ಬೆಳಗಾವಿ : ರಾಷ್ಟ್ರಪೀತ ಮಹಾತ್ಮಾ ಗಾಂಧಿ ಜಯಂತಿಯ ದಿನ ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿರುವ ಗುಂಡು ತುಂಡಿನ ಪಾರ್ಟಿ ಇಲಾಖೆಯ ಮಾನ ಹರಾಜು ಹಾಕಿದೆ.
ನಗರದ ವ್ಯಾಕ್ಸಿನ್ ಡಿಪೋ ಬಳಿ ಇರುವ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಸಿಬ್ಬಂದಿಗಳು ಗಾಂಧಿ ಜಯಂತಿ ದಿನದಂದು ಗುಂಡಿನ ಪಾರ್ಟಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ
ಗಾಂಧಿ ಜಯಂತಿ ದಿನದಂದು ಜಿಲ್ಲಾಡಳಿತ ಮದ್ಯ, ಮಾಂಸ ಮಾರಾಟ ನಿಷೇಧ ಮಾಡಿರುತ್ತದೆ. ಆದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುಂಡು, ತುಂಡು ಪಾರ್ಟಿ ಮಾಡಿರುವುದು ಗಮನಾರ್ಹ.
ಟಿಳಕವಾಡಿಯಲ್ಲಿರುವ ಡಿಎಚ್ಓ ಕಚೇರಿ ಹಿಂಭಾಗದ ಕೊಠಡಿಯಲ್ಲಿ ಡಿಎಚ್ಓ ಕಚೇರಿಯ ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿದ್ದು, ಗಾಂಧಿ ಫೋಟೋ ಎದುರೇ ಕುಡಿದು, ಕುಣಿದು ಕುಪ್ಪಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
7 ಸಿಬ್ಬಂದಿಗಳು ಸಸ್ಪೆಂಡ್ : ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಳೆದ ಐದಾರು ತಿಂಗಳ ಹಿಂದೆ ಮಾಡಿದ್ದ ಪಾರ್ಟಿ ವಿಡಿಯೋ ಇದಾಗಿದೆ. ಗಾಂಧಿ ಜಯಂತಿಯಂದು ನಡೆದಿದ್ದಲ್ಲ. ಆದರೆ ಪಾರ್ಟಿ ಮಾಡಿದ್ದ 7 ಸಿಬ್ಬಂದಿಗಳಾದ
ಕಾರು ಚಾಲಕ ಮಂಜುನಾಥ್ ಪಾಟೀಲ್, ಮಹೇಶ್ ಹಿರೇಮಠ, ಸತ್ಯಪ್ಪ ತಮ್ಮಣ್ಣವರ್, ಅನಿಲ್ ತಿಪ್ಪನ್ನವರ್, ರಮೇಶ್ ನಾಯಕ್, ಯಲ್ಲಪ್ಪ ಮುನವಳ್ಳಿ, ದೀಪಕ ಗಾವಡೆ ಸೇರಿದಂತೆ 7 ಜನರನ್ನು ಅಮಾನತು ಮಾಡಲಾಗಿದೆ.