ವರದಕ್ಷಿಣೆ ವಿರುದ್ಧ ಯುವತಿಯರು ಕಿಡಿಕಿಡಿ

ಬೆಂಗಳೂರು: ಮೇ ೧೩ (ಉದಯಕಾಲ ನ್ಯೂಸ್) ವರದಕ್ಷಿಣೆ ಪಿಡುಗಿನಿಂದ ಅದೆಷ್ಟೊ ಕುಟುಂಬಗಳು ಜೀವನಪರ್ಯಂತ ನರಳುವಂತ ದುಸ್ಥಿತಿ ಉಂಟಾಗುತ್ತಿದೆ. ಇದರ ವಿರುದ್ಧ ಜನಜಾಗೃತಿ ನಿಧಾನವಾಗಿಯಾದರೂ ಮೂಡುತ್ತಿದೆ. ವರದಕ್ಷಿಣೆ ಏಕೆ ಕೊಡಬೇಕು ಎಂದು ಪ್ರಶ್ನಿಸುವ ಯುವತಿಯರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರನೇಕರು ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೆಲವರು ಅಭಿಯಾನದಲ್ಲಿಯೇ ತೊಡಗಿದ್ದಾರೆ. ವರದಕ್ಷಿಣೆಯಿಂದಾಗುವ ಅನಾಹುತ, ಅದರಿಂದ ಸ್ವಾಭಿಮಾನಕ್ಕೆ ಧಕ್ಕೆ ಎಂಬ ಬಗ್ಗೆ ಕಾವೇರಿದ ಚರ್ಚೆಗಳು ನಡೆಯುತ್ತಿವೆ.

ಟ್ವಿಟರ್‌ನಲ್ಲಿ ಶ್ವೇತಾ ಎಂಬುವರು ವರದಕ್ಷಿಣೆ ವಿರುದ್ಧ ಅಕ್ಷರಶಃ ಬೆಂಕಿಯುಂಡೆಯಾಗಿದ್ದಾರೆ. “ವರದಕ್ಷಣೆ ತಗೊಂಡು ಮದುವೆಯಾದವನು ಎಷ್ಟೇ ದೊಡ್ಡ ಶ್ರೀಮಂತನಾದರೂ.. ಹೆಣ್ಣು ಹೆತ್ತ ತಂದೆ ತಾಯಿಯ ಮುಂದೆ ಅವನೊಬ್ಬ ಭಿಕ್ಷುಕ ಅಷ್ಟೇ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *