ಕಸದ ಸಮಸ್ಯೆಗೆ ಮುಕ್ತಿ ನೀಡುವ ಬಯೋಮೈನಿಂಗ್ ವಿಡಿಯೋ ಪ್ರಸ್ತುತಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್...
ಬೆಂಗಳೂರು : ಕಸದ ಸಮಸ್ಯೆಗೆ ಮುಕ್ತಿ ನೀಡುವ ಬಯೋಮೈನಿಂಗ್ಗೆ ಸಂಬಂಧಿಸಿದಂತೆ ಇಂದು ಕುಮಾರಕೃಪಾ ಅತಿಥಿಗೃಹದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಡಿಯೋ ಪ್ರಸ್ತುತಿ ವೀಕ್ಷಿಸಿದರು.
ರಾಜಧಾನಿ ಬೆಂಗಳೂರು ಗಾರ್ಡನ್ ಸಿಟಿ ಎನ್ನುವ ಕಿರೀಟ ಹೊತ್ತಿದ್ದರೂ ಕಸದ ಸಮಸ್ಯೆಯಿಂದ ಮುಕ್ತವಾಗಿಲ್ಲ. ವರ್ಷಗಳಿಂದ ನಿರ್ಮಾಣವಾಗಿರುವ ತ್ಯಾಜ್ಯದ ರಾಶಿಯನ್ನು ಕರಗಿಸಲು ಬಯೋಮೈನಿಂಗ್ ಒಂದು ಪರಿಹಾರವಾಗಿದೆ ಎಂದು ಹೇಳಿದರು.