ಮೈಸೂರು ಆಸ್ಪತ್ರೆಗೆ ನಟ ದರ್ಶನ್ ಭೇಟಿ: 3 ದಿನದ ನಂತರ ಶಸ್ತ್ರಚಿಕಿತ್ಸೆ ಸಾಧ್ಯತೆ
ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್ ಬುಧವಾರ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿರುವುದು ಕೂತುಹಲ ಮೂಡಿಸಿದೆ. ಸಂಕ್ರಾಂತಿ ಹಬ್ಬದ ನಂತರ ದರ್ಶನ್ ಗೆ ಮೈಸೂರಿನ ಆಸ್ಪತ್ರೆಯಲ್ಲಿ ಬೆನ್ನು ನೋವಿನ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದರಿಂದ ದರ್ಶನ್ ಆಸ್ಪತ್ರೆ ಭೇಟಿ ಕುತೂಹಲ ಮೂಡಿಸಿದೆ. ಮಣಿಪಾಲ ಆಸ್ಪತ್ರೆಯಲ್ಲಿ ದರ್ಶನ್ ಬೆನ್ನು ನೋವಿಗೆ ಇಂಜೆಕ್ಷನ್ ಪಡೆದು ಮರಳಿದ್ದಾರೆ. ಇಂಜೆಕ್ಷನ್ ಪ್ರಭಾವ ಬೀರದೇ ಇದ್ದಲ್ಲಿ ಮೂರು ದಿನಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ
3 ಐಎನ್ ಎಸ್ ಯುದ್ಧ ನೌಕೆ ಲೋಕಾರ್ಪಣೆ ಮಾಡಿದ ಪ್ರಧಾನಿ!
ಮೂರು ಐಎನ್ ಎಸ್ ಯುದ್ಧ ನೌಕೆಗಳನ್ನು ಏಕಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾಪರ್ಣೆ ಮಾಡಿದ್ದಾರೆ. ಮುಂಬೈನ ನೌಕಾ ಡಾಕ್‌ಯಾರ್ಡ್‌ನಲ್ಲಿ ಬುಧವಾರ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘಶೀರ್ ಹೆಸರಿನ ಮೂರು ಪ್ರಮುಖ ಯುದ್ಧನೌಕೆಗಳನ್ನು ಲೋಕಾಪರ್ಣೆ ಮಾಡಲಿದ್ದಾರೆ. ಮಹಾರಾಷ್ಟ್ರಕ್ಕೆ
ಕುಳಿತಲ್ಲೇ ಹೃದಯಾಘಾತ: ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಸಾವು
ಕಲಬುರಗಿಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕೋರೇಶ್ ಸಿದ್ದಣ್ಣ ಮದ್ರಿ ಮೃತಪಟ್ಟ ಯುವಕ. ಕಲಬುರಗಿ ನಗರದಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಕೋರೇಶ್ ಸ್ನೇಹಿತರ ಜೊತೆ ಕುಳಿತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಗೆಳೆಯ
ಮುಡಾ ಅಕ್ರಮ ತನಿಖೆ ಸಿಬಿಐಗೆ ವಹಿಸಿ: ಅರ್ಜಿಯ ವಿಚಾರಣೆ ಜ.27ಕ್ಕೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಜ.27ಕ್ಕೆ ಮುಂದೂಡಿದೆ. ಲೋಕಾಯುಕ್ತ ತನಿಖೆಯಿಂದ ಸತ್ಯ ಹೊರ ಬರುವುದಿಲ್ಲ, ಹೀಗಾಗಿ ತನಿಖೆಯನ್ನು
ನಟ ಸರಿಗಮ ವಿಜಿ ಇನ್ನಿಲ್ಲ
ಹಿರಿಯ ನಟ ಸರಿಗಮ ವಿಜಿ ಅವರು ಬುಧವಾರ (ಇಂದು) ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ಆಗಿತ್ತು. ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ನ್ಯುಮೋನಿಯಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಾಳೆ (ಜನವರಿ 16) ಬೆಳಿಗ್ಗೆ 10 ರಿಂದ 12
ಉದ್ಯಮಿಗಳಿಗೆ ವಿವಿ ಕುಲಪತಿ ಹುದ್ದೆ ಬೇಡ: ಸಚಿವ ಡಾ.ಎಂ.ಸಿ.ಸುಧಾಕರ್
ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) ಕರಡು ನಿಯಮಾವಳಿಗಳಲ್ಲಿ ಕುಲಪತಿ ಸ್ಥಾನಕ್ಕೆ ಉದ್ಯಮಿಗಳು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದವರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನೂ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕುಲಪತಿ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ
ಚಿಕ್ಕಮಗಳೂರಲ್ಲಿ ಮತ್ತೆ ಮಂಗನ ಕಾಯಿಲೆ ಭೀತಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಭೀತಿ ಎದುರಾಗಿದ್ದು, ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ. ಹಗಲಲ್ಲಿ ರಣ ಬಿಸಿಲು, ಸಂಜೆಯಾಗುತ್ತಿದ್ದಂತೆ ಭಾರೀ ಚಳಿಯ ಹವಾಮಾನ ವೈಪರೀತ್ಯದಿಂದಲೂ ಜನರ ಆರೋಗ್ಯ ಹದಗೆಡುತ್ತಿರುವ ಮಧ್ಯೆ ಮಂಗನ ಕಾಯಿಲೆ ಜನರ ನಿದ್ದೆಗೆಡಿಸಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ
ಶ್ರೀನಿವಾಸಪುರದಲ್ಲಿ ರಮೇಶಕುಮಾರ್ ಅವರಿಂದ ಅರಣ್ಯ ಭೂಮಿ ಒತ್ತುವರಿ: ಜಂಟಿ ಸರ್ವೆ
ಎರಡು ದಶಕಗಳಿಂದ ವಿವಾದದ ಕೇಂದ್ರವಾಗಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ (ಇಂದು) ಜಂಟಿ ಸರ್ವೆ ನಡೆಯಲಿದೆ. ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಜಂಟಿ ಸರ್ವೆ ಕಾರ್ಯ ಮುಂದೂಡಲಾಗಿತ್ತು. ಇಂದು ಜಂಟಿ ಸರ್ವೆ
ಕುಕ್ಕೆ, ಧರ್ಮಸ್ಥಳಗಳಲ್ಲಿ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ. ವಿವಾಹವಾಗಲು ಬಯಸುವವರು ದೇವಳದ ಕಚೇರಿಯಿಂದ ಅರ್ಜಿ ಫಾರಂ ಪಡೆದು ನಿಗದಿಪಡಿಸಿದ ದಾಖಲೆಗಳೊಂದಿಗೆ ಫೆ.20ರ ಒಳಗೆ ಸಲ್ಲಿಸಬಹುದು. ಮಾ.24 ರಂದು ಬೆಳಗ್ಗೆ 11.00 ರಿಂದ 12.00ರ ವರೆಗೆ ವೃಷಭ ಲಗ್ನದಲ್ಲಿ ವಿವಾಹ
ಮುಡಾ ಕೇಸ್ ಸಿಬಿಐಗೆ ವಹಿಸಲು ಮನವಿ: ಇಂದು ಆದೇಶ ಸಾಧ್ಯತೆ
ಸಿಎಂ ಸಿದ್ದರಾಮಯ್ಯ ಅವರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ದೂರುದಾರ ಸ್ನೇಹಮಹಿ ಕೃಷ್ಣ ಸಲ್ಲಿಸಿರುವ ಅರ್ಜಿಯ ಸಂಬಂಧ ನ್ಯಾಯಾಲಯ ಇಂದು (ಬುಧವಾರ) ಮಹತ್ವದ ಆದೇಶ ಪ್ರಕಟಿಸುವ ಸಾಧ್ಯತೆ ಇದೆ. ಧಾರವಾಡ ವಿಭಾಗೀಯ ಪೀಠದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಇಂದು