ಹಾಪ್ ಕಾಮ್ಸ್ ಷೇರು ಅಕ್ರಮ ವರ್ಗಾವಣೆ: 8 ಸದಸ್ಯರ ಸಮಿತಿ ಅನರ್ಹ!
ವಾರ್ಷಿಕ ನೂರಾರು ಕೋಟಿ ರೂಗಳ ವ್ಯವಹಾರ ನಡೆಸುವ ಹಾಪ್ ಕಾಮ್ಸ್ ಸಂಸ್ಥೆಯ ಷೇರುಗಳನ್ನು ಪ್ರಸಕ್ತ ಕಾರ್ಯಕಾರಿ ಮಂಡಳಿಯ ಅಧ್ಯಕ್ಷೆ, ಉಪಾಧ್ಯಕ್ಷ, ಸೇರಿದಂತೆ ಒಟ್ಟು 8 ನಿರ್ದೇಶಕರು ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿದ್ದಾರೆ.
ಹೊಸ ಸದಸ್ಯರ ನೇಮಕಾತಿಯಲ್ಲಿ ಸ್ವಜನ ಪಕ್ಷ ಪಾತ ತೋರಿದ್ದಾರೆ, ಮುಂತಾದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸಮಿತಿಯನ್ನು ಅನರ್ಹ ಗೊಳಿಸಿರುವುದಾಗಿ ರಾಜ್ಯ ಸಹಕಾರಿ ಸಂಘಗಳ ಜಂಟಿ ನಿಭಂದಕ ಅಶ್ವಥನಾರಾಯಣ ಆದೇಶ ಹೊರಡಿಸಿದ್ದಾರೆ.
ಹಾಪ್ ಕಾಮ್ ಅಧ್ಯಕ್ಷೆ ಎಚ್.ಕೆ. ನಾಗವೇಣಿ, ಉಪಾಧ್ಯಕ್ಷ ಎ. ಎಸ್. ಚಂದ್ರೆಗೌಡ, ನಿರ್ದೇಶಕರಾದ ಏನ್. ದೇವರಾಜು, ಕೆ. ಎನ್. ವಸಂತ್ ಕುಮಾರ್, ಸೋಣ್ಣಪ್ಪ, ಪ್ರಕಾಶ್ ಶ್ರೀನಿವಾಸನ್, ಸಂಪಂಗಿ ರಾಮಯ್ಯ, ಮುನೇಗೌಡ, ಗೋಪಾಲ ಕೃಷ್ಣ ಅನರ್ಹ ಗೊಂಡವರು.
ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 29(ಸಿ)8(ಬಿ) (ಸಿ) ಮತ್ತು (ಡಿ) ಅನ್ವಯ ಅನರ್ಹಗೊಳಿಸಿದ್ದು ಮುಂದಿನ 5 ವರ್ಷಗಳವರೆಗೆ ಯಾವುದೇ ಸಹಕಾರ ಸಂಘಗಳ ನಿರ್ದೇಶಕರಾಗದಂತೆ ಅನರ್ಹ ಗೊಳಿಸಲಾಗಿದೆ.
ಹಿನ್ನೆಲೆ:
ಬೆಂಗಳೂರು ಲಾಲ್ ಬಾಗ್ ಸಮೀಪದ ತೋಟದ ಬೆಳೆಗಾರರ ಸಹಕಾರ ಮತ್ತು ಸಂಸ್ಕಾರಣ ಸಂಘದ ಹಾಪ್ ಕಾಮ್ಸ್ ಒಕ್ಕೂಟದ sadasyಹೊಂದಿರುವ ಹೆಚ್ಚುವರಿ ಷೇರು ಗಳಲ್ಲಿ ತಲಾ ಒಂದೊಂದು ಶೇರನ್ನು ಬೇರೆಯವರಿಗೆ ವರ್ಗಾಯಿಸಿ, ರುವುದು, ಸ ದಸ್ಯತ್ವ ಅರ್ಜಿ ಜೊತೆ ಕಡ್ಡಾಯವಾಗಿ ಪಡೆಯಬೇಕಾದ ಪಹಣಿ ಮುಂತಾದ ದಾಖಲೆಗಳನ್ನು ಪಡೆಯದೇ ಸಂಬಂಧಿಕರಿಗೆ ಸದಸ್ಯತ್ವ ನೀಡಿರುವುದು, ರುಜುವಾತಾಗಿರುದು ಕ್ರಮ ಕೈಗೊಳ್ಳಲು ಕಾರಣವಾಗಿದೆ.