ನವದೆಹಲಿ: ಪಾಕಿಸ್ತಾನದ ಭಾರತದ ಮೇಲೆ 300ರಿಂದ 400 ಕ್ಷಿಪಣಿ ದಾಳಿ ನಡೆಸಿದ್ದು, ಈ ದಾಳಿಯನ್ನು ಭಾರತೀಯ ಸೇನೆ ಸಮರ್ಥವಾಗಿ ವಿಫಲಗೊಳಿಸಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಶುಕ್ರವಾರ ಮಾಹಿತಿ ನೀಡಿದ ಮಹಿಳಾ ಸೇನಾಧಿಕಾರಿಒಗಳು ಭಾರತದ ನಾಲ್ಕು ವಾಯುನೆಲೆ ಸೇರಿದಂತೆ 26 ಸ್ಥಳಗಳನ್ನು ಗುರಿಯಾಗಿಸಿ ದಾಳಿಗೆ ಯತ್ನ ನಡೆದಿದೆ. ದಾಳಿಯಲ್ಲಿ ಟರ್ಕಿ ಸೇರಿದಂತೆ ವಿವಿಧ ದೇಶಗಳ ಕ್ಷಿಪಣಿಗಳನ್ನು ಬಳಸಲಾಗಿದ್ದು, ಇವುಗಳನ್ನು ಸಮರ್ಥವಾಗಿ ವಿಫಲಗೊಳಿಸಲಾಗಿದೆ ಎಂದರು.
ಪಾಕಿಸ್ತಾನದ ಪ್ರಯಾಣಿಕ ವಿಮಾನಗಳು ಇರುವ ಜಾಗದಿಂದ ಕ್ಷಿಪಣಿ ದಾಳಿ ನಡೆಸಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಇದ್ದಿದ್ದರಿಂದ ಭಾರತ ತಾಳ್ಮೆಯಿಂದ ವರ್ತಿಸಿದ್ದು ಯಾವುದೇ ದಾಳಿ ನಡೆಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಅಮೃತಸರ ಸೇರಿದಂತೆ ಭಾರತದ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಆದರೆ ಭಾರತ ಈ ರೀತಿಯ ಯಾವುದೇ ದಾಳಿ ಮಾಡಿಲ್ಲ. ಆದರೆ ಭಾರತ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿದೆ ಎಂದು ಪಾಕಿಸ್ತಾನ ಸುಳ್ಳು ಸುದ್ದಿ ಹರಡುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಸ್ಪಷ್ಟಪಡಿಸಿದರು.