Menu

ಭಾರತದವರನ್ನು ಮದುವೆಯಾಗಿರುವ ಪಾಕ್‌ನ 5 ಲಕ್ಷ ಯುವತಿಯರು ಪೌರತ್ವ ಪಡೆದಿಲ್ಲ

ಪಾಕಿಸ್ತಾನದ 5 ಲಕ್ಷ ಯುವತಿಯರು ಭಾರತದವರನ್ನು ಮದುವೆಯಾಗಿದ್ದರೂ ಇಲ್ಲಿಯವರೆಗೂ ಭಾರತದ ಪೌರತ್ವ ಪಡೆದಿಲ್ಲ. ಹೀಗಿರುವಾಗ ದೇಶದ ಒಳಗಿರುವ ಶತ್ರುಗಳ ಜತೆ ಹೋರಾಡುವುದು ಹೇಗೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಭಯೋತ್ಪಾದನೆಯ ಹೊಸ ಮುಖ ಈಗ ಹೊರಹೊಮ್ಮಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡು ಏಪ್ರಿಲ್ 27 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ದೀರ್ಘಾವಧಿಯ, ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳನ್ನು ಹೊರತುಪಡಿಸಿ ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ಎಲ್ಲಾ ವರ್ಗದ ವೀಸಾಗಳನ್ನು ರದ್ದುಗೊಳಿಸಿದೆ.

ಅಲ್ಪಾವಧಿಯ ವೀಸಾ ಹೊಂದಿದ್ದ ಒಟ್ಟು 537 ಪಾಕಿಸ್ತಾನಿ ಪ್ರಜೆಗಳು ಅತ್ತಾರಿ ಗಡಿಯ ಮೂಲಕ ಭಾರತವನ್ನು ತೊರೆದಿದ್ದಾರೆ, ಕಳೆದ ಮೂರು ದಿನಗಳಲ್ಲಿ 850 ಭಾರತೀಯ ಪ್ರಜೆಗಳು ಭಾರತಕ್ಕೆ ಮರಳಿದ್ದಾರೆ ಎಂದು ಅತ್ತಾರಿ ಗಡಿಯ ಪ್ರೋಟೋಕಾಲ್ ಅಧಿಕಾರಿ ಅರುಣ್ ಪಾಲ್ ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಸ್ಥಳದಲ್ಲಿ ನಿಯೋಜಿಸಲಾದ ಎನ್‌ಐಎ ತಂಡ ಸಾಕ್ಷ್ಯಗಳಿಗಾಗಿ ಹುಡುಕಾಟ ತೀವ್ರಗೊಳಿಸಿವೆ. ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಐಜಿ, ಡಿಐಜಿ ಮತ್ತು ಎಸ್‌ಪಿ ನೇತೃತ್ವದ ತಂಡಗಳು ಏಪ್ರಿಲ್ 22 ರ ದಾಳಿಯನ್ನು ಕಂಡ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸುತ್ತಿವೆ. ಜಮ್ಮು ಕಾಶ್ಮೀರ ಸರ್ಕಾರವು 48 ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದೆ.

Related Posts

Leave a Reply

Your email address will not be published. Required fields are marked *