ಕೊರೋನವೈರಸ್ ಮೂಲದ ತನಿಖೆಗೆ ಚೀನಾ ತಲುಪಿದ ವಿಶ್ವ ಆರೋಗ್ಯ ಸಂಸ್ಥೆ ತಂಡ

ಕೊರೋನವೈರಸ್ ಮೂಲದ ತನಿಖೆಗೆ ಚೀನಾ ತಲುಪಿದ ವಿಶ್ವ ಆರೋಗ್ಯ ಸಂಸ್ಥೆ ತಂಡ
ಬೀಜಿಂಗ್, ಜ 14 ಕೊವಿಡ್‍-19 ಸಾಂಕ್ರಾಮಿಕ ಮೂಲದ ಬಗ್ಗೆ ತನಿಖೆ ಆರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಂಡ ಗುರುವಾರ ಚೀನಾದ ನಗರವಾದ ವುಹಾನ್‌ ತಲುಪಿದೆ.
ಡಬ್ಲ್ಯುಎಚ್‌ಒ ಮತ್ತು ಚೀನಾ ಸರ್ಕಾರದ ನಡುವಿನ ವಾಗ್ವಾದ ಮತ್ತು ಮಾತುಕತೆಗಳ ನಂತರ ಬಹುನಿರೀಕ್ಷಿತ ತನಿಖೆ ಅಂತಿಮವಾಗಿ ಆರಂಭವಾಗಿದೆ. ತಂಡವು 10 ವಿಜ್ಞಾನಿಗಳನ್ನು ಒಳಗೊಂಡಿದ್ದು, ವೈರಸ್‍ನ ಆರಂಭದ ಉಲ್ಬಣಕ್ಕೆ ಸಂಬಂಧಿಸಿದ ವಿವಿಧ ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಸಮುದ್ರ ಆಹಾರ ಮಾರುಕಟ್ಟೆಯ ಜನರನ್ನು ವಿಜ್ಞಾನಿಗಳು ಸಂದರ್ಶಿಸಲಿದ್ದಾರೆ ಎಂದು ಬಿಬಿಸಿ ವರದಿ ತಿಳಿಸಿದೆ.
2019 ರ ಕೊನೆಯಲ್ಲಿ ಕೊವಿಡ್-19 ವೈರಸ್ ಮೊದಲ ಬಾರಿಗೆ ವರದಿಯಾದ ಮೊದಲ ನಗರ ವುಹಾನ್ ಆಗಿದ್ದು, ಅಲ್ಲಿಂದ ಇದು ವಿಶ್ವದ ಇತರ ಭಾಗಗಳಿಗೆ ವ್ಯಾಪಿಸಿದೆ.

ಚೀನಾದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದರೆ, ದೂರದ ದೇಶಗಳಲ್ಲಿ ಇದು ವ್ಯಾಪಕವಾಗಿ ಹರಡಿದೆ.

Leave a Reply

Your email address will not be published. Required fields are marked *