ಶನಿವಾರ ಮತ್ತು ಭಾನುವಾರದ ರಜೆ, ಪ್ರಾದೇಶಿಕ ರಜೆಗಳೂ ಸೇರಿ ಅಕ್ಟೋಬರ್ ತಿಂಗಳಲ್ಲಿ 21 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಪ್ರಾದೇಶಿಕ ರಜೆಗಳಲ್ಲಿ ಕೆಲವು ರಜೆ ಕೆಲವು ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಕರ್ನಾಟಕದಲ್ಲಿ 11 ದಿನ ಬ್ಯಾಂಕ್‌ಗಳಿಗೆ ರಜೆ ಇದೆ. ಅಕ್ಟೋಬರ್ 1 ಬುಧವಾರ ಮಹಾನವಮಿ ದಿನ ಹೆಚ್ಚಿನ ಕಡೆ ರಜೆ.
ಅಕ್ಟೋಬರ್ 2, ಗುರುವಾರ ಗಾಂಧಿ ಜಯಂತಿ, ವಿಜಯದಶಮಿ ಸಾರ್ವತ್ರಿಕ ರಜೆ, ಅಕ್ಟೋಬರ್ 3 ಶುಕ್ರವಾರ, ಅಕ್ಟೋಬರ್ 4 ಶನಿವಾರ: ದುರ್ಗಾ ಪೂಜೆ, ಅಕ್ಟೋಬರ್ 5 ಭಾನುವಾರ, ಅಕ್ಟೋಬರ್ 6 ಸೋಮವಾರ ಲಕ್ಷ್ಮೀ ಪೂಜೆ. ಅಕ್ಟೋಬರ್ 7 ಮಂಗಳವಾರ ವಾಲ್ಮೀಕಿ ಜಯಂತಿ, ಅಕ್ಟೋಬರ್ 10 ಶುಕ್ರವಾರ: ಕರ್ವಾ ಚೌತ್, ಅಕ್ಟೋಬರ್ 11 ಎರಡನೇ ಶನಿವಾರ, ಅಕ್ಟೋಬರ್ 12 ಭಾನುವಾರ, ಅಕ್ಟೋಬರ್ 18 ಶನಿವಾರ ಕಟಿ ಬಿಹು, ಅಕ್ಟೋಬರ್ 19 ಭಾನುವಾರ, ಅಕ್ಟೋಬರ್ 20 ಸೋಮವಾರ ದೀಪಾವಳಿ, ಕಾಳಿ ಪೂಜೆ , ಅಕ್ಟೋಬರ್ 21 ಮಂಗಳವಾರ ದೀಪಾವಳಿ ಅಮಾವಾಸ್ಯ, ಗೋವರ್ಧನ ಪೂಜೆ, ಅಕ್ಟೋಬರ್ 22 ಬುಧವಾರ ದೀಪಾವಳಿ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಅಕ್ಟೋಬರ್ 23 ಗುರುವಾರ ಭಾಯಿ ದೂಜ್, ಲಕ್ಷ್ಮೀ ಪೂಜೆ, ಚಿತ್ರಗುಪ್ತ ಪೂಜೆ, ಅಕ್ಟೋಬರ್ 25 ನಾಲ್ಕನೇ ಶನಿವಾರ, ಅಕ್ಟೋಬರ್ 26 ಭಾನುವಾರ, ಅಕ್ಟೋಬರ್ 27 ಸೋಮವಾರ ಛಾತ್ ಪೂಜೆ , ಅಕ್ಟೋಬರ್ 28 ಮಂಗಳವಾರ ಛಾತ್ ಪೂಜೆ , ಅಕ್ಟೋಬರ್ 31 ಶುಕ್ರವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ರಜೆಗಳಿವೆ.
ಈ ದಿನಗಳಲ್ಲಿ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಆನ್ಲೈನಲ್ಲಿ ಲಭ್ಯ ಇರುತ್ತವೆ. ಕ್ಯಾಷ್ ಅಗತ್ಯ ಇದ್ದವರಿಗೆ 24 ಗಂಟೆ ಎಟಿಎಂಗಳು ತೆರೆದಿರುತ್ತವೆ.