 ಮಂದಿ ದರ್ಶನ ಪಡೆದಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಹಾಸನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆ 5 ಗಂಟೆಯವರೆಗೆ 6,40,700 ಜನರು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ ಎಂದರು.

ಮಂಗಳವಾರ ಬೆಳಿಗ್ಗೆಯಿಂದ‌ ಇಲ್ಲಿಯವರೆಗೆ 1,22,600 ಭಕ್ತರು ದರ್ಶನ ಪಡೆದಿದ್ದಾರೆ. ಐದೂವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆ. ಮಾರನೇ ದಿನ ಒಂದು ಕಿಲೋಮೀಟರ್, ಮೂರನೇ ದಿನ ಮತ್ತೊಂದು ಕಿಲೋಮೀಟರ್ ಜಾಸ್ತಿ ಮಾಡಿದ್ದೇವೆ. ಏಳೂವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆ. ಆದರೂ ಸಾಲುತ್ತಿಲ್ಲ, ಅದನ್ನು ಮೀರಿ ಜನ ಬಂದಿದ್ದಾರೆ ಎಂದು ಅವರು ವಿವರಿಸಿದರು.

ಸೋಮವಾರ 1,10,1000 ಜನರನ್ನು ನಿರೀಕ್ಷೆ ಮಾಡಿದ್ದೆವು. ಆದರೆ 2,29,000 ಜನ ಬಂದು ದರ್ಶನ ಮಾಡಿದ್ದಾರೆ. ಬುಧವಾರ ಬೆಳಿಗ್ಗೆ 5 ಗಂಟೆಯವರೆಗೆ ಒಂದುವರೆ ಲಕ್ಷ ಜನ ದರ್ಶನ ಮಾಡುವ ಸಾಧ್ಯತೆ ಇದೆ ಎಂದು ಅವರು ನುಡಿದರು.

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ವಾಡಿಕೆಗಿಂತ ಹೆಚ್ಚು ಜನ ಬಂದಿದ್ದಾರೆ. ಸ್ವಚ್ಛತೆ, ಕುಡಿಯುವ ನೀರು, ಪ್ರಸಾದ, ಮಜ್ಜಿಗೆ ವ್ಯವಸ್ಥೆ ಮಾಡಿದ್ದೇವೆ.  ಮಂಗಳವಾರ ದೇವಿ ದರ್ಶನಕ್ಕೆ 4 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ದರ್ಶನಕ್ಕೆ ಬರುವವರು ಮಾನಸಿಕವಾಗಿ ಹೆಚ್ಚು ಸಮಯ ಕಳೆಯುವ ಬಗ್ಗೆ ಸಿದ್ದರಾಗಿ ಬರಬೇಕು ಎಂದು ಸಚಿ ವ ಕೃಷ್ಣ ಭೈರೇಗೌಡ ಮನವಿ ಮಾಡಿದರು.

ದರ್ಶನಕ್ಕೆ ಬರುವವರ ಸಂಖ್ಯೆ ನಂಬರ್‌ಗಿಂತ ಡಬಲ್ ಆಗಿದೆ.  ನಿನ್ನೆ ಮೂರವರೆ ಗಂಟೆಯಲ್ಲಿ ದರ್ಶನ ಆಗಿದೆ.  ಅದನ್ನು ಬಿಟ್ಟರೆ ಸುಗಮವಾಗಿ ನಡೆದಿದೆ.  ಜಿಲ್ಲಾಡಳಿತ ಹಗಲು-ರಾತ್ರಿ ಕೆಲಸ ಮಾಡುತ್ತಿದೆ.  ಅರ್ಚಕರನ್ನು ಮನವಿ ಮಾಡಿ ನಿನ್ನೆ ರಾತ್ರಿ 3 ರಿಂದ 5 ಗಂಟೆಯವರೆಗೆ ಗರ್ಭಗುಡಿ ಬಾಗಿಲು ಮುಚ್ಚದೆ ದರ್ಶನ ಮಾಡಿಸಿದ್ದೇವೆ ಎಂದು ಅವರು ಸ್ಪಷ್ಟನೆ ನೀಡಿದರು.

ನಮ್ಮ ದೇವಿ ನಮಗೆ ವಾಪಾಸ್ ಬಂದಿದೆ ಎಂದು ಸಂತಸ ಪಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ರೈತರು, ದುಡಿಯವ ವರ್ಗದವರು ದೇವಿ ದರ್ಶನಕ್ಕೆ ಬರುತ್ತಿದ್ದಾರೆ. ನಿನ್ನೆ ಮತ್ತು ಇವತ್ತು ಬಂದಿರುವ ಜನ ನೋಡಿದ್ರೆ ಇನ್ಮುಂದೆ 50% ಹೆಚ್ಚಿಗೆ ಜನ ಬರುವ ಸಾಧ್ಯತೆ ಇದೆ. ಇದು ನಮಗೆ ಸವಾಲಿನ ವಿಷಯ ಎಂದು ಅವರು ಹೇಳಿದರು.

5 ಕೋಟಿ ಆದಾಯ

ಮಂಗಳವಾರ ಬೆಳಿಗ್ಗೆ 5 ಗಂಟೆಯವರೆಗೆ 1000 ರೂ ಹಾಗೂ 300 ರೂ ವಿಶೇಷ ದರ್ಶನದ ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ 4,21,73,760 ಹಣ ಬಂದಿದೆ. ಕಳೆದ ವರ್ಷಕ್ಕಿಂತ ಒಂದು ಹೆಚ್ಚಿಗೆ ಬಂದಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ  1000 ರೂ. ಬಲೆಯ 3,600 ಟಿಕೆಟೆ ಮಾರಾಟ ಆಗಿದೆ. ಬೆಳಿಗ್ಗೆಯಿಂದ 300 ರೂನ ಟಿಕೆಟ್ 6000 ಸೇಲ್ ಆಗಿದೆ. ಒಟ್ಟಾರೆ 5 ಕೋಟಿ ಗಳಿಕೆ ಮೀರಲಿದೆ ಎಂದು ಅವರು ನುಡಿದರು.

Related Posts

Leave a Reply

Your email address will not be published. Required fields are marked *