Saturday, February 22, 2025
Menu

ಚಾಮುಂಡಿ ಬೆಟ್ಟದಲ್ಲಿ 35 ಎಕರೆ ಅರಣ್ಯನಾಶ!

ಅರಣ್ಯ ಇಲಾಖೆ ಸಿಬ್ಬಂದಿ ಸತತ 8 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಅಗ್ನಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 2 ದಿನಗಳ ಕಾಲ ಹಬ್ಬಿದ ಬೆಂಕಿಗೆ 35 ಎಕರೆ ಅರಣ್ಯ ನಾಶವಾಗಿದೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಇಲಾಖೆ ಡಿಸಿಎಫ್ ಡಾ.ಬಸವರಾಜ್, ಬೆಂಕಿ ಅವಘಡದಿಂದ ಯಾವುದೇ ಪ್ರಾಣಿಪಕ್ಷಿಗಳಿಗೆ ಜೀವ ಹಾನಿಯಾಗಿಲ್ಲ. ಸದ್ಯ ಬೆಟ್ಟದಲ್ಲಿ ಎರಡು ಮರಿ ಸೇರಿ 7 ಚಿರತೆ, ಜಿಂಕೆ, ಕಡವೆಗಳಿದ್ದು, ಅವು ಬೆಂಕಿಯಿಂದ ಪಾರಾಗಿವೆ ಎಂದರು.

ಚಾಮುಂಡಿ ಬೆಟ್ಟದಲ್ಲಿ ಬಿದ್ದ ಬೆಂಕಿ ಯಾರೋ ಕಿಡಿಗೇಡಿಗಳು ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೋ ಬಡಾವಣೆಯಿಂದ ಹಬ್ಬಿದೆ ಎಂಬ ಮಾಹಿತಿ ಇದೆ. ದಯವಿಟ್ಟು ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ಚಾಮುಂಡಿಬೆಟ್ಟದ ಪ್ರದೇಶದಲ್ಲಿ ಬೆಂಕಿ ಕಿಡಿ ಹೊತ್ತಿಸಬೇಡಿ ಮನವಿ ಮಾಡಿದರು.

ಗುರುವಾರ 12.30ಕ್ಕೆ ಮೂರು ಕಡೆ ಬೆಂಕಿ ಬಿದ್ದಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿದೆವು. ಗಾಳಿಯ ವೇಗ ಹಾಗೂ ಬಿಸಿಲಿನ ವಾತಾವರಣ ಹೆಚ್ಚಾಗಿದ್ದರಿಂದ ಬೆಂಕಿ ನಂದಿಸಲು ಕಷ್ಟವಾಯಿತು. ನಾವು ಎಷ್ಟೇ ಪ್ರಯತ್ನಪಟ್ಟರೂ ಆ ಸ್ಥಳಕ್ಕೆ ಹೋಗಲು ಕಷ್ಟವಾಯಿತು. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಜಯರಾಮ್, ಗುರುರಾಜ್, ಚಂದನ್ ತಡರಾತ್ರಿವರೆಗೂ ಬೆಂಕಿ ನಂದಿಸಲು ಶ್ರಮಹಾಕಿದ್ದು, ರಾತ್ರಿ ವೇಳೆಗೆ ಬೆಂಕಿ ಹತೋಟಿಗೆ ಬಂತು ಎಂದರು.

ನಿನ್ನೆ ರಾತ್ರಿ ವಾಚರ್ ಗಳ ೩ ತಂಡಗಳು ರಾತ್ರಿಯಿಡೀ ಚಾಮುಂಡಿಬೆಟ್ಟ ಅರಣ್ಯ ಪ್ರದೇಶಕ್ಕೆ ಕಾವಲಾಗಿದ್ದವು. ಬೆಳಗ್ಗೆ ವೇಳೆಗೆ ಎಲ್ಲಾ ಕಡೆ ಬೆಂಕಿ ಹತೋಟಿಗೆ ಬಂದಿದೆ. ಚಾಮುಂಡಿಬೆಟ್ಟ ಒಟ್ಟು 1516 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ 35 ಎಕರೆಯಷ್ಟು ಸುಟ್ಟಿದೆ. ಬೆಟ್ಟಕ್ಕೆ ನಾಲ್ಕು ಕಡೆ ಬೆಟ್ಟ ಪ್ರವೇಶಿಸಲು ರಸ್ತೆಯಿದ್ದು, ಬೆಂಕಿಯ ಕೆನ್ನಾಲಿಗೆಗೆ ದೇವಿಕೆರೆ, ಗೊಲ್ಲಹಳ್ಳ ಭಾಗದಲ್ಲಿ 35 ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ದಯವಿಟ್ಟು ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ಚಾಮುಂಡಿಬೆಟ್ಟದ ಪ್ರದೇಶದಲ್ಲಿ ಬೆಂಕಿ ಕಿಡಿ ಹೊತ್ತಿಸಬೇಡಿ ಎಂದು ಮನವಿ ಮಾಡಿದರು.

ಈಗಾಗಲೇ ರಾತ್ರಿ 10ರಿಂದ ಬೆಳ್ಳಗ್ಗೆ 6ರವರೆಗೆ ಬೆಟ್ಟದ ನಾಲ್ಕು ರಸ್ತೆ ಬಂದ್ ಮಾಡಿದ್ದು, ಬೇಸಿಗೆ ಮುಗಿಯುವವರೆಗೂ ಆರು ಗಂಟೆಯಿಂದಲೇ ರಸ್ತೆ ಬಂದ್ ಮಾಡುವ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಹೆಚ್ಚಿನ ಸಿಬ್ಬಂದಿಯನ್ನು ಕಣ್ಗಾವಲಿಗೆ ನಿಯೋಜಿಸಲಾಗುವುದು.

ಆದರೆ, ಬೆಟ್ಟದ 2023ರಿಂದಲೂ ಅರಣ್ಯದಲ್ಲಿ ಪ್ಲಾಸ್ಟಿಕ್ ಬಿಸಾಡುವುದು, ಬೆಂಕಿ ಕಿಡಿ ಹೊತ್ತಿಸುವುದು, ಕಸ ಎಸೆಯುವುದು ಸೇರಿ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳಿಗೆ 500 ರಿಂದ 2000ರವರೆಗೆ ದಂಡ ವಿಧಿಸಲಾಗುತ್ತಿದೆ ಈ ಘಟನೆ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದು, ಮಲೆಮಹದೇಶ್ವರ ದೇವಾಲಯದ ಇಂಭಾಗದ ಮೂಲಕ ಪ್ರವೇಶಿಸಲು ಅವಕಾಶವಿದೆ. ಹೀಗಾಗಿ ದನ ಮೇಯಿಸುವವರ ಮೇಲೂ ತೀವ್ರಾ ನಿಗವಹಿಸಲಾಗಿದೆ. ಅವರಿಂದಲೇ ಅನಾಹುತ ಸಂಭವಿಸಿದೆಯೇ ಇಲ್ಲವೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಡ್ರೋಣ್ ಮೂಲಕ ಬೆಂಕಿ ಮೂಲ ಪತ್ತೆ ಹಚ್ಚಿ ಹಾರಿಸಿದ್ದೇವೆ. ಸದ್ಯಕ್ಕೆ ಹೊಸ ಬೆಂಕಿ ಇಲ್ಲ. ಗೊಲ್ಲಹಳ್ಳ, ದೇವಿಕೆರೆ ಹಿಂಭಾಗ ಸದ್ಯ ಘಟನೆ ನಡೆದಿದೆ. 2018-19 ರಿಂದ ಯಾವುದೇ ಹಾನಿಯಾಗಿಲ್ಲ. ಕಳೆ, ಹುಲ್ಲು ಬೆಳೆದಿರುವುದು ಒಣಗಿದಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ನಿತ್ಯ ನಾಲ್ಕು ಮಾರ್ಗದಲ್ಲಿ 2ರಿಂದ ೬ ಸಾವಿರ ವಾಹನ ಸಂಚಾರ ಮಾಡುವುದರಿಂದ ಪ್ರವಾಸಿಗರು, ಭಕ್ತರ ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ ಬೆಂಕಿ ಕಿಡಿ ಎಸೆಯದಂತೆ ಕೋರಿದರು.

ಪ್ರತಿ ವರ್ಷ 65 ಕಿ.ಮೀಟರ್ ಬೆಟ್ಟ ರಸ್ತೆಯಲ್ಲಿ 8 ಮೀಟರ್ವರೆಗೆ ಫೈರ್ ಲೈನ್ ಮಾಡುತ್ತೇವೆ. ಈ ಬಾರಿ 5 ಕಿ.ಮೀಟರ್ ಹೆಚ್ಚುವರಿಯಾಗಿ ಹೊಸ ಬೆಂಕಿರೇಖೆ ಸಹ ಗುರುತಿಸಲಾಗಿದೆ. 1999-70ರಲ್ಲಿ 70 ಎಕರೆ ಅಗ್ನಿ ಅನಾಹುತ ಆಗಿದ್ದು ಬಿಟ್ಟರೆ ಈ ಬಾರಿಯೇ ಇಂತಹದೊಂದು ಅನುಹುತ ಆಗಿದೆ. ನಿನ್ನೆ ಕಾರ್ಯಾಚರಣೆಯಲ್ಲಿ 27 ಸಿಬ್ಬಂದಿ ಕಾರ್ಯನಿರ್ವಹಿಸಿದ್ದು, ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

Related Posts

Leave a Reply

Your email address will not be published. Required fields are marked *