ದೇಶ-ವಿದೇಶ
ವಿಧಾನಮಂಡಲ ಅಧಿವೇಶನದಿಂದ ಅರ್ಧಕ್ಕೆ ಹೊರಟ ರಾಜ್ಯಪಾಲ ರವಿ!
ಚೆನ್ನೈ: ರಾಜ್ಯ ಸರಕಾರದ ಜೊತೆ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಸೃಷ್ಟಿಸಿಕೊಳ್ಳುತ್ತಲೇ ಬಂದಿರುವ ತಮಿಳುನಾಡು ರಾಜ್ಯಪಾಲ ರವಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡದೇ ಅರ್ಧಕ್ಕೆ ಎದ್ದು ಹೋದ ಘಟನೆ ಪುನರಾವರ್ತಿಸಿದೆ. ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸದ ಕಾರಣ ಶಿಷ್ಟಾಚಾರದ ಉಲ್ಲಂಘನೆಯನ್ನು ಉಲ್ಲೇಖಿಸಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಬೆಳಿಗ್ಗೆ ರಾಜ್ಯ ವಿಧಾನಸಭೆಯಿಂದ ಹಠಾತ್ತನೆ ಹೊರನಡೆದರು. ಈ ಘಟನೆಯು ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಬಿರುಕನ್ನು ಆಳಗೊಳಿಸಿದೆ, ಸಾಂವಿಧಾನಿಕ
ದೇಶಾದ್ಯಂತ 5ಕ್ಕೇರಿದ ಎಚ್ ಎಂವಿ ವೈರಸ್ ಪ್ರಕರಣ: ಆತಂಕ ಬೇಡ ಎಂದ ಕೇಂದ್ರ
ಎಚ್ ಎಂವಿ ವೈರಸ್ ದೇಶಾದ್ಯಂತ ಹರಡಿದ್ದು, ದೇಶದಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 2 ಎಚ್ ಎಂವಿಪಿ ಸೋಂಕು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಗುಜರಾತ್ ನ ಅಹಮದಾಬಾದ್, ಪಶ್ಚಿಮ ಬಂಗಳಾದ ಕೋಲ್ಕತಾ ಹಾಗೂ ತಮಿಳುನಾಡಿನಲ್ಲಿ ತಲಾ ಒಂದು
ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿ ಚುನಾವಣೆ ದಿನಾಂಕ ಘೋಷಿಸಲಿರುವ ಆಯೋಗ!
ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಘೋಷಿಸಲಿದೆ. ಫೆಬ್ರವರಿ 15ರಂದು ದಹಲಿ 7ನೇ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಇದಕ್ಕೂ ಮುನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ
ಅಂಬೇಡ್ಕರ್‌ಗೆ ಶಾ ಅವಮಾನ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
ಸಂಸತ್ತಿನಲ್ಲಿ ಡಾ. ಅಂಬೇಡ್ಕರ್ ಅವರನ್ನು ಅವಮಾನಿಸುವಂತೆ ಹೇಳಿಕೆ ನೀಡಿರುವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಆರೆಸ್ಸೆಸ್ ಕಚೇರಿಗೆ ಮುತ್ತಿಗೆ ಹಾಕಲಯ ಯತ್ನಿಸಿದಾಗ ಪ್ರತಿಭಟನಾಕಾ
ಟಿಬೆಟ್‌ನಲ್ಲಿ ಪ್ರಬಲ ಭೂಕಂಪಕ್ಕೆ 32 ಮಂದಿ ಬಲಿ
ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಇಂದು ಮುಂಜಾನೆ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, 32 ಮಂದಿ ಮೃತಪಟ್ಟರೆ 38 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪ ಟಿಬೆಟ್‌ನಲ್ಲಿ ಸಂಭವಿಸಿದ್ದು, ಚೀನಾ, ನೇಪಾಳ, ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪವು
ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ: ಸಚಿವ ಹೆಚ್‌ಡಿಕೆ
2030ರ ವೇಳೆಗೆ ಭಾರತ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿಗದಿ ಮಾಡಿರುವ ಗುರಿ ಮುಟ್ಟುವ ದೃಷ್ಟಿಯಿಂದ ಮತ್ತೊಂದು ಸುತ್ತಿನ ‘ಉತ್ಪಾದನೆ ಆಧಾರಿತ ಉತ್ತೇಜನ ಸೌಲಭ್ಯ ಯೋಜನೆಗೆ ಕೇಂದ್ರ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ
ಸೇನಾ ವಾಹನ ಸ್ಫೋಟಿಸಿದ ನಕ್ಸಲರು: 9 ಯೋಧರು ಹುತಾತ್ಮ
ಸೇನಾ ವಾಹನದ ಮೇಲೆ ನಕ್ಸಲರು ಬಾಂಬ್ ದಾಳಿ ನಡೆಸಿ ಸ್ಫೋಟಿಸಿದ ಪರಿಣಾಮ 8 ಜಿಲ್ಲಾ ಮೀಸಲು ಪಡೆಯ ಯೋಧರು ಹಾಗೂ ಚಾಲಕ ಸೇರಿದಂತೆ 9 ಯೋಧರು ಹುತಾತ್ಮರಾದ ಘಟನೆ ಛತ್ತೀಸಗಢದಲ್ಲಿ ನಡೆದಿದೆ. ಬಿಜಾಪುರ್ ಜಿಲ್ಲೆಯ ಬಿದ್ರೆ-ಕುತ್ರು ರಸ್ತೆಯಲ್ಲಿ ನಕ್ಸಲರು ಸುಧಾರಿತ ಬಾಂಬ್
ಗುಜರಾತ್ ನಲ್ಲಿ ಎಚ್ ಎಂಪಿ ವಿ ವೈರಸ್ ಪತ್ತೆ: ಭಾರತದಲ್ಲಿ 3ಕ್ಕೇರಿದ ಪ್ರಕರಣ
ಗುಜರಾತ್ ರಾಜಧಾನಿ ಅಹಮದಾಬಾದ್ ನಲ್ಲಿ ಎಚ್ ಎಂವಿಪಿ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಂದೇ ದಿನ 3 ಪ್ರಕರಣಗಳು ಪತ್ತೆಯಾದಂತೆ ಆಗಿದೆ. ಬೆಂಗಳೂರಿನಲ್ಲಿ 3 ಮತ್ತು 8 ತಿಂಗಳ ಮಗುವಿನಲ್ಲಿ ಎಚ್ ಎಂವಿಪಿ ವೈರಸ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ
ಇನ್ಮುಂದೆ ಅವಿವಾಹಿತ ಜೋಡಿಗಿಲ್ಲ ಓಯೋ ರೂಂ
ಅವಿವಾಹಿತ ಜೋಡಿಗಳಿಗೆ ತನ್ನ ಹೋಟೆಲ್ ರೂಮ್ಗಳನ್ನು ಬಾಡಿಗೆ ನೀಡುವುದಿಲ್ಲ ಎಂದು ಟ್ರಾವೆಲ್ ಬುಕಿಂಗ್ ಕಂಪನಿ ಓಯೋ ಪ್ರಕಟಿಸಿದೆ. ಮೊದಲಿಗೆ ಮೀರತ್ನಿಂದ ಈ ಕ್ರಮವನ್ನು ಜಾರಿಗೊಳಿಸಿದೆ. ಓಯೋ ತನ್ನ ಪರಿಷ್ಕೃತ ನೀತಿಯಡಿ, ಪುರುಷ ಮತ್ತು ಮತ್ತು ಮಹಿಳಾ ಜೋಡಿಗಳು ಆನ್ಲೈನ್ ಬುಕಿಂಗ್ ಮಾಡುವಾಗ
ಪಿಎಫ್ಐ ಉಗ್ರರಿಗೆ ದುಬೈ ಹಣ ಹಂಚುತ್ತಿದ್ದಾತ ಎನ್‌ಐಎ ಬಲೆಗೆ
ದುಬೈನಿಂದ ಬರುತ್ತಿದ್ದ ಹಣವನ್ನು ನಿಷೇಧಿತ ಪಿಎಫ್ಐ ಉಗ್ರ ಸಂಘಟನೆಯ ಕೃತ್ಯಗಳಿಗೆ ಕರ್ನಾಟಕ ಹಾಗೂ ಕೇರಳದ ತಂಡಗಳ ಮೂಲಕ ಹಂಚುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೊಹಮ್ಮದ್ ಸಜ್ಜದ್ ಆಲಂ ಬಂಧಿತ.