ಭಾರತ ಸಿಂಧೂ ನದಿ ನೀರು ಹರಿಸುವುದನ್ನು ನಿಲ್ಲಿಸಿದರೆ ನಾವು ಅವರ ಉಸಿರು ನಿಲ್ಲಿಸುತ್ತೇವೆ ಎಂದು ಪಾಕಿಸ್ತಾನದ ಹನೀಫ್ ಅಬ್ಬಾಸಿ ಬಹಿರಂಗ ಸವಾಲು ಹಾಕಿದ್ದಾರೆ.
ಪಹಲ್ಗಾವ್ ನಲ್ಲಿ 26 ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ ನಂತರ ಭಾರತ ಪ್ರತಿಕಾರವಾಗಿ ನಡೆಸುವ ಭೀತಿ ಎದುರಿಸುತ್ತಿದೆ. ಅಲ್ಲದೇ ಸಿಂಧೂ ನದಿ ನೀರು ತಡೆ ಹಿಡಿಯುವ ಬೆದರಿಕೆ ಬೆನ್ನಲ್ಲೇ ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಈ ಹೇಳಿಕೆ ನೀಡಿದ್ದಾರೆ.
130 ಕ್ಷಿಪಣಿಗಳನ್ನು ಹೊತ್ತ ಘೋರಿ, ಶಹೀನ್ ಮತ್ತು ಘಜ್ನಿ ಕ್ಷಿಪಣಿಗಳು ಭಾರತದ ಮುಖಮಾಡಿ ನಿಂತಿವೆ. ಪಾಕಿಸ್ತಾನದ ಅಣುಬಾಂಬ್ ಗಳು ಪ್ರದರ್ಶನಕ್ಕೆ ಇಟ್ಟಿಲ್ಲ. ಯಾವುದೇ ಸಮಯದಲ್ಲಿ ತನ್ನ ಗುರಿ ತಲುಪಲು ಸಿದ್ಧವಾಗಿ ಇಡಲಾಗಿದೆ ಎಂದು ಅವರು ಹೇಳಿದರು.
ಭಾರತ ನದಿ ನೀರು ಹರಿಸುವುದನ್ನು ನಿಲ್ಲಿಸಿದರೆ ಯುದ್ಧಕ್ಕೆ ಸಿದ್ಧರಾಗಬೇಕು. ನಮ್ಮ ಬಳಿ ಇರುವ ಶಸ್ತ್ರಾಸ್ತ್ರ ಹಾಗೂ ಕ್ಷಿಪಣಿಗಳನ್ನು ಪ್ರದರ್ಶನಕ್ಕೆ ಇಟ್ಟಿಲ್ಲ. ಬದಲಾಗಿ ದೇಶದ ಹಲವು ಗೌಪ್ಯ ಸ್ಥಳಗಳಲ್ಲಿ ಇರಿಸಲಾಗಿದ್ದು, ಯಾವುದೇ ಸಮಯದಲ್ಲಿ ಶತ್ರು ರಾಷ್ಟ್ರವನ್ನು ಉಡಾಯಿಸಲು ಸಜ್ಜಾಗಿವೆ ಎಂದು ಹನೀಫ್ ಅಬ್ಬಾಸಿ ಹೇಳಿದ್ದಾರೆ.