ಲಾಕ್ ಡೌನ್ ಮುಗಿದ ನಂತರ ಮೃತಪಟ್ಟ ಕುಟುಂಬಕ್ಕೆ ಕೈಲಾದಷ್ಟು ಸಹಾಯ; ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ

ಲಾಕ್ ಡೌನ್ ಮುಗಿದ ನಂತರ ಮೃತಪಟ್ಟ ಕುಟುಂಬಕ್ಕೆ ಕೈಲಾದಷ್ಟು ಸಹಾಯ; ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ

ಮಧುಗಿರಿ: ಲಾಕ್ ಡೌನ್ ಮುಗಿದ ನಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ನವರ ನೇತೃತ್ವದಲ್ಲಿ ಕರೊನಾ ಸೊಂಕಿನಿಂದ ಇತ್ತೇಚೆಗೆ ಮೃತಪಟ್ಟ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಕೈಲಾದಷ್ಟು ಸಹಾಯ ಮಾಡಲಾಗುವುದು ಎಂದು ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದರು.
ತಾಲ್ಲೂಕಿನ ಕಸಬ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಕುಂಚಿಟಿಗರ ಸಮುದಾಯ ಭವನದಲ್ಲಿ ಸಿದ್ದಾಪುರ ಗ್ರಾಪಂನ ಕೆಲ ಸದಸ್ಯರು ಸೊಂಕಿತರಿಗೆ ದಿನಸಿ ಕಿಟ್ ಹಾಗೂ ತರಕಾರಿಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.
ಮನುಷ್ಯನಿಗೆ ಕಷ್ಟ ಹೇಳಿ ಕೇಳಿ ಬರುವುದಿಲ್ಲಾ ಅಂತಹ ಸಂದರ್ಭದಲ್ಲಿ ಅವನ ಸಹಾಯಕ್ಕೆ ಇತರರು ನಿಲ್ಲಬೇಕು. ಇಲ್ಲಿನ ಗ್ರಾಪಂ ಸದಸ್ಯರು ಇಂತಹ ಪರಿಸ್ಥಿತಿಯಲ್ಲಿ ತಮ್ಮ ಗ್ರಾಮಸ್ಥರಿಗೆ ವೈಯಕ್ತಿಕವಾಗಿ ಸ್ನೇಹಿತರೊಂದಿಗೆ ಸೇರಿಕೊಂಡು ಹಣ ಸಂಗ್ರಹಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಾ ನಮ್ಮ ಅಭಿಮಾನಿ ಬಳಗಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಶ್ಲಾಘನೀಯ.
ಈ ಗ್ರಾಮ ಪಂಚಾಯತಿಯು ಸಂಪೂರ್ಣ ರೋಗ ಮುಕ್ತ ವಾಗಲು ಎಲ್ಲಾರ ಸಹಕಾರ ಅಗತ್ಯವಿದೆ. ಕಡ್ಡಾಯವಾಗಿ ದೈಹಿಕ ಅಂತರ, ಸ್ಯಾನಿಟೈಜ್, ಮಾಸ್ಕ್ ಧರಿಸುವುದುದು ಹಾಗೂ ಕಡ್ಡಾಯ ಲಸಿಕೆ ಹಾಕಿಕೊಳ್ಳುವುದರಿಂದ ಗ್ರಾಮಗಳು ರೋಗ ಮುಕ್ತವಾಗಿಸ ಬಹುದಾಗಿದೆ. ನಮಗೆ ಅಧಿಕಾರ ಇರಲಿ ಬಿಡಲಿ ನಾವು ಏನೇ ಕೆಲಸ ಕಾರ್ಯ ಮಾಡಿದರು ಸಹ ಕ್ಷೇತ್ರದ ಜನರ ಸುರಕ್ಷತೆ ಯಿಂದ ಇರಬೇಕಾಗಿದೆ ಎಂಬುದು ಕೆ.ಎನ್.ರಾಜಣ್ಣ ನವರ ಆಶಯವಾಗಿದ್ದು ಅವರು ಮತ್ತು ಅವರ ತಂಡ ಕ್ಷೇತ್ರದ ಜನರ ಕಷ್ಟಗಳಿಗೆ ಸದಾ ಸ್ಪಂದಿಸಲಿದ್ದಾರೆ.
ಈ ತರಕಾರಿಗಳನ್ನು ತಾಲ್ಲೂಕಿನ ರೈತರಿಂದ ನೇರವಾಗಿ ಖರೀದಿಸುತ್ತಿರುವುದರಿಂದ ಇಂದೂ ಅವರಲ್ಲಿ ಸ್ಪಲ್ಪ ಚೇತರಿಕೆ ಕಂಡು ಬಂದಿದೆ. ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದಾಗ ರೈತರ ಬೆಳೆದ ಬೆಳೆಗಳಿಗೆ ಕಡಿಮೆ ಬೆಲೆ ಇತ್ತು . ಈಗ ತರಕಾರಿ ಬೆಳೆಗಳ ಬೆಲೆಯು ಹೆಚ್ಚೆಳಗೊಂಡಿರುವುದು ಖುಷಿ ತಂದಿದೆ. ಚುನಾವಣೆ ಬರಲಿ ಬಿಡಲಿ ಮಾನವೀಯತೆ ದೃಷ್ಟಿಯಿಂದ ಕಾರ್ಯಕ್ರಮದ ಆಯೋಜಕರು ಹಂತ ಹಂತವಾಗಿ ಮನೆ ಮನೆಗೆ ತರಕಾರಿ ಮತ್ತು ದಿನಸಿ ಕಿಟ್ಚಗಳನ್ನು ತಲುಪಿಸಿ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ ಕೆಎನ್‍ಆರ್ ಮತ್ತು ಆರ್ ಆರ್ ಅಭಿಮಾನಿಗಳ ಕರೊನಾ ನಿಯಂತ್ರಣದ ಹೋರಾಟಕ್ಕೆ ಇಲ್ಲಿನ ಗ್ರಾಪಂ ಸದಸ್ಯರು ಕೈ ಜೋಡಿಸಿರುವುದು ಉತ್ತಮ ವಾದ ಕಾರ್ಯವಾಗಿದೆ.
ಕೊಟಾಗಾರ್ಲಹಳ್ಳಿ ಮತ್ತು ರಂಟವಾಳಲು ಗ್ರಾಮದಲ್ಲಿ 3600 ಕುಟುಂಬಗಳಿಗೆ ತರಕಾರಿ ಹಂಚುವಾಗ ಅಲ್ಲಿನ ಗ್ರಾಮಸ್ಥರು ಪಾಕೆಟ್‍ಗಳನ್ನು ಮಾಡಿ ಕೊಟ್ಟು ಅವರು ಕೂಡ ಕೈ ಜೋಡಿಸಿದರು. ಇಲ್ಲಿಯ ವರೆಗೆ ತಾಲ್ಲೂಕಿನಲ್ಲಿ ಸುಮಾರು 9 ಸಾವಿರ ಮನೆಗಳಿಗೆ ತರಕಾರಿ ಕಿಟ್‍ಗಳನ್ನು ಹಂಚಲಾಗಿದೆ. ಸಿದ್ದಾಪುರ ಗ್ರಾಪಂ ಸದಸ್ಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಗ್ರಾಪಂ ಅಧ್ಯಕ್ಷ ವೀರಣ್ಣ ಮಾತನಾಡಿ ಗ್ರಾಮಸ್ಥರಿಗೆ ತರಕಾರಿ ಮತ್ತು ದಿನಸಿ ಕಿಟ್ ವಿತರಣೆ ಮಾಡಲು ನಮಗೆ ಪ್ರೇರಣೆಯಾಗಿದ್ದು ಕೆ.ಎನ್.ಆರ್ ಮತ್ತು ಆರ್.ಆರ್.ಅಭಿಮಾನ ಬಳಗದಿಂದ ನಾನು ಮತ್ತು ನಮ್ಮ ಸದಸ್ಯರು ಹಾಗೂ ಸ್ನೇಹಿತರು ಸೇರಿಕೊಂಡು ಚರ್ಚಿಸಿ ಸೊಂಕಿತರಿಗೆ ಹಾಗೂ ಗ್ರಾಮಸ್ಥರಿಗೆ ಕಿಟ್‍ಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮವು ಗ್ರಾಮ ಪಂಚಾಯತಿಯ ಅನುದಾನದಲ್ಲಿ ಮಾಡಲಾಗುತ್ತಿಲ್ಲ ನಮ್ಮ ಸ್ನೇಹಿತರ ಸಹಕಾರ ದಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಮಾಜಿ ತಾಪಂ ಸದಸ್ಯ ರಾಮಣ್ಣ, ಗ್ರಾಪಂ ಸದಸ್ಯರಾದ. ರಾಜಗೋಪಾಲ್, ಅಲುಮೇಲಮ್ಮ, ಲಕ್ಷಣ್, ಗಂಗಾಧರ್, ಮುಖಂಡರಾದ ಫಾರ್ಚೂನ್ ರಮೇಶ್, ರಾಯಲ್ ಗೋವಿಂದರಾಜು, ಲೋಕೇಶ್, ಸಿ.ರಾಜು ,ಕಾಕಪ್ಪ, ಸಂಜೀವಯ್ಯ, ಜೆ.ಪಿ.ಮಂಜುನಾಥ್, ಗೊಲ್ಲರಹಟ್ಟಿ ಮಧು, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *