ಹೊಸ ವರ್ಷದ ಸಂಭ್ರಮ ಆಚರಣೆ ವೇಳೆ ಸ್ವಿಜರ್ಲೆಂಡ್ ನ ಬಾರ್ ನಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ 40 ಮಂದಿ ಮೃತಪಟ್ಟಿದ್ದಾರೆ.
ಬುಧವಾರ ತಡರಾತ್ರಿ ಕ್ರಾನ್ಸ್ ಮೊಂಟಾನಾ ಎಂಬಲ್ಲಿ ಸ್ಕೀ ರೆಸಾರ್ಟ್ (ಪರ್ವತಾರೋಹಿಗಳ ರೆಸಾರ್ಟ್) ಲೇ ಕಾನ್ಸಲ್ಟೇಷನ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ 100ಕ್ಕೂ ಹೆಚ್ಚು ಮಂದಿ ಪಾರ್ಟಿ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ದುರಂತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಚಳಿ ಕಾಯಿಲು ಕಾಡಿನ ನಡವೆ ಬೆಂಕಿ ಹಚ್ಚಿದ್ದರಿಂದ ದುರಂತ ಸಂಭವಿಸಿದೆ ಎಂದ್ ಮಾಧ್ಯಮವೊಂದು ವರದಿ ಮಾಡಿದರೆ, ಹೊಸ ವರ್ಷಾಚರಣೆ ವೇಳೆ ಪಟಾಕಿ ಹೊಡೆದಿದ್ದರಿಂದ ಈ ಘಟನೆ ಆಗಿದೆ ಎಂದು ಮತ್ತೊಂದು ಮಾಧ್ಯಮ ವರದಿ ಮಾಡಿದೆ.
ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ದಟ್ಟ ಹೊಗೆ ಹಾಗೂ ಬೆಂಕಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಘಟನೆಯಲ್ಲಿ ಹಲವು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಭಧ್ರತಾ ಸಿಬ್ಬಂದಿ ತಿಳಿಸಿದ್ದಾರೆ.


