Saturday, January 31, 2026
Menu

ರಾಜ್ಯದಲ್ಲಿ 432 ಮಂದಿ ಅಕ್ರಮ: ವಲಸಿಗರು ಪತ್ತೆ 255 ಮಂದಿ ಗಡೀಪಾರು

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೇರಿ ವಿವಿಧ ದೇಶಗಳಿಂದ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿದ್ದ 432 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ 255 ಮಂದಿಯನ್ನ ಗಡೀಪಾರು ಮಾಡಲಾಗಿದೆ.

ನಗರದ ಹೊರವಲಯದಲ್ಲಿ ಅಕ್ರಮವಾಗಿ ನೆಲೆಸಿದ್ದ 53 ಮಂದಿ ಬಾಂಗ್ಲಾದೇಶಿಯರನ್ನು ಇತ್ತೀಚೆಗೆ ಪೊಲೀಸರು ಪತ್ತೆ ಹಚ್ಚಿದ್ದರು. ಅನಧಿಕೃವಾಗಿ ರಾಜಧಾನಿಯಲ್ಲಿ ಬಾಂಗ್ಲಾ ನುಸುಳುಕೋರರ ವಿರುದ್ಧ ವಿಳಂಬವಾಗಿ ಕ್ರಮ ಕೈಗೊಂಡಿರುವ ಬಗ್ಗೆ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿತ್ತು. ಈ ಬೆನ್ನಲ್ಲೇ, ಬಾಂಗ್ಲಾದೇಶ ಸೇರಿ ವಿವಿಧ ದೇಶಗಳಿಂದ ಬಂದು ರಾಜ್ಯದಲ್ಲಿ ಬೀಡುಬಿಟ್ಟಿದ್ದ ಅಕ್ರಮ ವಲಸಿಗರ ಪತ್ತೆ, ಗಡಿಪಾರು ಹಾಗೂ ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಲುಕ್ ಔಟ್ ನೋಟಿಸ್

ಕಳೆದ ಮೂರು ವರ್ಷಗಳಲ್ಲಿ 432 ಅಕ್ರಮ ವಲಸಿಗರನ್ನು ಪತ್ತೆ ಮಾಡಲಾಗಿದೆ. ಇದರ ಪೈಕಿ 370 ಮಂದಿ ಬಾಂಗ್ಲಾದೇಶದವರಾಗಿದ್ದಾರೆ. ಅಲ್ಲದೆ, ಪಾಕಿಸ್ತಾನದ 16 ಹಾಗೂ ಶ್ರೀಲಂಕಾದ 42 ಮಂದಿ ಇದ್ದಾರೆ. ಮೂರು ವರ್ಷಗಳಲ್ಲಿ 255 ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ. 178 ಜನರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇವರ ವಿರುದ್ದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಕೆಲವರನ್ನು ಡಿಟೆಕ್ಷನ್ ಸೆಂಟರ್​ಗಳಿಗೆ ಕಳುಹಿಸಿದ್ದರೆ, ಇತರ ತಲೆಮರೆಸಿಕೊಂಡಿರುವವರ ವಿರುದ್ಧ ದೇಶವನ್ನು ಬಿಟ್ಟು ಹೋಗದಂತೆ ಲುಕ್ ಔಟ್ ನೋಟಿಸ್ (ಎಲ್​ಓಸಿ) ಹೊರಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಆಧಾರ್ ವಿರುದ್ಧ ಕೇಸ್

ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸ್​ ಠಾಣಾ ಮಟ್ಟದಲ್ಲಿ ಪತ್ತೆ ದಳ ರಚಿಸಲಾಗಿದೆ. ಅನುಮಾನಾಸ್ಪದ ವಿದೇಶಿಯರು ಕಂಡುಬಂದರೆ ಪಾಸ್​ಪೋರ್ಟ್ ಹಾಗೂ ವೀಸಾ ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬಾಂಗ್ಲಾದೇಶಿಯರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಸಿದ ಆರೋಪದ ಮೇಲೆ ಐವರ ವಿರುದ್ಧ ನಾಲ್ಕು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *