ಮೈಸೂರು: ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ 26 ಮಂದಿ ಹತ್ಯೆಯಾದ ಜಮ್ಮು ಕಾಶ್ಮೀರದಲ್ಲಿ ಮೈಸೂರಿನ 10 ಮಂದಿ ಕಾಶ್ಮೀರದಲ್ಲಿ ಸಿಲುಕಿದ್ದಾರೆ.
ಸಚಿವ ಸಂತೋಷ್ ಲಾಡ್ ಕಾಶ್ಮೀರದಲ್ಲಿ ಸಿಲುಕಿರುವ ಮೈಸೂರಿನವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.
ಮೈಸೂರಿನ ಕೇಂದ್ರ ಅಂಚೆ ಕಚೇರಿಯ ಸೂಪರ್ ವೈಸರ್ ವಿಲೀಶ್, ಸುನೀತಾ ಹಾಗೂ ಕುಟುಂಬಸ್ಥರಾದ ಜೆ.ಪ್ರಸಾದ್, ಆಶಾ, ಲಕ್ಷ್ಮಿ ಹಾಗೂ ಮಕ್ಕಳು ಸೇರಿ 10 ಮಂದಿ ದೆಹಲಿ ಹಾಗೂ ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.
8 ದಿನದ ಪ್ರವಾಸ ಮುಗಿಸಿ ಏ.28ಕ್ಕೆ ಬರಬೇಕಿದ್ದ ಇವರು ಕಾಶ್ಮೀರಿ ಘಟನೆ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿ ಮೈಸೂರಿಗೆ ಬರಲು ನಿರ್ಧರಿಸಿದ್ದಾರೆ. ಈಗಾಗಲೇ ರಾಜ್ಯದ ಮೇಲಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಕಾಶ್ಮೀರದ ಟ್ರೆಡೆಂಟ್ ಹೋಟೆಲ್ ನಲ್ಲಿ ತಂಗಿರುವ ಇವರನ್ನು ಅಲ್ಲಿನ ಸಚಿವರು ಖುದ್ ಭೇಟಿ ನೀಡಿ ರಾಜ್ಯಕ್ಕೆ ಇಂದು ಸಂಜೆ ಅಥವಾ ಬೆಳ್ಳಗೆ ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ.
ಇನ್ನೂ ಘಟನೆ ವಿವರಿಸಿರುವ ವಲೀಶ್ ಸದ್ಯ ಇಲ್ಲಿ ಅಂಗಡಿ ಮುಗ್ಗಟ್ಟುಗಳೆಲ್ಲವೂ ಬಂದ್ ಆಗಿದ್ದು, ನಾವು ಹೋಟೆಲ್ ಒಳಗೆ ಇದ್ದೇವೆ. ಸಚಿವರು ಕಳುಹಿಸಿ ಕೊಡುವ ಭರವಸೆ ನೀಡಿದ್ದು ಸದ್ಯಕ್ಕೆ ನಾವಿರುವ ಜಾಗದಲ್ಲಿ ಯಾವುದೇ ಅಪಾಯ ಆಗಿಲ್ಲ ಎಂದು ತಿಳಿಸಿದ್ದಾರೆ.