Tuesday, September 16, 2025
Menu

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದಲ್ಲಿ ಈ ವರ್ಷ 17 ಮಂದಿ ಬಲಿ

ಕೇರಳದಲ್ಲಿ ಮಾರಕವಾದ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್‌ನ ಹೊಸ ಪ್ರಕರಣ ವರದಿಯಾಗಿದ್ದು, ತಿರುವನಂತಪುರಂನಲ್ಲಿ 17 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಈ ವರ್ಷ ಇಲ್ಲಿಯವರೆಗೆ ಈ ಸೋಂಕಿನಿಂದ 17 ಜನರು ಮೃತಪಟ್ಟಿದ್ದಾರೆ.

ಒಟ್ಟು 67 ಜನರು ಮೆದುಳು ತಿನ್ನುವ ಅಮೀಬಾದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಎಚ್‌ಎಸ್) ದೃಢಪಡಿಸಿದೆ. ಸೆಪ್ಟೆಂಬರ್ 12ರಂದು ಎರಡು ಹೊಸ ಪ್ರಕರಣಗಳು ವರದಿಯಾಗಿದ್ದು, ಈ ತಿಂಗಳ 19 ಪ್ರಕರಣಗಳಲ್ಲಿ 7 ಸಾವು ಸಂಭವಿಸಿವೆ.

ಆರೋಗ್ಯ ಇಲಾಖೆಯು ಅಕ್ಕುಳಮ್ ಪ್ರವಾಸಿ ಗ್ರಾಮದಲ್ಲಿ ಈಜುಕೊಳವನ್ನು ಮುಚ್ಚಿ ಪರೀಕ್ಷೆಗಾಗಿ ನೀರಿನ ಮಾದರಿಗಳನ್ನು ಸಂಗ್ರಹಿಸಿದೆ. ಹಿಂದಿನ ದಿನ ಸ್ನೇಹಿತರೊಂದಿಗೆ ಈಜುಕೊಳಕ್ಕೆ ಭೇಟಿ ನೀಡಿಅಲ್ಲಿ ಸ್ನಾನ ಮಾಡಿದ್ದ ಬಾಲಕನಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಅನ್ನು ಎದುರಿಸಲು ಕಟ್ಟುನಿಟ್ಟಿನ ಕ್ರಮಗಳ ತುರ್ತು ಅಗತ್ಯವಿದೆ ಎಂದಿದ್ದಾರೆ. ಸಾರ್ವಜನಿಕರು ನೀರಿನ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಎಚ್ಚರ ವಹಿಸಲು ಸಲಹೆ ನೀಡಿದ್ದಾರೆ.

ಬಾವಿಗಳನ್ನು, ಈಜುಕೊಳಗಳನ್ನು ಸರಿಯಾಗಿ ಕ್ಲೋರಿನೀಕರಿಸಬೇಕು. ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿ ಇಡಬೇಕು ಎಂದು ಸಚಿವರು ಹೇಳಿದ್ದಾರೆ. ಮನೆಗಳಲ್ಲಿ ನೀರಿನ ಸಂಗ್ರಹಣಾ ಪರಿಕರಗಳನ್ನು ಸ್ವಚ್ಛವಾಗಿಡಬೇಕು. ಅಮೀಬಾ ಮೂಗಿನ ಮೂಲಕ ಮೆದುಳನ್ನು ಪ್ರವೇಶಿಸುತ್ತದೆ, ನೀರು ನಿಮ್ಮ ಮೂಗಿಗೆ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *