ಬೆಂಗಳೂರಿನಲ್ಲಿ ಇದೇ ತಿಂಗಳಿನ ಅಂತ್ಯಕ್ಕೆ ಹೋಟೆಲ್‌ಗಳಲ್ಲಿ ಕಾಫಿ ದರದಲ್ಲಿ 15% ಹೆಚ್ಚಳವಾಗಲಿದೆ. ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಫಿ ಪುಡಿ ಬೆಲೆ ಏರಿಕೆ ಮತ್ತು ಹಾಲಿನ ದರ ಏರಿಕೆ ಕಾರಣ ಕಾಫಿ ದರ ಏರಿಕೆ ಅನಿವಾರ್ಯ ಎಂದು ಹೋಟೆಲ್ ಅಸೋಸಿಯೇಷನ್ ಹೇಳುತ್ತಿದೆ. ಕೆಜಿ ಕಾಫಿಗೆ 800 ರಿಂದ 850 ರೂ. ಇದೆ. ಶೀಘ್ರ ಇದರ ಬೆಲೆ 1000 ದಿಂದ 1100ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳು ಸಭೆ ನಡೆಸಿದ್ದು, ಕಾಫಿ ದರ 5 ರೂ. ಹೆಚ್ಚಾಗಲಿದೆ.
ರೋಸ್ಟರ್ ಮಾರಾಟ ಮಾಡುವ ಹುರಿದ ಕಾಫಿ ಪುಡಿ ಬೆಲೆ 100 ಹೆಚ್ಚಾಗಲಿದ್ದು, ಮಾರ್ಚ್ ಅಂತ್ಯಕ್ಕೆ ಕೆಜಿಗೆ 100 ರೂ. ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ 500 ರೋಸ್ಟರ್‌ಗಳಿದ್ದು, ಅವುಗಳಲ್ಲಿ 300 ಬೆಂಗಳೂರಿನಲ್ಲಿವೆ. ಕಾಫಿ ಪುಡಿ ಬೆಲೆ ಹೆಚ್ಚಾದರೆ ಹೋಟೆಲ್‌ಗಳಲ್ಲಿ ಕಾಫಿ ದರ ಹೆಚ್ಚಳ ಅನಿರ್ವಾಯ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.
ಸೆಲ್ಫ್ ಸರ್ವಿಸ್ ಹೋಟೆಲ್‌ಗಳಲ್ಲಿ 15 ರಿಂದ 20 ರೂ., ಸಿಟ್ಟಿಂಗ್ ಸರ್ವಿಸ್ ಹೋಟೆಲ್‌ಗಳಲ್ಲಿ 25 ರಿಂದ 30 ರೂ., ಎಸಿ ಹೋಟೆಲ್‌ಗಳಲ್ಲಿ 40 ರಿಂದ 50 ರೂ., ಸ್ಟಾರ್ ಹೋಟೆಲ್‌ಗಳಲ್ಲಿ 100 ರಿಂದ 150 ರೂ. ಹೊಸ ದರ ಪರಿಷ್ಕರಣೆಯಾಗಲಿದೆ ಎಂದು ಹೇಳಲಾಗುತ್ತಿದೆ.