Wednesday, November 05, 2025
Menu

ಹರಿಯಾಣದಲ್ಲಿ 25 ಲಕ್ಷ ಮತಗಳವು: ರಾಹುಲ್ ಗಾಂಧಿ ಹೊಸ ಬಾಂಬ್

rahul gandhi

ಕೇಂದ್ರ ಚುನಾವಣಾ ಆಯೋಗ ವಿರುದ್ಧ ಮತಗಳವು ಎಂಬ ಹೈಡ್ರೋಜನ್ ಬಾಂಬ್ ಗಳ ಮೇಲೆ ಬಾಂಬ್ ಹಾಕುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಹಾರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ಹೊಸ ಬಾಂಬ್ ಹಾಕಿದ್ದಾರೆ.

ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ 2 ಕೋಟಿ ಮತದಾನವಾಗಿದ್ದು, ಇದರಲ್ಲಿ 25 ಲಕ್ಷ ಕಳ್ಳ ಮತದಾನವಾಗಿದೆ. ಅಂದರೆ 8 ಮತಗಳ ಪೈಕಿ ನಕಲಿ ಮತವಾಗಿದ್ದು, ಒಟ್ಟಾರೆ ಶೇ.12.5ರಷ್ಟು ಮತಗಳವು ನಡೆದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ಬಳಿ ನಕಲಿ ಮತದಾರರನ್ನು ಡಿಲಿಟ್ ಮಾಡುವ ಅವಕಾಶವಿದೆ. ಅಂತಹ ಸಾಫ್ಟ್ ವೇರ್ ಇದೆ. ಆದರೆ ಅವರು ನಕಲಿ ಮತದಾರರನ್ನು ಡಿಲಿಟ್ ಮಾಡುವ ಬದಲು ನಿಜವಾದ ಮತದಾರರನ್ನು ಡಿಲಿಟ್ ಮಾಡಿ ನಕಲಿ ಮತದಾರರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಭಾರತದಲ್ಲಿ ನಡೆಯುವ ಮತದಾನದಲ್ಲಿ ವಿದೇಶೀಯರು ಕೂಡ ನಕಲಿ ಮತದಾನ ಮಾಡುತ್ತಿದ್ದಾರೆ. ಬ್ರೆಜಿಲ್ ರೂಪದರ್ಶಿ ಮ್ಯಥ್ಯೂಸ್ ಫೆರೆರೊ ಎಂಬಾಕೆ ಒಂದೇ ಕ್ಷೇತ್ರದಲ್ಲಿ ಸೀಮಾ, ಸರಸ್ವತಿ, ಸ್ವೀಟಿ ಎಂಬ ಹೆಸರು ಸೇರಿದಂತೆ 22 ಮಂದಿಯ ಮತ ಚಲಾಯಿಸಿದ್ದಾರೆ.

ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಲಿದೆ ಎಂದು ಹೇಳಿತ್ತು. ಆದರೆ ಬಿಜೆಪಿ ಗೆಲುವು ಸಾಧಿಸಿತ್ತು. ನಾವು ಪರಿಶೀಲಿಸಿದಾಗ ಬಿಜೆಪಿ ಗೆಲುವಿನ ಅಸಲಿಯತ್ತು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಭಾವಚಿತ್ರ ಹಾಗೂ ಬೇರೆ ಬೇರೆ ಹೆಸರುಗಳಿರುವ ಮತದಾರರ ಚೀಟಿ ಇವೆ. ಇದು ಹೇಗೆ ಸಾಧ್ಯ? ಅಂದರೆ ಬಿಜೆಪಿ ಗೆಲುವಿಗೆ ಕೇಂದ್ರ ಚುನಾವಣಾ ಆಯೋಗ ಸಹಕಾರ ನೀಡುತ್ತಿದೆ ಎಂಬುದು ಅಲ್ಲವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

Related Posts

Leave a Reply

Your email address will not be published. Required fields are marked *