ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಕೆಆರ್‌ಎಸ್ ಡ್ಯಾಂನ ಒಳಹರಿವು ಏರಿಕೆಯಾಗಿದೆ. ಜಲಾಶಯಕ್ಕೆ 33,052 ಕ್ಯೂಸೆಕ್ ಒಳಹರಿವು ಇದ್ದು, 31,550 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜನರು ಎಚ್ಚರಿಕೆ ವಹಿಸಬೇಕಾಗಿದೆ.
124.80 ಅಡಿಗಳ ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂ 124.54 ಅಡಿಗಳಷ್ಟು ಭರ್ತಿಯಾಗಿದೆ, 49.452 ಟಿಎಂಸಿ ಗರಿಷ್ಠ ಸಾಮರ್ಥ್ಯವಿರುವ ಡ್ಯಾಂನಲ್ಲಿ 49.089 ಟಿಎಂಸಿ ನೀರು ತುಂಬಿದೆ.
ಕೊಡಗು,ಹಾಸನ, ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲೂ ಭಾರಿ ಮಳೆ ಸುರಿಯುತ್ತಿದೆ. ಕರಾವಳಿಯಲ್ಲಿ ಇನ್ನೆಡರು ದಿನ ಬಿರುಗಾಳಿ ಸಹಿತ ಮಳೆಯಾಗಲಿದೆ. ರಾಜ್ಯದ ಹಲವೆಡೆ ಇನ್ನು ಐದು ದಿನ ಧಾರಾಕಾರ ಮಳೆಗೆ ಜನ ಹೈರಾಣಾಗಲಿದ್ದಾರೆ.