Wednesday, August 06, 2025
Menu

ಹಿಮಾಚಲ ಪ್ರದೇಶದಲ್ಲಿ ಜಿಪ್ ಲೈನ್ ಮೂಲಕ 413 ಯಾತ್ರಿಕರ ರಕ್ಷಣೆ!

himachal pradesh

ಮೇಘಸ್ಫೋಟ ಹಾಗೂ ಭಾರೀ ಮಳೆಯಿಂದ ಹಿಮಾಚಲ ಪ್ರದೇಶದ ಕಿನ್ನೌರ್ ಕೈಲಾಸ ಪರ್ವತ ಚಾರಣ ನಡೆಸುತ್ತಿದ್ದ 400ಕ್ಕೂ ಹೆಚ್ಚು ಯಾತ್ರಿಕರನ್ನು ರಕ್ಷಿಸಲಾಗಿದೆ.

ಬುಧವಾರ ಕಿನ್ನೌರ್ ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಸೃಷ್ಟಿಯಾದ ಪ್ರವಾಹದಿಂದ ಟ್ಯಾಂಗ್ಲಿಂಗ್ ಡ್ರೈನ್ 2 ತಾತ್ಕಾಲಿಕ ಸೇತುವೆಗಳು ಕುಸಿದುಬಿದ್ದಿವೆ. ಇದರಿಂದ ಕೈಲಾಸ ಚಾರಣಕ್ಕೆ ತೆರಳಿದ್ದ 413 ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದರು.

ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ಜೊತೆಗೆ ಇಂಡೋ-ಟಿಬೆಟಿಯನ್ ಗಡಿ ಪೊಲೀಸರು (ಐಟಿಬಿಪಿ) ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಜಿಪ್ ಲೈನ್ ಮೂಲಕ 400ಕ್ಕೂ ಹೆಚ್ಚು ಯಾತ್ರಿಕರನ್ನು ರಕ್ಷಿಸಿದ್ದಾರೆ.

ಪರ್ವತಾರೋಹಣ ಮತ್ತು ಆರ್‌ಆರ್‌ಸಿ (ಹಗ್ಗ ರಕ್ಷಣೆ ಮತ್ತು ಹತ್ತುವಿಕೆ) ಉಪಕರಣಗಳು, ಹತ್ತಲು, ಹಿಮನದಿಗಳನ್ನು ದಾಟಲು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ಅಗತ್ಯವಾದ ಗೇರ್‌ಗಳು, ಪರ್ವತಾರೋಹಣ ಬೂಟುಗಳು, ಕ್ರ್ಯಾಂಪನ್‌ಗಳು, ಐಸ್ ಅಕ್ಷಗಳು, ಹಗ್ಗಗಳು, ಸರಂಜಾಮುಗಳು ಮತ್ತು ಬಿರುಕು ರಕ್ಷಣಾ ಉಪಕರಣಗಳನ್ನು ಹೊತ್ತು ಕಠಿಣ ಪ್ರದೇಶಕ್ಕೆ ರಕ್ಷಣಾ ಸಿಬ್ಬಂದಿ ತಲುಪಿದೆ.

ರಕ್ಷಣಾ ಕಾರ್ಯಾಚರಣೆಯ ರೋಚಕ ದೃಶ್ಯಗಳನ್ನು ಭದ್ರತಾ ಸಿಬ್ಬಂದಿ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಯಾತ್ರಿಕರನ್ನು ಜಿಪ್‌ಲೈನ್‌ನಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದನ್ನು ಈವೀಡಿಯೋಗಳಲ್ಲಿ ವೀಕ್ಷಿಸಬಹುದು. ವೀಡಿಯೊಗಳಲ್ಲಿ ಒಂದರಲ್ಲಿ ಕಂಡುಬರುವಂತೆ ಐಟಿಬಿಪಿ ಹಗ್ಗದ ಪಾರುಗಾಣಿಕಾ ಅಡ್ಡ ದಾಟುವ ತಂತ್ರವನ್ನು ಬಳಸಲಾಗಿದೆ.

Related Posts

Leave a Reply

Your email address will not be published. Required fields are marked *