ಯಾಹೂ ನ್ಯೂಸ್; ಭಾರತದಲ್ಲಿ 20 ವರ್ಷಗಳ ಸೇವೆ ಅಂತ್ಯ ..

ನವದೆಹಲಿ, ಆಗಸ್ಟ್‌ 26– ವೆಬ್ ಸೇವೆಗಳ ಪೂರೈಕೆದಾರ ಯಾಹೂ.. ಭಾರತದಲ್ಲಿ ತನ್ನ ಸುದ್ದಿ ಸೇವೆಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. 20 ವರ್ಷಗಳ ಸೇವೆಗಳಿಗೆ ಇಂದಿನಿಂದ( ಆಗಸ್ಟ್‌ 26) ಪುಲ್ ಸ್ಟಾಪ್ ಇಟ್ಟಿದೆ. ಈ ಸಂಬಂಧ ತನ್ನ ಸುದ್ದಿ ಆಧಾರಿತ ವೆಬ್‌ಸೈಟ್‌ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಮೇಲ್ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.

ಅಮೆರಿಕಾಗೆ ಸೇರಿದ ವೆಬ್ ಸೇವೆಗಳ ಸಂಸ್ಥೆ ಯಾಹೂ ಇಂದಿನಿಂದ ಸುದ್ದಿ ಸೇವೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಗುರುವಾರದ ನಂತರ ಯಾವುದೇ ಹೊಸ ಕಂಟೆಂಟ್‌ ಪ್ರಕಟಿಸದಿರುವುದು ವಿಶೇಷ. ಆದರೆ ಈ ಸ್ಥಗಿತ ಉಳಿದ ವ್ಯವಹಾರಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಆಗಸ್ಟ್ 26 ರಿಂದ ಯಾಹೂ ಇಂಡಿಯಾ ಯಾವುದೇ ಕಂಟೆಂಟ್‌ ಪ್ರಕಟಿಸುವುದಿಲ್ಲ. ಯಾಹೂ ಖಾತೆಯೊಂದಿಗೆ ಮೇಲ್, ಸರ್ಚ್‌ ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಬಳಕೆದಾರರು ತಮ್ಮ ಖಾತೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ, “ಯಾಹೂ ಇಂಡಿಯಾ ತನ್ನ ಮುಖಪುಟದಲ್ಲಿ ಘೋಷಿಸಿದೆ.
ಇನ್ನೂ ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಫೈನಾನ್ಸ್, ಎಂಟರ್‌ಟೈನ್‌ಮೆಂಟ್, ಮೇಕರ್ಸ್‌ ಗೆ ಸಂಬಂಧಿಸಿದ ಕಂಟೆಂಟ್‌ ಸ್ಥಗಿತಗೊಳ್ಳಲಿದೆ. ಎಫ್‌ ಡಿ ಐ ಹೊಸ ನಿಯಮಗಳಿಂದ ಭಾರತೀಯ ನಿಯಂತ್ರಕ ಕಾನೂನುಗಳ ವಿದೇಶಿ ಮಾಧ್ಯಮ ಕಂಪನಿಗಳ ಮೇಲೀನ ಪ್ರಭಾವದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯಾಹೂ ಸ್ಪಷ್ಟಪಡಿಸಿದೆ. ಡಿಜಿಟಲ್ ಮೀಡಿಯಾ ಕಂಪನಿಗಳಲ್ಲಿ ಶೇಕಡಾ 26 ರಷ್ಟು ವಿದೇಶಿ ನೇರ ಹೂಡಿಕೆಗೆ ಮಾತ್ರ ಹೊಸ ಕಾನೂನುಗಳು ಅನುಮತಿಸಲಿದ್ದು, ಕೇಂದ್ರ ಸರ್ಕಾರದ ಈ ನಿಯಮಗಳು ಅಕ್ಟೋಬರ್‌ನಿಂದ ಜಾರಿಗೆ ಬರಲಿವೆ.
ಡಿಜಿಟಲ್ ‘ಕಂಟೆಂಟ್’ .. ನಿರ್ದಿಷ್ಟವಾಗಿ ಯಾಹೂ ಕ್ರಿಕೆಟ್ ಮೇಲೆ ಈ ನಿರ್ಧಾರ ಹೆಚ್ಚು ಪ್ರಭಾವ ಉಂಟಾಗುವ ಹಿನ್ನಲೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದೆ. ಯಾಹೂ ಕಳೆದ 20 ವರ್ಷಗಳಿಂದ ಪ್ರೀಮಿಯಂ, ಸ್ಥಳೀಯ ವಿಷಯಗಳಲ್ಲಿ ಸೇವೆ ಒದಗಿಸುತ್ತಿದೆ. ಒಂದು ಕಾಲದಲ್ಲಿ ಅಂತರ್ಜಾಲಕ್ಕೆ ಯಾಹೂ ಸಮಾನಾರ್ಥಕವಾಗಿತ್ತು. ಅಮೆರಿಕದ ಟೆಲಿಕಾಂ ದೈತ್ಯ ವೆರಿಝೋನ್‌ 2017 ರಲ್ಲಿ ಇದನ್ನು ಖರೀದಿಸಿತ್ತು.

Leave a Reply

Your email address will not be published. Required fields are marked *