2.55ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಹಾಗೂ ಮಾಜಿ ಡಿಸಿಎಂ ಡಾ. ಜಿ .ಪರಮೇಶ್ವರ್ ರಿಂದ ಗುದ್ದಲಿ ಪೂಜೆ

2.55ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಹಾಗೂ ಮಾಜಿ ಡಿಸಿಎಂ ಡಾ. ಜಿ .ಪರಮೇಶ್ವರ್ ರಿಂದ ಗುದ್ದಲಿ ಪೂಜೆ

ಮಧುಗಿರಿ:- ತಾಲ್ಲೂಕಿನ ಪುರವರ ಹೋಬಳಿಯ ಪುರವಾರ ಗ್ರಾಮ ಪಂಚಾಯತಿ ಮತ್ತು ಕೊಡ್ಲಾ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 2.55ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗೆ ಕೊರಟಗೆರೆ ಶಾಸಕ ಹಾಗೂ ಮಾಜಿ ಡಿಸಿಎಂ ಡಾ. ಜಿ .ಪರಮೇಶ್ವರ್ ಮಂಗಳವಾರದಂದು ಗುದ್ದಲಿ ಪೂಜೆ ನೆರವೇರಿಸಿದರು.
ಗಂಕಾರನಹಳ್ಳಿ ಗೇಟ್ ಬಳಿ 70 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಕೋಡ್ಲಾಪುರ ಗ್ರಾಮದಲ್ಲಿ ಐಡಿಹಳ್ಳಿ – ಪುರವಾರ ರಸ್ತೆಯ ಕೋಡ್ಲಾಪುರ ,ಇಮ್ಮಡಗೊಂಡನಹಳ್ಳಿಮಾರ್ಗವಾಗಿ ಹಿಂದೂಪುರ ರಸ್ತೆ ಸೇರುವ 1. 7ಕೋಟಿ ರೂ ವೆಚ್ಚದ ರಸ್ತೆ, ತಾಳೆಕೆರೆ ಗ್ರಾಮದಲ್ಲಿ ಎಸ್ ಸಿಪಿ ಟಿಎಸ್ ಪಿ ಯೋಜನೆಯಡಿ 15 ಲಕ್ಷ ರೂ ವೆಚ್ಚದಲ್ಲಿ ಚರಂಡಿ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು.
ಕೊಡ್ಲಾ ಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನು ಶಾಸಕ ಡಾ. ಜಿ .ಪರಮೇಶ್ವರ್ ಉದ್ದೇಶಿಸಿ ಮಾತನಾಡಿ ,ಗ್ರಾಮಕ್ಕೆ ಬಂದಾಗ ಉದ್ವೇಗದಲ್ಲಿ ಮಾತನಾಡಿದರೆ ಅದು ಒಳ್ಳೆಯದಲ್ಲ. ನಿಮ್ಮ ಕೆಲಸ ಆಗಬೇಕು ಅಂದರೆ ಕೆಲಸ ಕೆಳಿ ಮಾಡಿಸಿಕೊಳ್ಳಬೇಕು ಎಂದೆಳಿ,ಇತ್ತೀಚೆಗೆ ಅವರ ವಿರುದ್ಧ ಹರಿಹಾಯ್ದಿದ್ದ ಗ್ರಾಮಸ್ಥರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಅಭಿವೃದ್ಧಿಗಳು ಆಗುತ್ತಿವೆ ಕೊಡ್ಲಾಪುರ ಗ್ರಾಮ ಪಂಚಾಯಿತಿಗೆ 1ಕೋಟಿ ರೂ ನೀಡಿ ಅನುದಾನ ನೀಡಿದ್ದೇವೆ, ಸುವರ್ಣ ಗ್ರಾಮ ಯೋಜನೆಯಡಿ 2ಕೋಟಿ ರೂ ಬಿಡುಗಡೆಯಾಗಿತ್ತು. 40 ಲಕ್ಷ ರೂ ವೆಚ್ಚದಲ್ಲಿ ಪಶು ಆಸ್ಪತ್ರೆ ,50ಲಕ್ಷ ರೂ ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ,ಪುರವಾರ ಬಳಿಯಿರುವ ಜಯಮಂಗಲಿ ನದಿಗೆ ಅಡ್ಡಲಾಗಿ 19 ಕೋಟಿ ರೂ ವೆಚ್ಚದಲ್ಲಿ ಬೃಹತ್ ಸೇತುವೆ ಉದ್ಘಾಟನೆಗೆ ಸಜ್ಜುಗೊಂಡಿದೆ. ಐಡಿಹಳ್ಳಿ ವೃತ್ತದಿಂದ ಬ್ಯಾಲ್ಯದವರೆಗೂ ಸುಮಾರು 18 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಇವೆಲ್ಲ ಅಭಿವೃದ್ಧಿಗಳು ಕಣ್ಣಿಗೆ ಕಾಣುತ್ತಿವೆ. ದುರ್ಗಮ್ಮ ದೇವಾಲಯ ನಿರ್ಮಾಣಕ್ಕೆ 12ಲಕ್ಷ ರೂ ಶಾಸಕರ ಅನುದಾನದಲ್ಲಿ ನೀಡಿದ್ದೇನೆ ಎಂದರು.
ನೂರು ಮನೆಗಳನ್ನು ನೀಡಿದ್ದೇನೆ. 26ಎಕರೆ ಪ್ರದೇಶದಲ್ಲಿ ಆಶ್ರಯ ನಿವೇಶನಗಳನ್ನು ವಿಂಗಡಿಸುವಂತೆ ಈಗಾಗಲೇ ತಹಸೀಲ್ದಾರ್ ಗೆ ಸೂಚಿಸಿದ್ದು, ಈ ಭಾಗದಲ್ಲಿ ಬಹುತೇಕವಾಗಿ ದಲಿತರೇ ವಾಸವಾಗಿದ್ದು ಅವರಿಗೆ ಸರ್ಕಾರದಿಂದ ಸಲ್ಲಬೇಕಾದ ಎಲ್ಲಾ ಅನುದಾನಗಳನ್ನು ಕೊಡಿಸುವ ಪ್ರಯತ್ನವನ್ನು ಮಾಡಿರುವುದಾಗಿ ತಿಳಿಸಿ, ಕೋಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಕರೋನಾ ಮುಗಿಯುವವರೆಗೂ ಇಲ್ಲೇ ಇರುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಕೊಡ್ಲಾಪುರ ರಸ್ತೆ ತಡವಾಗಲು ಇದೂ ಲೋಕೋಪಯೋಗಿ ಇಲಾಖೆಗೆ ಸೇರಿದ್ದ, ಜಿಲ್ಲಾ ಪಂಚಾಯತಿ ಇಲಾಖೆಗೆ ಸೇರಿದ ಎಂಬುದು ಸ್ವಲ್ಪ ಗೊಂದಲವಿತ್ತು. ಈ ಗೊಂದಲವನ್ನು ನಿವಾರಿಸಿ ಈಗ 1.7ಕೋಟಿ ರೂ ಅನುದಾನದಲ್ಲಿ ಕೆಲಸ ಅರಂಭಿಸಲಾಗಿದೆ. ಇನ್ನೂ ಮುಂದೆ ರಸ್ತೆಯಾದ ನಂತರ ಬಸ್ಸು ಸಂಚಾರಗಳು ಆಗಲಿವೆ. ಬ ಖಾಸಗಿ ಬಸ್ಸುಗಳು ಪ್ರಯಾಣಿಕರೇ ಹತ್ತುತ್ತಿಲ್ಲ ಎಲ್ಲಾ ಆಟೋವನ್ನು ಅವಲಂಬಿಸಿರುವುದರಿಂದ ಬಸ್ಸಿನವರಿಗೆ ನಷ್ಟವುಂಟಾದ ಕಾರಣ ಬಸ್ಸುಗಳು ಬಿಡುತ್ತಿಲ್ಲವೆಂದು ತಿಳಿಸಿದರು.
ನನಗೆ ರಾಜಕೀಯ ಜನ್ಮ ಕ್ಷೇತ್ರದ ಮರೆಯುವುದಿಲ್ಲ, ಋಣ ತೀರಿಸುವೆ ಕಳೆದ ಮೂವತ್ತು ವರ್ಷಗಳಿಂದ ಪುರವರ ಹೋಬಳಿ ನನಗೆ ರಾಜಕೀಯವಾಗಿ ಬೆಳಸಿ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನದವರೆಗೂ ಕೊಂಡೊಯ್ದಿದೆ ಎಂದು ಹೇಳಿ ದರು. ನಿಮ್ಮೊಡನೆ ಅಣ್ಣ ತಮ್ಮನಂತೆ ನಿಮ್ಮ ಜೊತೆಗೆ ಇರುತ್ತೇನೆ. ಯಾವುದೇ ತೊಂದರೆ ಬಂದರೂ ಯಾವುದೇ ಕೆಲಸವಾಗಬೇಕಾದರೂ ನಿಮ್ಮಗಳೊಡನೆ ಇರುತ್ತೇನೆ ಎಂದು ಭಾವುಕರಾದರು.
ಸಿಎಂ ಎನ್ನಬೇಡಿ ಅದೇ ನನಗೆ ಮುಳುವಾಗುತ್ತದೆ .ವೇದಿಕೆ ಯಲ್ಲಿ ಭಾಷಣ ಮಾಡುತ್ತಿದ್ದಾಗ ಸಭಿಕರೊಬ್ಬರು ಮುಂದಿನ ಸಿಎಂ ಪರಮೇಶ್ವರ್ ಎಂದಾಗ ಸಿಎಂ ಪದ ಹೇಳಬೇಡಿ ನನಗೆ ಡೇಂಜರ್ ಆಗುತ್ತದೆ ಎಂದು ಪರಮೇಶ್ವರ್ ಮಾರ್ಮಿಕವಾಗಿ ತಿಳಿಸಿದರು.
ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಳ್ಳಿ :-ತಹಸೀಲ್ದಾರರು ಕೊಡ್ಲಾಪುರದಲ್ಲಿರುವ ಜನತೆ ಲಸಿಕೆ ಹಾಕಿಸಿ ಕೊಳ್ಳುತ್ತಿಲ್ಲ ಎಂದು ದೂರುತ್ತಿದ್ದಾರೆ. ನಾನು ಇತ್ತೀಚೆಗೆ ಸಿದ್ಧಾರ್ಥ ಆಸ್ಪತ್ರೆಯಿಂದ ಲಸಿಕೆ ಮತ್ತು ಕರೋನ ಸೋಂಕಿತರಿಗೆ ಔಷಧಿ ವಿತರಿಸಲು ಕಳುಹಿಸಿದ್ದೆ. ಉದಾಸೀನ ಮಾಡಿದರೆ ನಿಮ್ಮ ಪ್ರಾಣದ ಜೊತೆಗೆ ಮತ್ತೊಬ್ಬರ ಪ್ರಾಣವನ್ನು ತೆಗೆಯುತ್ತಿರಾ, ಮಾಸ್ಕ್ ಲಸಿಕೆ ಸೋಂಕಿನ ಲಕ್ಷಣ ಕಂಡುಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕರೋನಾ ಚಿಕಿತ್ಸೆ ಯನ್ನು ಉಚಿತವಾಗಿ ನೀಡುವುದಾಗಿ ಕ್ಷೇತ್ರದ ಜನರಿಗೆ ತಿಳಿಸಿದರು.
ಮೂರನೇ ಅಲೆ ಬಗ್ಗೆ ಎಚ್ಚರ: ಸರ್ಕಾರ ಶಾಲಾ ಕಾಲೇಜುಗಳ ನ್ನು ತೆರೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಅನಾಹುತ -ಆರ್ಥಿಕ ನಷ್ಟದ ಬಗ್ಗೆ ಜನ ಸಮುದಾಯ ಎಚ್ಚರಿಕೆ ವಹಿಸಬೇಕು. ಸರ್ಕಾರದ ಗೈಡ್ ಲೈನ್ ಗಳನ್ನು ಯಥಾವತ್ತಾಗಿ ಪಾಲಿಸುವುದರ ಜತೆಗೆ ನಮ್ಮ ಎಚ್ಚರಿಕೆ ನಮ್ಮಲ್ಲಿರಬೇಕು .ಲಸಿಕೆ ಯನ್ನು ಪ್ರತಿಯೊಬ್ಬರೂ ಹಾಕಿಸಿಕೊಳ್ಳಿ ವಿದೇಶದಲ್ಲಿ ಈಗಾಗಲೇ ಲಸಿಕೆಗಳ ಹಾಕಿಸಿಕೊಂಡಿರುವುದರಿಂದ ಮೂರನೇ ಅಲೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲಸಿಕೆ ಹಾಕಿಸುವುದರಿಂದ ಮೂರನೆಯಾಲೆಯ ತೀವ್ರತೆ ಕಡಿಮೆಯಾಗುತ್ತದೆಂದರು.
ಕೋಡ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ನರಸಿಂಹಮೂರ್ತಿ, ಉಪಾಧ್ಯಕ್ಷೆ ಮಂಜುಳಾ ಕೃಷ್ಣಮೂರ್ತಿ, ಸದಸ್ಯರುಗಳಾದ ಪುಟ್ಟ ಹನುಮಂತಯ್ಯ ವೆಂಕಟೇಶಪ್ಪ, ವಿಜಯಕುಮಾರ್ ,ಲಲಿತಮ್ಮ, ಭಾಗ್ಯಮ್ಮ ,ತಿಮ್ಮಾಜಮ್ಮ ,ಶಿಲ್ಪಾ ವಿಜಯಕುಮಾರ್ ಇದ್ದರು
ಗಂಕಾರನಹಳ್ಳಿ ಗ್ರಾಮದಲ್ಲಿ ಪುರವಾರ ಗ್ರಾಪಂ ಅಧ್ಯಕ್ಷೆ ಅಂಬಿಕಾ ರಾಮಾಂಜಿನಪ್ಪ ,ಉಪಾಧ್ಯಕ್ಷೆ ರಾಧಿಕಾ ನರಸಿಂಹಮೂರ್ತಿ, ಸದಸ್ಯರುಗಳಾದ ಕಮಲಮ್ಮ ರವಿಕುಮಾರ್ , ನಾಗಮ್ಮ, ಬಿ.ಎಲ್ .ರಾಧಾ ನರಸಿಂಹಮೂರ್ತಿ ,ರಾಧಿಕಾ ಬಿಆರ್ ನರಸಿಂಹಮೂರ್ತಿ ,ಡಿ .ರವಿ ದಿಲೀಪ್ ಕುಮಾರ್ ಸಂಕಾಪುರ ,ಮುಖಂಡರುಗಳಾದ ಸಂಕಾಪುರ ಜಯರಾಮಣ್ಣ , ರವಿಕುಮಾರ್ ,ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಗದೀಶ್ ,ಪಿಡಿಒ ಶಿವಾನಂದ ಆರಾಧ್ಯ, ಕೊರಟಗೆರೆ ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ ಕೆಪಿಸಿಸಿ ಸದಸ್ಯ ಮಹಮ್ಮದ್ ಫಾಜೀಲ್ ,ಪಿಕಾರ್ಡ್ ಬ್ಯಾಂಕ್ ಉಫಾದ್ಯಕ್ಷ ಬ್ಯೆರಪ್ಪ,ಕುಪೇಂದ್ರಪ್ಪ,ಬಿ.ಶಿವಕುಮಾರ್, ತಹಶಿಲ್ದಾರ್ ವ್ಯೆ.ರವಿ, ಕೆಆರ್ ಐಡಿಎಲ್ ಎಇಇ ನಾಗಯ್ಯ, ಪಿಡಬ್ಲ್ಯುಡಿ ಎಇಇ ಹೊನ್ನೇಶಪ್ಪ ,ಜಿ.ಪಂ ಎಇಇ ಸುರೇಶ್ ರೆಡ್ಡಿ ,ಅರ್.ಐ. ಜಯರಾಮಯ್ಯ ಇದ್ದರು.

, ,

Leave a Reply

Your email address will not be published. Required fields are marked *