ಮುಸ್ಲಿಮರ ಸಂತೋಷ ಆಳೆಯುವ ಮಾನದಂಡವೇನು? ಅಸದುದ್ದೀನ್ ಒವೈಸಿ ಪ್ರಶ್ನೆ

ಮುಸ್ಲಿಮರ ಸಂತೋಷ ಆಳೆಯುವ ಮಾನದಂಡವೇನು? ಅಸದುದ್ದೀನ್ ಒವೈಸಿ ಪ್ರಶ್ನೆ


ನವದೆಹಲಿ, ಅ10 ಪ್ರಪಂಚದಲ್ಲಿಯೇ ಭಾರತೀಯ ಮುಸ್ಲಿಮರು ಅತ್ಯಂತ ಸಂತೋಷವಾಗಿದ್ದಾರೆ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಎಂ ಐ ಎಂ ಸಂಸದ ಅಸದುದ್ದೀನ್ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ಸಂತೋಷ ಅಳೆಯಲು ಬಳಸುವ ಮಾನದಂಡವೇನು?, ಅತ್ಯಂತ ಸಂತೋಷವಾಗಿರಲು ನಾವು (ಮುಸ್ಲಿಮರು) ಇತರ ಮುಸ್ಲಿಂ ರಾಷ್ಟ್ರಗಳೊಂದಿಗೆ ಪೈಪೋಟಿ ನಡೆಸುವುದಿಲ್ಲ. ನಿಮ್ಮ (ಆರ್‌ಎಸ್‌ಎಸ್) ಸಿದ್ಧಾಂತಗಳ ಮೂಲಕ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆ ನಾಗರೀಕರನ್ನಾಗಿಸಬೇಕು ಎಂದು ಕೊಂಡಿದ್ದೀರಾ ? ದೇಶದ ಬಹುಸಂಖ್ಯಾತ ಸಮುದಾಯಗಳಿಗೆ ಮುಸ್ಲಿಮರು ಎಷ್ಟು ಕೃತಜ್ಞರಾಗಿರಬೇಕು ಎಂಬುದನ್ನು ನೀವು (ಭಾಗವತ್) ನಮಗೆ ಹೇಳುವ ಅಗತ್ಯವಿಲ್ಲ. ಬಹುಸಂಖ್ಯಾತ ಸಮುದಾಯದ ದಯೆ ದಾಕ್ಷಿಣ್ಯವನ್ನು ನಾವು ಅವಲಂಬಿಸುವುದಿಲ್ಲ. ನಮ್ಮ ಮೂಲಭೂತ ಹಕ್ಕುಗಳು ನಮಗೆ ಮುಖ್ಯ. ನಮ್ಮನ್ನು ಗೌರವಿಸುತ್ತಾರಾ ಎಂಬುದೇ ನಮ್ಮ ಸಂತೋಷಕ್ಕೆ, ನಮ್ಮ ಗೌರವದ ಅಳತೆಯಾಗಿದೆ ಎಂದು ಅಸದುದ್ದೀನ್ ಒವೈಸಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *