Tuesday, February 04, 2025
Menu

ಪ್ರದರ್ಶನಕ್ಕೆ ತಕ್ಕಂತೆ ಆದಾಯ: ಬಿಸಿಸಿಐನಿಂದ ಮೇಜರ್ ಸರ್ಜರಿ

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಮೇಜರ್ ಸರ್ಜರಿಗೆ ಬಿಸಿಸಿಐ ಮುಂದಾಗಿದೆ. ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ರೆಕ್ಕೆ-ಪುಕ್ಕಕ್ಕೆ ಕತ್ತರಿ ಹಾಕಿರುವ ಬಿಸಿಸಿಐ ಇದೇ ವೇಳೆ ಆಟಕ್ಕೆ ತಕ್ಕ ಕಜ್ಜಾಯ ನೀಡುವುದಾಗಿ ಆಟಗಾರರಿಗೆ ತಿಳಿಸಿದೆ. ಅಲ್ಲದೇ ಕುಟುಂಬದ ಜೊತೆ ಪಯಣಿಸುವುದನ್ನೂ ನಿರ್ಭಂಧಿಸಲು ಮುಂದಾಗಿದೆ. ಟೀಮ್ ಇಂಡಿಯಾ ಆಟಗಾರರಿಗೆ ಅವರ ಪ್ರದರ್ಶನಕ್ಕೆ ಅನುಗುಣವಾಗಿ ಸಂಭಾವನೆ ನೀಡುವ ಬಗ್ಗೆ ಬಿಸಿಸಿಐ ಅಧಿಕಾರಿಗಳು ಚರ್ಚಿಸಿದ್ದಾರೆ.

ಕಾಲಕಾಲಕ್ಕೆ ಕ್ರೆಡಿಟ್ ಮಟ್ಟ ನವೀಕರಣಕ್ಕೆ ಬ್ಯಾಂಕುಗಳಿಗೆ ಆರ್ ಬಿಐ ತಾಕಿತು!

ನವದೆಹಲಿ: ತ್ವರಿತವಾಗಿ ಮತ್ತು ಕಾಲಕಾಲಕ್ಕೆ ಕ್ರೆಡಿಟ್ ಮಟ್ಟವನ್ನು ನವೀಕರಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಕ್ರೆಡಿಟ್ ಬ್ಯೂರೋಗಳು ಮತ್ತು ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಕ್ರೆಡಿಟ್ ಸ್ಕೋರ್ ಬ್ಯೂರೋಗಳು, ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ತ್ವರಿತವಾಗಿ ನವೀಕರಿಸಲು ಸ್ಪಷ್ಟ

3ನೇ ತಲೆಮಾರಿನ ನಾಗ್ ಕ್ಷಿಪಣಿ ಮೊದಲ ಪ್ರಯೋಗ ಯಶಸ್ವಿ!

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (drdo) ದೇಶೀಯವಾಗಿ ಅಭಿವೃದ್ಧಿಪಡಿಸಿದ ನಾಗ್ ಎಂಕೆ2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಮೂರನೇ ತಲೆಮಾರಿನ ‘ಆಂಟಿ ಟ್ಯಾಂಕ್ ಫೈರ್ ಅಂಡ್ ಫರ್ಗೆಟ್ ಗೈಡೆಡ್ ಕ್ಷಿಪಣಿಯಾದ ನಾಗ್ ಎಂಕೆ 2 ಪ್ರಯೋಗವನ್ನು ರಾಜಸ್ಥಾನದ

ಮೈಸೂರು ಆಸ್ಪತ್ರೆಗೆ ನಟ ದರ್ಶನ್ ಭೇಟಿ: 3 ದಿನದ ನಂತರ ಶಸ್ತ್ರಚಿಕಿತ್ಸೆ ಸಾಧ್ಯತೆ

ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್ ಬುಧವಾರ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿರುವುದು ಕೂತುಹಲ ಮೂಡಿಸಿದೆ. ಸಂಕ್ರಾಂತಿ ಹಬ್ಬದ ನಂತರ ದರ್ಶನ್ ಗೆ ಮೈಸೂರಿನ ಆಸ್ಪತ್ರೆಯಲ್ಲಿ ಬೆನ್ನು ನೋವಿನ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದರಿಂದ ದರ್ಶನ್ ಆಸ್ಪತ್ರೆ ಭೇಟಿ

3 ಐಎನ್ ಎಸ್ ಯುದ್ಧ ನೌಕೆ ಲೋಕಾರ್ಪಣೆ ಮಾಡಿದ ಪ್ರಧಾನಿ!

ಮೂರು ಐಎನ್ ಎಸ್ ಯುದ್ಧ ನೌಕೆಗಳನ್ನು ಏಕಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾಪರ್ಣೆ ಮಾಡಿದ್ದಾರೆ. ಮುಂಬೈನ ನೌಕಾ ಡಾಕ್‌ಯಾರ್ಡ್‌ನಲ್ಲಿ ಬುಧವಾರ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘಶೀರ್ ಹೆಸರಿನ ಮೂರು ಪ್ರಮುಖ ಯುದ್ಧನೌಕೆಗಳನ್ನು ಲೋಕಾಪರ್ಣೆ ಮಾಡಲಿದ್ದಾರೆ. ಮಹಾರಾಷ್ಟ್ರಕ್ಕೆ

ಕುಳಿತಲ್ಲೇ ಹೃದಯಾಘಾತ: ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಸಾವು

ಕಲಬುರಗಿಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕೋರೇಶ್ ಸಿದ್ದಣ್ಣ ಮದ್ರಿ ಮೃತಪಟ್ಟ ಯುವಕ. ಕಲಬುರಗಿ ನಗರದಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಕೋರೇಶ್ ಸ್ನೇಹಿತರ ಜೊತೆ ಕುಳಿತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಗೆಳೆಯ

ಮುಡಾ ಅಕ್ರಮ ತನಿಖೆ ಸಿಬಿಐಗೆ ವಹಿಸಿ: ಅರ್ಜಿಯ ವಿಚಾರಣೆ ಜ.27ಕ್ಕೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಜ.27ಕ್ಕೆ ಮುಂದೂಡಿದೆ. ಲೋಕಾಯುಕ್ತ ತನಿಖೆಯಿಂದ ಸತ್ಯ ಹೊರ ಬರುವುದಿಲ್ಲ, ಹೀಗಾಗಿ ತನಿಖೆಯನ್ನು

ನಟ ಸರಿಗಮ ವಿಜಿ ಇನ್ನಿಲ್ಲ

ಹಿರಿಯ ನಟ ಸರಿಗಮ ವಿಜಿ ಅವರು ಬುಧವಾರ (ಇಂದು) ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ಆಗಿತ್ತು. ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ನ್ಯುಮೋನಿಯಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಾಳೆ (ಜನವರಿ 16) ಬೆಳಿಗ್ಗೆ 10 ರಿಂದ 12

ಉದ್ಯಮಿಗಳಿಗೆ ವಿವಿ ಕುಲಪತಿ ಹುದ್ದೆ ಬೇಡ: ಸಚಿವ ಡಾ.ಎಂ.ಸಿ.ಸುಧಾಕರ್

ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) ಕರಡು ನಿಯಮಾವಳಿಗಳಲ್ಲಿ ಕುಲಪತಿ ಸ್ಥಾನಕ್ಕೆ ಉದ್ಯಮಿಗಳು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದವರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನೂ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕುಲಪತಿ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ

ಚಿಕ್ಕಮಗಳೂರಲ್ಲಿ ಮತ್ತೆ ಮಂಗನ ಕಾಯಿಲೆ ಭೀತಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಭೀತಿ ಎದುರಾಗಿದ್ದು, ಆರೋಗ್ಯ ಇಲಾಖೆ ಅಲರ್ಟ್‌ ಘೋಷಿಸಿದೆ. ಹಗಲಲ್ಲಿ ರಣ ಬಿಸಿಲು, ಸಂಜೆಯಾಗುತ್ತಿದ್ದಂತೆ ಭಾರೀ ಚಳಿಯ ಹವಾಮಾನ ವೈಪರೀತ್ಯದಿಂದಲೂ ಜನರ ಆರೋಗ್ಯ ಹದಗೆಡುತ್ತಿರುವ ಮಧ್ಯೆ ಮಂಗನ ಕಾಯಿಲೆ ಜನರ ನಿದ್ದೆಗೆಡಿಸಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ