ಯೋಗ ಜೀವನದ ಅವಿಭಾಜ್ಯ ಅಂಗವಾಗಲಿ: ಬಿ.ಎಸ್. ಯಡಿಯೂರಪ್ಪ

ಯೋಗ ಜೀವನದ ಅವಿಭಾಜ್ಯ ಅಂಗವಾಗಲಿ: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು , ಜೂನ್ 21  ಕೊರೋನ ದಂತಹ ಸಾಂಕ್ರಾಮಿಕ ಜಾಡ್ಯ ಎದುರಿಸುವ ನಿಟ್ಟಿನಲ್ಲಿ ಯೋಗಾ ಬಹಳ ಮಹತ್ವ, ಮತ್ತು ಪರಿಣಾಮಕಾರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಇಂದು ಅಂತಾರಾಷ್ಟ್ರೀಯ ಯೋಗ ದಿನ. ಒಳ್ಳೆಯ ಆರೋಗ್ಯ, ದೀರ್ಘಾಯುಷ್ಯ ಸೇರಿ ನಮ್ಮ ಜೀವನದ ಅನೇಕ ಬದಲಾವಣೆಗೆ ಯೋಗ ಒಂದು ಮದ್ದು ಎಂಬುವುದು ಈಗಾಗಲೇ ಸಾಬೀತಾಗಿದೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ .
ಯೋಗದ ಪ್ರಮುಖ್ಯತೆ ಸಾರುವ ಸಲುವಾಗಿ ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ ಎಂದು ಅವರು ಯೋಗ ದಿನದ ಶುಭಾಶಯ ತಿಳಿಸಿದ್ದಾರೆ.

ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ಜೀವನದ ಸಮನ್ವಯತೆಯನ್ನೂ ನಮ್ಮ ಹಿರಿಯರು ಯೋಗವೆಂದೇ ಕರೆದಿದ್ದಾರೆ. ಸಾಂಕ್ರಾಮಿಕ ಜಾಡ್ಯದ ಸವಾಲುಎದುರಿಸುವ ನಿಟ್ಟಿನಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ.
ಆರೋಗ್ಯಪೂರ್ಣ ಶರೀರ, ಮನಸ್ಸುಗಳ ಜೊತೆಗೆ ಸಾರ್ಥಕ ಜೀವನ ರೂಪಿಸಿಕೊಳ್ಳಲು ನೆರವಾಗುವ ಯೋಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಲಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

 

, ,

Leave a Reply

Your email address will not be published. Required fields are marked *