ಈ ವರೆಗೆ ರಾಜ್ಯದಲ್ಲಿ ಒಟ್ಟು 22 ಸಕ್ರಿಯ ಕೋವಿಡ್ ಕೇಸ್ ಪತ್ತೆಯಾಗಿದ್ದುಮ ಆತಂಕ ಉಂಟು ಮಾಡಿದೆ. ಕಳೆದ ವಾರದಲ್ಲಿ 165 ಮಂದಿಗೆ ಕೊರೋನ ಟೆಸ್ಟ್ ಮಾಡಿದ್ದು, ಅದರಲ್ಲಿ 9 ಜನರಿಗೆ ಕೋವಿಡ್ ಪಾಸಿಟಿವ್ ಪತ್ತೆ ಆಗಿತ್ತು. ಮೇ ತಿಂಗಳಲ್ಲಿ 33 ಕೊರೋನ ಸೋಂಕು ಪ್ರಕರಣ ದೃಢಪಟ್ಟಿದ್ದು, ಇಲ್ಲಿಯವರೆಗೆ 22 ಸಕ್ರಿಯ ಕೊರೋನ ಸೋಂಕು ಪ್ರಕರಣ ವರದಿಯಾಗಿದೆ.
ದೇಶದಲ್ಲಿ ಒಟ್ಟು 257 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೇಸ್ಗಳಿವರುವುದಾಗಿ ಎರಡು ದಿನಗಳ ಹಿಂದೆ ವರದಿಯಾಗಿತ್ತು.
ರಾಜ್ಯದಲ್ಲಿ ಕೋವಿಡ್ನಿಂದ ಯಾರೂ ಆಸತ್ರೆಗೆ ದಾಖಲಾಗಿಲ್ಲ, ತೀವ್ರ ಲಕ್ಷಣಗಳು ಪತ್ತೆಯಾಗಿಲ್ಲ. ಹೀಗಾಗಿ ರೂಪಾಂತರಿ ಕೊರೋನದ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಹೇಳಿದೆ. ಚೀನಾ ಮತ್ತು ಸಿಂಗಾಪುರಗಳಲ್ಲಿ ಕೊರೋನ ರೂಪಾಂತರಿ ತಳಿ ವ್ಯಾಪಕವಾಗಿ ಹರಡುತ್ತಿದ್ದು, ಜಾಗತಿಕವಾಗಿ ಆತಂಕ ಸೃಷ್ಟಿಸಿದೆ.
ಮಂಡ್ಯ ಶಾಸಕ ರವಿ ಗಣಿಗ ಹೊಸ ವರ್ಷದ ಆಚರಣೆಗಾಗಿ ಚೀನಾ ಪ್ರವಾಸಕ್ಕೆ ತೆರಳಿದ್ದಾಗ ಚೀನಾದಲ್ಲಿ ಕೋವಿಡ್ ಮಾದರಿಯಲ್ಲೇ ಮತ್ತೆ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಚೀನಾದಲ್ಲಿ ಕೊಳಚೆ ನೀರಿನಲ್ಲೂ ಕೋವಿಡ್-19 ವೈರಸ್ ಪತ್ತೆಯಾಗಿದೆ. ಹೆಚ್ಚಿನ ಜನರು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು.