ರಷ್ಯಾ ಮೇಲೆ ದಾಳಿಗೆ ಅಮೆರಿಕ ಸಜ್ಜು; ಅಣುಬಾಂಬ್ ಸಿದ್ಧತೆ ಆರಂಭಿಸಿದ ರಷ್ಯಾ!
ಉಕ್ರೇನ್ ಮೇಲಿನ ದಾಳಿಗೆ 1000 ದಿನಗಳು ಪೂರೈಸಿದ ಬೆನ್ನಲ್ಲೇ ಮೂರನೇ ಮಹಾಯುದ್ಧದ ಕಾರ್ಮೊಡ ಮತ್ತಷ್ಟು ದಟ್ಟವಾಗಿದ್ದು, ಜಗತ್ತಿನ ಎರಡು ಪ್ರಬಲ ರಾಷ್ಟ್ರಗಳ ನಡುವಿನ ಹಣಾಹಣಿಗೆ ವೇದಿಕೆ ಸಜ್ಜಾಗುತ್ತಿದೆ.
ಅಮೆರಿಕ ಅನುಮತಿ ನೀಡಿದ ಬೆನ್ನಲ್ಲೇ ಉಕ್ರೇನ್ ರಷ್ಯಾ ಮೇಲೆ ಅಮೆರಿಕದ ದೂರಗಾಮಿ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ 1000 ದಿನಗಳು ಪೂರೈಸಿದ ಬೆನ್ನಲ್ಲೇ ಅಮೆರಿಕ ನಿರ್ಗಮಿತ ಅಧ್ಯಕ್ಷ ಜೋ ಬಿಡೈನ್ ಅನುಮತಿ ನೀಡಿದ ಬೆನ್ನಲ್ಲೇ ಎಟಿಎಸಿಎಂಎಸ್ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ.
ಉಕ್ರೇನ್ ಗಡಿಯಿಂದ 130 ಕಿ.ಮೀ. ದೂರದಲ್ಲಿರುವ ರಷ್ಯಾದ ಬ್ರೈಸ್ನಕ್ ವಲಯದ ಸೇನಾ ಮೂಲಸೌಕರ್ಯದ ಪ್ರದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ರಷ್ಯಾ ಪ್ರದೇಶದ ಮೇಲೆ ನಡೆಸಿದ ಮೊದಲ ದಾಳಿ ಇದಾಗಿದ್ದು, ಯಶಸ್ವಿಯಾಗಿದೆ ಎಂದು ಉಕ್ರೇನ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಜೋ ಬಿಡೈನ್ ಉಕ್ರೇನ್ ಗೆ ಬೆಂಬಲವಾಗಿ ರಷ್ಯಾ ಮೇಲೆ ದಾಳಿ ನಡೆಸಲು ಸೇನೆಗೆ ಅನುಮತಿ ನೀಡಿದ್ದಾರೆ. ಈ ಸುದ್ದಿ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಮೇಲ್ದರ್ಜೆಗೇರಿಸಲು ಸೂಚಿಸುವ ಮೂಲಕ ಪ್ರತಿದಾಳಿಗೆ ಸಜ್ಜಾಗಿರುವ ಸುಳಿವು ನೀಡಿದ್ದರು. ಈ ಎಚ್ಚರಿಕೆ ಹೊರತಾಗಿಯೂ ಉಕ್ರೇನ್ ದಾಳಿ ನಡೆಸಿರುವುದು ೩ನೇ ಮಹಾಯುದ್ಧದ ಕಾರ್ಮೊಡ ಆವರಿಸಿದೆ.
ರಷ್ಯಾದ ಮಧ್ಯಭಾಗವನ್ನು ತಲುಪುವಂತಹ ದೂರಗಾಮಿ ಕ್ಷಿಪಣಿಗಳನ್ನು ಬಳಸಲು ಉಕ್ರೇನ್ ಗೆ ಅಮೆರಿಕ ಅನುಮತಿ ನೀಡಿದೆ. ಇದರಿಂದ ರಷ್ಯಾದ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಲು ಸೂಚಿಸಿದೆ.
ಅಮೆರಿಕ ನಿರ್ಮಿತ ದೂರಗಾಮಿ ಕ್ಷಿಪಣಿಗಳನ್ನು ಬಳಸಲು ಬಿಡೈನ್ ಸರ್ಕಾರ ಇದೇ ಮೊದಲ ಬಾರಿಗೆ ಅನುಮತಿ ನೀಡಿದೆ. ಆದರೆ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಅಧಿಕಾರ ಸ್ವೀಕರಿಸುವುದರಿಂದ ಅಲ್ಲಿಯವರೆಗೆ ಈ ಆದೇಶ ನಡೆಯಲಿದೆ.
ಇದರ ಬೆನ್ನಲ್ಲೇ ಪರಮಾಣು ಹೊಂದಿದ ರಾಷ್ಟ್ರಗಳು ಉಕ್ರೇನ್ ಗೆ ಬೆಂಬಲ ನೀಡಿದರೆ ನ್ಯೂಕ್ಲಿಯರ್ ರಹಿತ ದೇಶಗಳ ಮೇಲೆ ಪರಮಾಣು ದಾಳಿ ನಡೆಸಬಾರದು ಎಂದು ನಿಯಮವನ್ನು ಮುರಿಯಬೇಕಾಗುತ್ತದೆ. ಮತ್ತು ಇದಕ್ಕೆ ಪರಮಾಣು ಹೊಂದಿದ ರಾಷ್ಟ್ರಗಳು ಕೂಡ ಬೆಲೆ ತೆರಬೇಕಾಗುತ್ತದೆ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸುವ ಆಲೋಚನೆ ನಮಗೆ ಇರಲಿಲ್ಲ. ಆದರೆ ಇದೀಗ ನಮ್ಮ ನಿರ್ಧಾರ ಪರಿಶೀಲಿಸುತ್ತಿದ್ದೇವೆ. ಪರಮಾಣು ದಾಳಿಯಿಂದ ಯುದ್ಧದ ಚಿತ್ರಣ ಬದಲಾಗಲಿದೆ ಎಂದು ಪುಟಿನ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.