Sunday, September 28, 2025
Menu

BEL ನೇಮಕಾತಿ 2025: 35 ಟ್ರೈನಿ ಇಂಜಿನಿಯರ್ ಹುದ್ದೆಗಳ ನೇಮಕಾತಿ; ಸೆಪ್ಟೆಂಬರ್ 26ರಂದು ನೇರ ಸಂದರ್ಶನ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (BEL) ತನ್ನ ಗಾಜಿಯಾಬಾದ್‌ನ ಕೇಂದ್ರ ಸಂಶೋಧನಾ ಪ್ರಯೋಗಾಲಯದಲ್ಲಿ (CRL) 35 ಟ್ರೈನಿ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳಿಗಾಗಿ ಸೆಪ್ಟೆಂಬರ್ 26, 2025 ರಂದು ವಾಕ್-ಇನ್ ಸಂದರ್ಶನ ನಡೆಯಲಿದೆ.
ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಎಂಜಿನಿಯರಿಂಗ್, ಐಟಿ, ಮಾಹಿತಿ ವಿಜ್ಞಾನ, ಸಾಫ್ಟ್‌ವೇರ್ ಎಂಜಿನಿಯರಿಂಗ್ ಅಥವಾ ಸೈಬರ್ ಸೆಕ್ಯುರಿಟಿಯಲ್ಲಿ B.E./B.Tech ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ವಯಸ್ಸಿನ ಮಿತಿ ಮತ್ತು ಮೀಸಲಾತಿ
•ಸಾಮಾನ್ಯ ಅಭ್ಯರ್ಥಿಗಳು: ಗರಿಷ್ಠ 28 ವರ್ಷ (ಸೆಪ್ಟೆಂಬರ್ 1, 2025ರ ಒಳಗಾಗಿ).
•OBC: 3 ವರ್ಷ ಸಡಿಲಿಕೆ.
•SC/ST: 5 ವರ್ಷ ಸಡಿಲಿಕೆ.
•PwBD: 10 ವರ್ಷ ಸಡಿಲಿಕೆ.
ಒಟ್ಟು 35 ಹುದ್ದೆಗಳ ಪೈಕಿ – 16 ಸಾಮಾನ್ಯ, 3 ಇಡಬ್ಲ್ಯೂ ಎಸ್ , 9 OBC, 5 SC ಮತ್ತು 2 ST ಅಭ್ಯರ್ಥಿಗಳಿಗೆ ಮೀಸಲಾಗಿದೆ.
ಸಂಬಳ ಮತ್ತು ಸವಲತ್ತುಗಳು
•ಪ್ರಥಮ ವರ್ಷ: ರೂ 30,000
•ದ್ವಿತೀಯ ವರ್ಷ: ರೂ 35,000
•ತೃತೀಯ ವರ್ಷ: ರೂ 40,000
ಹೆಚ್ಚುವರಿಯಾಗಿ ವರ್ಷಕ್ಕೆ ರೂ 12,000 ವೈದ್ಯಕೀಯ ಮತ್ತು ಇತರೆ ಅಗತ್ಯಗಳಿಗೆ ನೀಡಲಾಗುತ್ತದೆ. ಅಧಿಕೃತ ಕೆಲಸಕ್ಕಾಗಿ ಹೊರಹೋಗುವ ಸಂದರ್ಭದಲ್ಲಿ ₹150 ಊಟ ಭತ್ಯೆ ಹಾಗೂ ಮಾತೃತ್ವ ರಜೆಯಂತಹ ಸೌಲಭ್ಯಗಳೂ ಲಭ್ಯ.
ಆಯ್ಕೆ ಪ್ರಕ್ರಿಯೆ
ಈ ನೇಮಕಾತಿ ಸಂಪೂರ್ಣವಾಗಿ ವಾಕ್-ಇನ್ ಪ್ರಕ್ರಿಯೆಯ ಮೂಲಕ ನಡೆಯಲಿದೆ. ಅಭ್ಯರ್ಥಿಗಳು ಗಾಜಿಯಾಬಾದ್‌ನ BEL-CRL ಕಚೇರಿಗೆ ತೆರಳಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಭಾಗವಹಿಸಬೇಕಾಗುತ್ತದೆ.
 ಸಂದರ್ಶನ ದಿನಾಂಕ: ಸೆಪ್ಟೆಂಬರ್ 26, 2025
 ಸಮಯ: ಬೆಳಿಗ್ಗೆ 8:00 ಗಂಟೆ
ಸ್ಥಳ: BEL-CRL, ಗಾಜಿಯಾಬಾದ್
ಅರ್ಜಿ ಸಲ್ಲಿಸುವ ವಿಧಾನ
•BEL ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ QR ಕೋಡ್ ಬಳಸಿ ಪೂರ್ವ ನೋಂದಣಿ ಕಡ್ಡಾಯ.
•ನಂತರ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಬೇಕು.
•ಶುಲ್ಕವನ್ನು SBI Collect ಮೂಲಕ ಪಾವತಿಸಬೇಕು.
•ಸಂದರ್ಶನದ ದಿನ ಭರ್ತಿ ಮಾಡಿದ ಅರ್ಜಿ, ಫೋಟೋ, ಶೈಕ್ಷಣಿಕ ಪ್ರಮಾಣಪತ್ರಗಳು, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ), ವಯಸ್ಸಿನ ಪುರಾವೆ, ಸರ್ಕಾರಿ ಐಡಿ ಹಾಗೂ ಶುಲ್ಕ ರಶೀದಿ ಕಡ್ಡಾಯವಾಗಿ ಕೊಂಡೊಯ್ಯಬೇಕು.

Related Posts

Leave a Reply

Your email address will not be published. Required fields are marked *