ಚಳ್ಳಕೆರೆ : ವಿದ್ಯುತ್ ಕಡಿತ ವಿರೋಧಿಸಿ ಬೆಸ್ಕಾಂ ಕಚೇರಿ ಮುಂದೆ ಅಹೋರಾತ್ರಿ ಬಾಲೇನಹಳ್ಳಿ, ವಿದ್ಯುತ್ ಉಪಕೇಂದ್ರದ ಮುಂಭಾಗದಲ್ಲಿ ಭಾರತೀಯ ಕಿಸಾನ್ ಸಂಘ ಹಾಗೂ ನೂರಾರು ರೈತರು, ರೈತ ಮುಖಂಡರು ಬೆಸ್ಕಾಂಗೆ ಮುತ್ತಿಗೆ ಹಾಕಿ, ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ವಿದ್ಯುತ್ ಸರಬರಾಜ್ ಕೇಂದ್ರದ ಬಳಿ ಬುಧವಾರ ಸಂಜೆ 4 ಗಂಟೆಯಿಂದ ಜಮಾಯಿಸಿದ ರೈತ ಸಂಘದ ಅಪಾರ ಸಂಖ್ಯೆಯ ಅನ್ನದಾತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ರಸ್ತೆ ತಡೆನಡೆಸಿದರು ಚಿತ್ರದುರ್ಗ ಹಾಗೂ ಚಳ್ಳಕೆರೆ ಮಾರ್ಗವಾಗಿ ಸಂಚರಿಸುವ ವಾಹನಗಳು ಕಿ.ಮೀ ದೂರದವರೆ ನಿಂತು ವಾಹನಗಳ ಸವಾರರು ಹಾಗೂ ಪ್ರಯಾಣಿಕರು ಪ್ರತಿಭಟನೆ ಕಾವಿಗೆ ಸಿಲುಕಿ ಹೈರಾಣದರು.
ವಿದ್ಯುತ್ ಕಡಿತಗೊಳಿಸುವ ಪರಿಣಾಮ ವಿದ್ಯಾರ್ಥಿ ಹಾಗೂ ರೈತಾಪಿ ಮತ್ತು ಗೃಹಬಳಕೆಗೆ ತೀವ್ರ ಸಮಸ್ಯೆ ಎದುರಾಗಿದೆ. ಹಿಂದೆಂದೂ ಕಾಣದಂತಹ ವಿದ್ಯುತ್ ಸಮಸ್ಯೆ ಈ ಬಾರಿ ತಾಲೂಕಿನಲ್ಲಿ ಎದುರಾಗಿದೆ. ವಿದ್ಯುತ್ ಕಡಿತದ ಪರಿಣಾಮ ರೈತರ ಕೊಳವೆ ಬಾವಿ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗುತ್ತಿದ್ದು, ಟ್ರಾನ್ಸ್ ಫಾರ್ಮರ್ ದುರಸ್ತಿಗೆ ಹಣ ವಸೂಲಾತಿ ಹಾಗೂ ದುರಸ್ತಿ ವಿಳಂಬ ಪರಿಣಾಮ ನೀರಾವರಿ ಬೆಳೆಗಳು ನಷ್ಟಕ್ಕೀಡಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಮಳೆ ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದು ಶೋಚನೀಯ ಸ್ಥಿತಿ ಅನುಭವಿಸುತ್ತಿದ್ದಾರೆ. ಬೋರ್ ವೆಲ್ಗಳಲ್ಲಿ ನೀರು ಬತ್ತಿ ಹೋದ ಪರಿಣಾಮ, ಬೆಳೆ ಸಿಗದೆ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಜೀವನ ನಿರ್ವಹಣೆಗೆ, ರೈತರು ಹಾಗೂ ಕೃಷಿ ಕಾರ್ಮಿಕರು ನಗರ ಪ್ರದೇಶಗಳಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಪಸ್ವಲ್ಪ ಮಳೆಯಿಂದ ಬೆಳೆ ಸಂರಕ್ಷಣೆ ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಸಾಲಿನ ಮಳೆಯ ಕೊರತೆಯಿಂದ ಫಸಲಿಗೆ ಬಂದ ಬೆಳೆ ಸಂರ್ಪೂಣ ಒಣಗಿ ಹೋಗಿದೆ. ಬೆಳೆಗಾಗಿ ಸಾಲದ ಸುಳಿಗೆ ಸಿಕ್ಕಿ ರೈತ ನರಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.
ಚಳ್ಳಕೆರೆ ಅತಿಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದೆ. ಈಗಾಗಲೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ರೈತರ ಜಮೀನಿನಲ್ಲಿ ಒಣಗಿರುವ ಬೆಳೆ ಸಮೀಕ್ಷೆ ಮಾಡಿದ್ದಾರೆ. ಬರದ ಬಗ್ಗೆ ವರದಿ ಪಡೆದಿಲ್ಲ. ಸರ್ಕಾರದ ಸಹಭಾಗಿತ್ವದಲ್ಲಿ ಬೆಳೆ ಸಮೀಕ್ಷೆ ನಡೆಸಬೇಕೆಂದು ಕೇಂದ್ರ ಸರ್ಕಾರ ಆದೇಶ ಜಾರಿ ಮಾಡಿದೆ.
ತಾಲೂಕಿನಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನೆಯ ಘಟಕಗಳು ಇಲ್ಲಿ ಕಾರ್ಯರಂಭದಲ್ಲಿದ್ದರೂ ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿದೆ. ಸಮಸ್ಯೆ ಪರಿಶೀಲನೆ ನಡೆಸಿ ವಿದ್ಯುತ್ ಸಮಸ್ಯೆ ನಿವಾರಿಸಬೇಕು. ಬೆಳೆ ರಕ್ಷಣೆಗೆ ಸಾಧ್ಯವಾದಷ್ಟು ರೈತರ ಪಂಪ್ ಸೆಟ್ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು. ಕುಡಿವ ನೀರಿನ ಸಮಸ್ಯೆ ಗೋಶಾಲೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯುತ್ ಸರಬರಾಜ್ ಮಾಡುವಂತೆ ಆಗ್ರಹಿಸಿದರು. ಪದೇ ಪದೇ ವಿದ್ಯುತ್ ಸಮಸ್ಯೆ ಎದುರಾದರೆ ಸಂಸದರ ಚುನಾವಣೆ ಕೆಲವೇ ತಿಂಗಳು ಬಾಕಿ ಇದ್ದು ಚುನಾವಣೆಯಲ್ಲಿ ಅನ್ನದಾತರು ತಕ್ಕ ಪಾಠಕಲಿಸಲಾಗುವುದು ಎಂದು ಸರಕಾರಕ್ಕೆ ಎಚ್ವರಿಕೆ ನೀಡಿದ್ದಾರೆ.
ಬಾಲೇನಹಳ್ಳಿ ವಿದ್ಯು ಉಪಕೇಂದ್ರ ವ್ಯಾಪ್ತಿಯ ಹಳ್ಳಿಗಳಿಗೆ ಕಳೆದ ಒಂದು ವಾರದಿಂದ 16 ಗಂಟೆಗಳ ಕಾಲ ವಿದ್ಯುತ್ ಇರುತ್ತಿದ್ದು ಇದರಲ್ಲಿ 7 ಗಂಟೆ 3 ಫೇಸ್ ಉಳಿದ ತಾಸುಗಳು ಒಪನ್ ಡೆಲ್ಲ್ಟಾ ಇರುತ್ತಿದ್ದು ನಮ್ಮಲ್ಲಿ ಇರುವ ಬೆಳೆಗಳಿಗೆ ಸಾಲುತಿತ್ತು. ಆದರೆ ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳು ಇರುವುದರಿಂದ ಈಗ ಕೊಡುವ ನಾಲ್ಕು ಗಂಟೆ 3 ಫೇಸ್ಗೆ ನೀರು ಸಾಲದೇ ಒಣಗಿ ಹೋಗುತ್ತಿವೆ. ಸಾಕಷ್ಟು ರೈತರು ಅಡಿಕೆ ಬೆಳೆ ಹಾಕಿರುವುದರಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಾಟಕ್ಕೆ ಸಿಲುಕಿ ಬೆಳೆಗಳು ಕೈಕೊಡುವ ಬೀತಿ ಅನ್ನದಾತರಲ್ಲಿ ಮನೆಮಾಡಿದೆ.
ಬಿಸಿಲಿನ ತಾಪಕ್ಕೆ ಇತರ ಬೆಳೆಗಳು ಒಣಗಿ ಹೋಗಿವೆ ನಾವು ಕಳೆದ ವರ್ಷಗಳಿಂದ ಉಳಿಸಿಕೊಂಡು ಬಂದ ತೋಟಗಾರಿಕಾ ಬೆಳೆಗಳು ಉಳಿಸಿಕೊಳ್ಳಲು ಆಗದೆ ನಮ್ಮ ಕೃಷಿ ಜೀವನ ಅತಿ ದೊಡ್ಡ ಅರ್ಥಿಕ ಒಡತಕ್ಕೆ ಸಿಲುಕುತ್ತದೆ. ಅನಿವಾರ್ಯವಾಗಿ ಬೆಳೆಗಳನ್ನು ಉಳಿಸಿಕೊಳ್ಳು ವಿದ್ಯುತ್ ಗಾಗಿ ಅನಿರ್ಧಿಷ್ಟ ಕಾಲದವರೆಗೆ ಪ್ರತಿಭಟನೆ ಮಾಡಲಾಗುವುದು ಎಂದು ಅಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ರೇಹಾನ್ ಪಾಷ. ಪೋಲಿಸ್ ಅಧಿಕಾರಿಗಳು ಹಾಗೂ ಬೆಸ್ಕಾಂಅಧಿಕಾರಿಗಳು ಪ್ರತಿಭನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.