Menu

ವೀರಶೈವ ಲಿಂಗಾಯತ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ಪ್ರಮುಖ ನಿರ್ಣಯ

lingayat swamiji

ದಾವಣಗೆರೆ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ನಡೆದ ವೀರಶೈವ ಲಿಂಗಾಯತ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

40 ವರ್ಷಗಳ ನಂತರ ನಡೆದ ಶಿವಾಚಾರ್ಯರ ಶೃಂಗ ಸಭೆಯ ಸಮಾರೋಪ ಸಮಾರಂಭ ನಡೆದಿದ್ದು, ಸಭೆಯಲ್ಲಿ ಜಾತಿಗಣತಿ ವೇಳೆ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂಬುದು ಸೇರಿದಂತೆ 12 ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಲಿಂಗಾಯತರಲ್ಲಿ ಯಾವುದೇ ಉಪಜಾತಿ ಇದ್ದರೂ ವೀರಶೈವರು ಜಾತಿ ಗಣತಿಯಲ್ಲಿ ಒಗ್ಗಟ್ಟು  ಪ್ರದರ್ಶಿಸಬೇಕು. ಈ ಮೂಲಕ ಲಿಂಗಾಯತ ಸಮುದಾಯದ ಜನಸಂಖ್ಯೆ ಕುಸಿಯದಂತೆ ನೋಡಿಕೊಳ್ಳಬೇಕು ಮತ್ತು ವಾಸ್ತವ ವರದಿಗೆ ಸಹಕರಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ರಂಭಾಪುರಿಶ್ರೀ ಮಾತನಾಡಿ, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ವೀರಶೈವ ಧರ್ಮ ಸ್ಥಾಪನೆ ಆಗಿದೆ. ಆಧುನಿಕ ಕಾಲದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಕ್ಷೇತ್ರ ಕಲುಷಿತವಾಗಿದೆ, ಧಾರ್ಮಿಕ ಕ್ಷೇತ್ರ ಹೊರತಾಗಿಲ್ಲ. ವೀರಶೈವ ಸಮುದಾಯದಲ್ಲಿ ನೂರಾರು ಒಳಪಂಗಡಗಳಿವೆ. ಕೆಲ ಒಳಪಂಗಡಗಳಿಗೆ ಮಾತ್ರ ರಾಜಕೀಯದಲ್ಲಿ ಅವಕಾಶ ಸಿಕ್ಕಿವೆ. ಈಗ ಜಾತಿಗೊಂದು ಮಠಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪಂಚಪೀಠಗಳು ಧೃತಿಗೆಡಬೇಕಾಗಿಲ್ಲ ಎಂದರು.

ಸಮುದಾಯದ ಬಲವರ್ಧನೆ ಪಂಚಪೀಠಗಳಿಂದ ಮಾತ್ರ ಸಾಧ್ಯ. ವೀರಶೈವ ಲಿಂಗಾಯತ ಮಠಾಧೀಶರನ್ನು ಒಂದೇ ವೇದಿಕೆಗೆ ತರುವ ಸಂಕಲ್ಪ. ಎಲ್ಲಾ ಪೀಠಾಚಾರ್ಯ ಹಾಗೂ ಶಿವಾಚಾರ್ಯ ಒಂದಾದರೆ. ವೀರಶೈವ ಲಿಂಗಾಯತರನ್ನ ಒಂದು ಮಾಡುವುದು ಕಷ್ಟವಲ್ಲ. ವೀರಶೈವ ಬೇರೆ ಲಿಂಗಾಯತವೇ ಬೇರೆ ಎಂಬ ಸಂದೇಶ ಸಾರಿದ್ರು. ವೀರಶೈವ, ಲಿಂಗಾಯತ ಬೇರೆ ಎಂದವರು ಚುನಾವಣೆಯಲ್ಲಿ ಸೋತರು. ಈಗ ಪಂಚಪೀಠಗಳು ಒಂದಾಗಿದೆ. ಇದು ಕ್ಷಣಿಕ ಖುಷಿ ಆಗಬಾರದು ಎಂದು ಕರೆ ನೀಡಿದರು.

Related Posts

Leave a Reply

Your email address will not be published. Required fields are marked *