ಐದನೇ ತರಗತಿ ಓದುತ್ತಿದ್ದ ಹರಿಜನ ವಾರ್ಡಿನ ಶಾಲೆಯ ವಿದ್ಯಾರ್ಥಿನಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ದಾರುಣ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.
ಸಿಂಧನೂರು ತಾಲೂಕಿನ ಕುರುಕುಂದ ಗ್ರಾಮದ ಹರಿಜನ ವಾರ್ಡಿನಲ್ಲಿ 5ನೇ ತರಗತಿ ಓದುತ್ತಿರುವ ತನುಶ್ರೀ ತಂದೆ ಶಾಮಣ್ಣ ಭಜಂತ್ರಿ ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ವಿದ್ಯಾರ್ಥಿನಿ ಶಾಲೆಯ ಬಳಿ ಮಧ್ಯಾಹ್ನ ಊಟದ ಸಮಯದಲ್ಲಿ ನೀರಿನ ಟ್ಯಾಂಕ್ ಬಳಿ ನೀರು ಕುಡಿಯಲು ಹೋದ ಸಂದರ್ಭ ದಲ್ಲಿ ಈ ದುರ್ಘಟನೆ ಸಂಭವಿಸಿದೆ.
ದಿನನಿತ್ಯದಂತೆ ನೀರು ಕುಡಿಯಲು ಹೋದಂತೆ, ಶುಕ್ರವಾರನು ವಿದ್ಯಾರ್ಥಿನಿ ಹೋಗಿದ್ದಾಳೆ ಕುಡಿಯುವ ನೀರಿನ ಬಳೆ ವೈರ್ ಬಿದ್ದಿರುವುದರಿಂದ ಈ ಘಟನೆ ನಡೆದಿದೆ, ತಕ್ಷಣವೇ ಶಿಕ್ಷಕರು ಎಚ್ಚೆತ್ತುಕೊಂಡಿರುವುದರಿಂದ ಇನ್ನಿತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆನೆ ಆಗದಂತೆ ಜರುಗಿದೆ.
ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ಜನರು ಆಕ್ರೋಶ
ಕುರುಕುಂದಾ ಗ್ರಾಮದಲ್ಲಿ ಮುಖ್ಯ ರಸ್ತೆಗಳಲ್ಲಿ ಮತ್ತು ಶಾಲೆಯ ಹತ್ತಿರ ವೈರಿಗಳು ಕೆಳಗಡೆ ಇದ್ದರುವುದರಿಂದ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದ ಇಲಾಖೆಯ ಅಧಿಕಾರಿಗಳು ಆಗಿದ್ದಾರೆ ಅವರ ವೈಫಲ್ಯದಿಂದಲೇ ಇಂಥ ಘಟನೆ ನಡೆದಿದೆ ಎಂದು ಅನೇಕ ಸಂಘಟನೆ ಹಾಗೂ ಗ್ರಾಮದವರು ಆಕ್ರೋಶ ವ್ಯಕ್ತಪಡಿಸಿದರು.


