Menu

3ನೇ T20: ವೆಸ್ಟ್‌ ಇಂಡೀಸ್‌ ವಿರುದ್ಧ ದಾಖಲೆಯ ಜಯ ಗಳಿಸಿದ ಆಸ್ಟ್ರೇಲಿಯಾ

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 215 ರನ್​ಗಳನ್ನು ಬೆನ್ನತ್ತಿ ಗೆದ್ದಿದ್ದ ಆಸ್ಟ್ರೇಲಿಯಾ ತಂಡವು ಇದೀಗ ನಾಲ್ಕನೇ ಟಿ20 ಪಂದ್ಯದಲ್ಲಿ 206 ರನ್​ಗಳನ್ನು ಗಳಿಸಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಾರಿ 200+ ಸ್ಕೋರ್ ಗೆದ್ದ ತಂಡವೆಂಬ ಹೆಗ್ಗಳಿಕೆ ಆಸ್ಟ್ರೇಲಿಯಾ ತಂಡಕ್ಕೆ ಸೇರಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ 205 ರನ್​ ಕಲೆಹಾಕಿದ್ದರೆ, ಈ ಗುರಿಯನ್ನು ಆಸ್ಟ್ರೇಲಿಯಾ ತಂಡ 19.2 ಓವರ್​ಗಳಲ್ಲಿ ಬೆನ್ನತ್ತಿ 3 ವಿಕೆಟ್​ಗಳ ಗೆಲುವು ದಾಖಲಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಬಾರಿ 200+ ರನ್​ಗಳನ್ನು ಗಳಿಸಿ ಆಸ್ಟ್ರೇಲಿಯಾ ತಂಡ ಹೊಸ ದಾಖಲೆ ಮಾಡಿದೆ. ಆಸೀಸ್ ಪಡೆ ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಬ್ರೇಕ್‌ ಮಾಡಿದೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು 5 ಬಾರಿ 200 ಕ್ಕೂ ಅಧಿಕ ರನ್​ಗಳ ಗುರಿಯನ್ನು ಬೆನ್ನತ್ತಿ ಜಯ ಗಳಿಸಿ ಉಭಯ ತಂಡಗಳು ಯಶಸ್ವಿ ರನ್ ಚೇಸರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದವು. ಇದೀಗ ಈ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾ ಪಡೆ ಅಳಿಸಿದೆ.

ಆಸ್ಟ್ರೇಲಿಯಾ ತಂಡವು ನ್ಯೂಝಿಲೆಂಡ್ ವಿರುದ್ಧ ಈ ಹಿಂದೆ 244 ಹಾಗೂ 216 ರನ್​ಗಳನ್ನು ಬೆನ್ನತ್ತಿ ಗೆದ್ದಿದ್ದರು. ಭಾರತದ ವಿರುದ್ಧ 223 ಹಾಗೂ 209 ರನ್​ಗಳನ್ನು ಗೆದ್ದಿದ್ದರು. ಸೌತ್ ಆಫ್ರಿಕಾ ವಿರುದ್ಧ 205 ರನ್​ಗಳ ಗುರಿಯನ್ನು ಬೆನ್ನಟ್ಟಿದ್ದರು. ವೆಸ್ಟ್ ಇಂಡೀಸ್ ವಿರುದ್ಧ 205, 215 ಹಾಗೂ 206 ರನ್​ಗಳನ್ನು ಗೆದ್ದಿದ್ದಾರೆ. ಈ ಮೂಲಕ ಒಟ್ಟು 7 ಬಾರಿ 200 ಪ್ಲಸ್ ಗುರಿಯನ್ನು ಗೆದ್ದು ಆಸ್ಟ್ರೇಲಿಯಾ ಹೊಸ ವಿಶ್ವ ದಾಖಲೆ ಬರೆದಿದೆ.

Related Posts

Leave a Reply

Your email address will not be published. Required fields are marked *