Menu

ಬಿಮ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿ ತಾಯಿ ಸಾವು

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬೆಳಗಾವಿ ತಾಲೂಕಿನ‌ ನಿಲಜಿ ಗ್ರಾಮದ ಅಂಜಲಿ ಪಾಟೀಲ್ ಮೃತಪಟ್ಟ ಬಾಣಂತಿ. ಮದುವೆಯಾಗಿ ಹನ್ನೆರಡು ವರ್ಷದ ಬಳಿಕ ಗರ್ಭವತಿಯಾಗಿದ್ದ ಅಂಜಲಿಯನ್ನು ಹೆರಿಗೆಗಾಗಿ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯಾದ ಸಂದರ್ಭದಲ್ಲಿ ಆರೋಗ್ಯವಾಗಿಯೇ ಇದ್ದ ಅಂಜಲಿ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಲೋ ಬಿಪಿಯಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಅಂಜಲಿ ಸಾವಾಗಿದೆ

ಮೈಕ್ರೋ ಫೈನಾನ್ಸ್ ಕಿರುಕುಳ,ಅವಮಾನಕ್ಕೆ ನೊಂದು ನದಿಗೆ ಹಾರಿದ ಶಿಕ್ಷಕಿಯ ಶವ ಪತ್ತೆ

ಮೈಕ್ರೋ ಫೈನಾನ್ಸ್ ಕಿರುಕುಳ ಮತ್ತು ಅವಮಾನ ತಾಳಲಾರದೇ   ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೊನ್ನಾಳಿಯ ಶಿಕ್ಷಕಿ ಪುಷ್ಪಲತಾ ಅವರ ಶವ ಪತ್ತೆಯಾಗಿದೆ. ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ ಹಾಲೇಶ್ ಮನೆ ಕಟ್ಟಲು ಶಿವಮೊಗ್ಗ ಮೂಲದ

4.66 ಲಕ್ಷ ರೂ. ಸಾಲಕ್ಕೆ 7.20 ಲಕ್ಷ ಬಡ್ಡಿ ಪಾವತಿಸಿ ಸತ್ತ ವ್ಯಕ್ತಿಯ ಪತ್ನಿಗೆ ಕಿರುಕುಳ

ಮೈಕ್ರೋ ಫೈನಾನ್ಸ್‌ನಿಂದ ಪಡೆದ 4.66 ಲಕ್ಷ ರೂ. ಸಾಲಕ್ಕೆ 7.20 ಲಕ್ಷ ರೂ. ಬಡ್ಡಿ ಕಟ್ಟಿರುವ ವ್ಯಕ್ತಿ ಮೃತಪಟ್ಟಿದ್ದು, ಈಗ ಫೈನಾನ್ಸ್‌ ಸಿಬ್ಬಂದಿಯು ಆತನ  ಪತ್ನಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ತುಮಕೂರಿನಲ್ಲಿ ಕೇಳಿ ಬಂದಿದೆ. ತುಮಕೂರು ನಗರದ ಲೇಬರ್ ಕಾಲೋನಿಯ

ವ್ಯಾಪಾರ ಲೈಸನ್ಸ್‌ಗೆ ಬಿಬಿಎಂಪಿ ಹೊಸ ಮಾರ್ಗ ಸೂಚಿ

ಬೆಂಗಳೂರು ನಗರದಲ್ಲಿ 40 ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳ (2015 ರ ನಂತರ ತೆರೆದ ಅಂಗಡಿಗಳು) ವ್ಯಾಪಾರ ಪರವಾನಗಿಗಳನ್ನು ನವೀಕರಿಸಲಾಗುವುದಿಲ್ಲ ಎಂದು ಬಿಬಿಎಂಪಿ ಮಾರ್ಗಸೂಚಿಯಲ್ಲಿ ತಿಳಿಸಿದೆ. ಫೆ.28ರ ಒಳಗಡೆ 2025-26ನೇ ಹಣಕಾಸು

ಬೆಂಗಳೂರು ಕರಗ ಮಹೋತ್ಸವ ಏಪ್ರಿಲ್ 4ರಿಂದ 14ರವರೆಗೆ

ಬೆಂಗಳೂರು ಕರಗ ಮಹೋತ್ಸವ ಏಪ್ರಿಲ್ 4ರಿಂದ14 ರವರೆಗೆ ನಡೆಯಲಿದೆ. ಏಪ್ರಿಲ್ 12 ಚೈತ್ರ ಪೂರ್ಣಿಮೆಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಬೆಂಗಳೂರು ಕರಗ ಸಂಬಂಧ ನಡೆದ ಸಭೆಯಲ್ಲಿ ಕರಗ ಹೊರುವ ಪೂಜಾರಿಯಾಗಿ ಎ.ಜ್ಞಾನೇಂದ್ರ ಒಮ್ಮತದಿಂದ ಆಯ್ಕೆಯಾದರು. ಇವರು

ನಮ್ಮ ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಳ ಸದ್ಯಕ್ಕಿಲ್ಲ

ನಮ್ಮ ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದ್ದ ಬಿಎಂಆರ್​​ಸಿಎಲ್ ಕ್ರಮದ ಸಂಬಂಧ ಕೇಂದ್ರ ಸರ್ಕಾರ ವರದಿ ಕೇಳಿದ್ದು, ಸದ್ಯದ ಮಟ್ಟಿಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಈ ವರ್ಷ ಇಲ್ಲ ಎಂದು ಹೇಳಲಾಗುತ್ತಿದೆ. ಕಳೆದ ವಾರ

ಒಂದು ಕೋಟಿಗೆ ವಾಪಸ್‌ 5 ಕೋಟಿ ಎಂದು ನಂಬಿಸಿ ಉದ್ಯಮಿಗೆ 25.75 ಕೋಟಿ ರೂ. ನಾಮ

ತನ್ನ ಬ್ಯಾಂಕ್ ಖಾತೆಗೆ ಬೇರೊಬ್ಬರು ಹಾಕಿರುವ ಹಣ ಡ್ರಾ ಮಾಡುವ ಮೊದಲು ತೆರಿಗೆ ಮೊತ್ತ ಒಂದು ಕೋಟಿ ರೂ. ಪಾವತಿಸಬೇಕಿದೆ. ಅದಕ್ಕೆಂದು ಒಂದು ಕೋಟಿ ರೂ. ನೀಡಿದರೆ ವಾಪಸ್‌ 5 ಕೋಟಿ ರೂ. ಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 25.75 ಕೋಟಿ ಪಡೆದು

ನಗರ ಪ್ರದೇಶ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ ಬಿ-ಖಾತಾ ಅಭಿಯಾನ

ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಇತರ ನಗರ ಪ್ರದೇಶ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 30 ರಿಂದ 32 ಲಕ್ಷ ನಿವೇಶನ- ಅಸ್ತಿಗಳಿಗೆ ಯಾವುದೇ ಇ-ದಾಖಲೆ ಇಲ್ಲ. ಈ ಎಲ್ಲಾ ಆಸ್ತಿಗಳಿಗೂ ಒಂದು ಬಾರಿಯ ಪರಿಹಾರವಾಗಿ ಎಲೆಕ್ಟ್ರಾನಿಕ್ ಬಿ-ಖಾತಾ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ

ಕ್ರಿಸ್ ಗೋಪಾಲಕೃಷ್ಣನ್ ಸೇರಿ 18 ಮಂದಿ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ

ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಐಐಎಸ್‌ಸಿ ಮಾಜಿ ನಿರ್ದೇಶಕ ಬಲರಾಮ್ ಸೇರಿದಂತೆ 18 ಮಂದಿ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ 71ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್

ಏರ್ ಶೋಗೆ ಬರುವವರಿಗೆ ಬಿಎಂಟಿಸಿ ಉಚಿತ ಬಸ್‌ ಸೇವೆ

‘ಏರೋ ಇಂಡಿಯಾ 2025’ ಏರ್ ಶೋಗೆ  ಯಲಹಂಕ ವಾಯುನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.‌ 15ನೇ ಆವೃತ್ತಿಯ ಈ ಏರ್ ಶೋಗೆ ದೇಶ ವಿದೇಶಗಳಿಂದ ಲಕ್ಷಾಂತರ ಜನ ಬರಲಿದ್ದಾರೆ. ಈ ವೇಳೆ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ಉದ್ದೇಶದಿಂದ ಯಲಹಂಕ ವಾಯುನೆಲೆಗೆ ಸ್ವಂತ