ಶ್ರೀಲಂಕಾದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ, ಅಲ್ಲಲ್ಲಿ ಭೂಕುಸಿತಗಳುಂಟಾಗಿ 56 ಮಂದಿ ಮೃತಪಟ್ಟಿದ್ದಾರೆ. ಜನಜೀವನ ದುಸ್ತರವಾಗಿ ಪರಿಣಮಿಸಿದೆ.
ನಿರಂತರ ಮಳೆಯಿಂದಾಗಿ ಎಲ್ಲೆಡೆ ನೀರು ಆವರಿಸಿದ್ದು, 600ಕ್ಕೂ ಹೆಚ್ಚು ಮನೆಗಳು ತೀವ್ರ ಹಾನಿಗೊಂಡಿವೆ. ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ಸರ್ಕಾರ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯ ಆರ್ಭಟ ಹೀಗೆ ಮುಂದುವರಿದರೆ ರಜೆ ಕೂಡ ಮುಂದುವರಿಯಲಿದೆ. ಕೊಲಂಬೊದಿಂದ 300 ಕಿ.ಮೀ ಪೂರ್ವಕ್ಕೆ ಇರುವ ಬದುಲ್ಲಾ ಮತ್ತು ನುವಾರ ಎಲಿಯಾಪ್ರದೇಶಗಳಲ್ಲಿ ಉಂಟಾದ ಭೂಕುಸಿತದಲ್ಲಿ 25ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 21 ಜನ ಕಾಣೆಯಾಗಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ರಕ್ಷಣಾ ತಂಡಗಳು ಬಿರುಸಿನ ಕಾರ್ಯಾಚರಣೆಯಲ್ಲಿ ತೊಡಗಿವೆ.


