Menu

ಒಂದೇ ದಿನ 17 ಬಿರ್ಲಾ ಒಪಸ್ ಪೇಂಟ್ಸ್ ಹೊಸ ಫ್ರಾಂಚೈಸಿ ಆರಂಭ

birla paint

ಬೆಂಗಳೂರು: ಆದಿತ್ಯ ಬಿರ್ಲಾ ಸಮೂಹದ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಒಪಸ್ ಪೇಂಟ್ಸ್ ಕರ್ನಾಟಕದಲ್ಲಿ ಒಂದು ದಿನದಲ್ಲಿ 17 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಉದ್ಘಾಟಿಸುವ ಮೂಲಕ ಪ್ರಮುಖ ಮೈಲಿಗಲ್ಲು ಸಾಧಿಸಿದ್ದು ಇದರಿಂದ ರಾಜ್ಯದಾದ್ಯಂತ ಒಟ್ಟು 45 ಫ್ರಾಂಚೈಸಿ ಮಳಿಗೆಗಳಾಗಿವೆ.

ರಾಜ್ಯದಲ್ಲಿ ತನ್ನ ಪ್ರಾರಂಭಿಕ ಡೀಲರ್ ವ್ಯಾಪ್ತಿಯನ್ನು ವಿಸ್ತರಿಸುವ ಯಶಸ್ಸಿನ ಮೇಲೆ ನಿರ್ಮಿಸುತ್ತಿರುವ ಈ ಹೊಸ ಮಳಿಗೆಯು ಶ್ರೇಷ್ಠತೆ ಮತ್ತು ಅನುಕೂಲ ಪೂರೈಸುವ ಕಂಪನಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಹಾಗೂ ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟ ಮತ್ತು ಉನ್ನತ ಸೇವೆಗಳನ್ನು ನೀಡುತ್ತದೆ.

17 ಹೊಸ ಫ್ರಾಂಚೈಸಿ ಮಳಿಗೆಗಳು ಬೆಂಗಳೂರು, ಮೈಸೂರ, ಚಿಕ್ಕಮಗಳೂರು, ಹುಬ್ಬಳ್ಳಿ, ಗುಲ್ಬರ್ಗಾ ಮತ್ತು ಬಾಗಲಕೋಟೆಯಂತಹ ಪ್ರಮುಖ ನಗರಗಳಲ್ಲಿದ್ದು ಈ ಬ್ರಾಂಡ್ ಗ್ರಾಹಕರಿಗೆ ಉನ್ನತ ಗುಣಮಟ್ಟದ ಪೇಂಟ್ಸ್, ಆವಿಷ್ಕಾರಕ ಪರಿಹಾರಗಳು ಮತ್ತು ತಡೆರಹಿತ ಶಾಪಿಂಗ್ ಅನುಭವ ನೀಡುತ್ತದೆ. ಈ ವಿಸ್ತರಣೆಗಳು ಈ ಪ್ರದೇಶದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ ನಾಯಕತ್ವ ಸ್ಥಾನವನ್ನು ಮರು ದೃಢೀಕರಿಸುವುದಲ್ಲದೆ `ದುನಿಯಾ ಕೊ ರಂಗ್ ದೊ’ ಎಂಬ ತನ್ನ ಬದ್ಧತೆಯನ್ನು ಕೂಡಾ ಎತ್ತಿ ತೋರಿಸಿದ್ದು ಅನುಕೂಲ, ಆವಿಷ್ಕಾರ ಮತ್ತು ಪ್ರಾದೇಶಿಕ ಸಕ್ರಿಯತೆಗೆ ಆದ್ಯತೆ ನೀಡುತ್ತದೆ.

ಈ ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಇನ್-ಸ್ಟೋರ್ ಪೇಂಟ್ ಕನ್ಸಲ್ಟೆಂಟ್ ಗಳು ಉಚಿತವಾಗಿ ಲಭ್ಯವಿರುತ್ತಾರೆ ಮತ್ತು ಅವರ ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಬಣ್ಣ ಮತ್ತು ಶೇಡ್ ಸೆಲೆಕ್ಷನ್ ಟೈಲರ್ ಪಡೆಯಬಹುದು. ಈ ಫ್ರಾಂಚೈಸಿ ಮಳಿಗೆಗಳು ಪೂರ್ಣ ಉತ್ಪನ್ನದ ಪೋರ್ಟ್ ಫೋಲಿಯೊವನ್ನು ವಾಲ್ ಪೇಪರ್ ಗಳು ಮತ್ತು ಡಿಸೈನರ್ ಫಿನಿಷ್ ಗಳ ವಿಶೇಷ ಕೊಡುಗೆಗಳನ್ನು ಹೊಂದಿರುತ್ತವೆ. ಈ ಮಳಿಗೆಗಳು ವೈಯಕ್ತಿಕಗೊಳಿಸಿದ, ಒನ್-ಸ್ಟಾಪ್ ಪರಿಹಾರವನ್ನು ರಾಜ್ಯದಲ್ಲಿ ಎಲ್ಲ ಪೇಂಟಿಂಗ್ ಅಗತ್ಯಗಳಿಗೆ ನೀಡುತ್ತದೆ.

ಬಿರ್ಲಾ ಒಪಸ್ ಪೇಂಟ್ಸ್ ಹೆಮ್ಮೆಯಿಂದ ಕರ್ನಾಟಕದ ಉಜ್ವಲ ಸ್ಫೂರ್ತಿಯನ್ನು ತನ್ನ ಸೌಂದರ್ಯ ಮತ್ತು ಸಂಸ್ಕೃತಿಯಿಂದ ಸ್ಫೂರ್ತಿ ಪಡೆದ ಬಣ್ಣಗಳಿಂದ ಸಂಭ್ರಮಿಸುತ್ತದೆ. ಈ ಛಾಯೆಗಳನ್ನು ರಾಜ್ಯಕ್ಕೆ ಗೌರವವಾಗಿ ರಾಷ್ಟ್ರಮ‍ಟ್ಟದಲ್ಲಿ ಬಿಡುಗಡೆ ಮಾಡಲಾಗಿದ್ದು ಇದರಿಂದ ಭಾರತದಾದ್ಯಂತ ಗ್ರಾಹಕರು ಅವರ ಮನೆಗಳಲ್ಲಿ ಕರ್ನಾಟಕದ ಸ್ಫೂರ್ತಿಯ ಛಾಯೆಗಳಿಂದ ಅನುಭವ ಪಡೆಯಬಹುದು. ಕರ್ನಾಟಕದ ಈ ಆಳವಾದ, ಹಳ್ಳಿಗಾಡಿನ ಛಾಯೆಗಳಿಂದ ಹಂಪಿಯ ಸೂರ್ಯಾಸ್ತದ ತಟಸ್ಥ ಬಣ್ಣಗಳು ಮತ್ತು ಹಂಪಿಯ ದೋಣಿಯ ಈ ಛಾಯೆಗಳು ಈ ಪ್ರದೇಶದ ಮೇಲ್ಮೈಗಳು ಮತ್ತು ಪರಂಪರೆಯ ಅಂತಃಸ್ಸತ್ವ ಬಿಂಬಿಸುತ್ತವೆ. ಕರ್ನಾಟಕದ ಮೋಡಿಯ ಸ್ಪರ್ಶವನ್ನು ಭಾರತದಾದ್ಯಂತ ತರಲು ವಿನ್ಯಾಸಗೊಳಿಸಲಾಗಿದ್ದು ಈ ವಿಶೇಷ ಬಣ್ಣಗಳು ರಾಜ್ಯದ ವಾಸ್ತುಶಿಲ್ಪದ ಅದ್ಧೂರಿತನ, ನೈಸರ್ಗಿಕ ಸೌಂದರ್ಯ ಮತ್ತು ಉಜ್ವಲ ಸಂಪ್ರದಾಯಗಳನ್ನು ಬಿಂಬಿಸುತ್ತವೆ.

ಬಿರ್ಲಾ ಒಪಸ್ ಪೇಂಟ್ಸ್ ಸಿಇಒ ರಕ್ಷಿತ್ ಹರ್ಗವೆ, “ಕರ್ನಾಟಕವು ಬಿರ್ಲಾ ಒಪಸ್ ಪೇಂಟ್ಸ್ ಗೆ ಮಹತ್ತರ ಪ್ರಾಮುಖ್ಯತೆ ಹೊಂದಿದೆ ಮತ್ತು ಇಂದು ರಾಜ್ಯದಲ್ಲಿ 17 ಹೊಸ ಮಳಿಗೆಗಳ ಮೂಲಕ ನಮ್ಮ ಹೆಜ್ಜೆಗುರುತನ್ನು ವಿಸ್ತರಿಸಲು ನಾವು ಬಹಳ ಸಂತೋಷ ಹೊಂದಿದ್ದು ರಾಜ್ಯದಲ್ಲಿ ನಮ್ಮ ಫ್ರಾಂಚೈಸಿ ಹೆಜ್ಜೆ ಗುರುತನ್ನು 45ಕ್ಕೆ ಹೆಚ್ಚಿಸುತ್ತಿದ್ದೇವೆ. ಇದು ನಮಗೆ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಫ್ರಾಂಚೈಸಿ ಜಾಲವಾಗಲು ಸನ್ನದ್ಧವಾಗಿಸುತ್ತದೆ, ಅದು ದಕ್ಷಿಣ ಭಾರತದಲ್ಲಿ ನಮ್ಮ ಉಪಸ್ಥಿತಿಯನ್ನು ಸದೃಢಗೊಳಿಸುವುದೇ ಅಲ್ಲದೆ ದೇಶದಲ್ಲಿ ಮುಂಚೂಣಿಯ ಅಲಂಕಾರಿಕ ಪೇಂಟ್ಸ್ ಬ್ರಾಂಡ್ ಆಗುವ ನಮ್ಮ ಧ್ಯೇಯೋದ್ದೇಶವನ್ನು ಮರು ದೃಢೀಕರಿಸಿದೆ” ಎಂದರು.

ಅವರು, “ಪೇಂಟಿಂಗ್ ಬರೀ ಕೆಲಸಕ್ಕಿಂತ ಹೆಚ್ಚಿನದಾಗಿದೆ, ಇದು ಜೀವನಕ್ಕೆ ಸ್ಫೂರ್ತಿ ತರುವ ಮತ್ತು ಗುರಿಗಳನ್ನು ತರುವ ಸ್ಥಳಗಳನ್ನು ಸೃಷ್ಟಿಸುವುದಾಗಿದೆ. ಕರ್ನಾಟಕದಲ್ಲಿ ನಮ್ಮ ವಿಸ್ತರಿಸುತ್ತಿರುವ ಹೆಜ್ಜೆ ಗುರುತು ಆವಿಷ್ಕಾರ, ಅನುಕೂಲ ಮತ್ತು ಶ್ರೇಷ್ಠತೆಗೆ ನಮ್ಮ ಬದ್ಧತೆಯನ್ನು ಬಿಂಬಿಸುತ್ತದೆ. ನಾವು ನಮ್ಮ ಪ್ರೀಮಿಯಂ ಉತ್ಪನ್ನಗಳನ್ನು ಆವಿಷ್ಕರಿಸಲು ಗ್ರಾಹಕರನ್ನು ಸ್ವಾಗತಿಸಲು ಮತ್ತು ಈ ಹೊಸ ಫ್ರಾಂಚೈಸಿ ಮಳಿಗೆಗಳಲ್ಲಿ ನಮ್ಮ ವೈಯಕ್ತಿಕಗೊಳಿಸಿದ ಸೇವೆಗಳ ಅನುಭವ ನೀಡಲು ಉತ್ಸುಕರಾಗಿದ್ದೇವೆ” ಎಂದರು.

ಕರ್ನಾಟಕದಲ್ಲಿರುವ 17 ಹೊಸ ಫ್ರಾಂಚೈಸಿ ಮಳಿಗೆಗಳು ಸೋಮವಾರದಿಂದ ಶನಿವಾರದವರೆಗೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ತೆರೆದಿದ್ದು ತಡೆರಹಿತ ಅನುಭವ ಮತ್ತು ಪೇಂಟ್ ಆಯ್ಕೆಯಲ್ಲಿ ಪರಿಣಿತರ ಮಾರ್ಗದರ್ಶನ ನೀಡುತ್ತವೆ.

ಈ ಮಳಿಗೆಯ ವಿಸ್ತರಣೆಯು ಬಿರ್ಲಾ ಒಪಸ್ ಪೇಂಟ್ಸ್ ನ ಸದೃಢ ಪ್ರಗತಿಯ ಕಾರ್ಯತಂತ್ರಕ್ಕೆ ಪೂರಕವಾಗಿದ್ದು ಅದಕ್ಕೆ ಇದರ ಭಾರತದಾದ್ಯಂತ ವಿಸ್ತರಿಸಿರುವ ಅತ್ಯಾಧುನಿಕ, ಸ್ವಯಂಚಾಲಿತ ಉತ್ಪಾದನಾ ಘಟಕಗಳ ಬೆಂಬಲ ಹೊಂದಿದೆ. ಆರರಲ್ಲಿ ಐದು ಲೂಧಿಯಾನ, ಪಾಣಿಪಟ್, ಚೆಯ್ಯರ್, ಚಾಮರಾಜನಗರ ಮತ್ತು ಮಹಾದ್ ಗಳಲ್ಲಿ ಈಗಾಗಲೇ ಕಾರ್ಯಾಚರಣೆ ಮಾಡುತ್ತಿದ್ದು ಕಂಪನಿಯು ಇದರ ಉತ್ಪಾದನಾ ಸಾಮರ್ಥ್ಯವನ್ನು 1096 ಎಂ.ಎಲ್.ಪಿ.ಎ ಗೂ ಮೇಲ್ಪಟ್ಟು ಹೆಚ್ಚಿಸಿದ್ದು ಇದನ್ನು ಅನುಸ್ಥಾಪಿತ ಸಾಮರ್ಥ್ಯದಲ್ಲಿ ದ್ವಿತೀಯ ಅತ್ಯಂತ ದೊಡ್ಡ ಅಲಂಕಾರಿಕ ಪೇಂಟ್ಸ್ ಪ್ಲೇಯರ್ ಗಳಲ್ಲಿ ಒಂದಾಗಿಸಿದೆ.

Related Posts

Leave a Reply

Your email address will not be published. Required fields are marked *