ಕಿರಿಯರ ನ್ಯಾಷನಲ್ ಗೇಮ್ಸ್ ಚಿನ್ನದ ಪದಕ ವಿಜೇತೆ 17 ವರ್ಷದ ವೇಟ್ ಲಿಫ್ಟರ್ ಅಭ್ಯಾಸದ ವೇಳೆ ಕುತ್ತಿಗೆ ಮೇಲೆ 270 ಕೆಜಿ ತೂಕದ ರಾಡ್ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಗುಜರಾತ್ ನಲ್ಲಿ ಸಂಭವಿಸಿದೆ.
ಮಹಿಳಾ ವೇಟ್ ಲಿಫ್ಟರ್ ಯಶ್ನಿಕಾ ಆಚಾರ್ಯ ಜಿಮ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ 270 ಕೆಜಿ ತೂಕದ ಭಾರ ಎತ್ತುವ ವೇಳೆ ರಾಡ್ ಬಿದ್ದಿದ್ದರಿಂದ ಕುತ್ತಿಗೆ ಮುರಿದು ಮೃತಪಟ್ಟಿದ್ದಾರೆ.
ಕುತ್ತಿಗೆ ಮೇಲೆ ರಾಡ್ ಬಿದ್ದಿದ್ದರಿಂದ ಕುಸಿದುಬಿದ್ದ ಯಶ್ನಿಕಾ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯದಲ್ಲೇ ಅಸುನೀಗಿದ್ದಾರೆ. ಅಭ್ಯಾಸ ಮಾಡಿಸುತ್ತಿದ್ದ ತರಬೇತುದಾರ ಕೂಡ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬದವರು ಯಾವುದೇ ದೂರು ದಾಖಲಿಸದ ಕಾರಣ ಪ್ರಕರಣ ದಾಖಲಾಗಿಲ್ಲ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.