ಮುಖ್ಯ ಆಯುಕ್ತರಿಂದ ಯಲಹಂಕ ವಲಯ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ – ಸಮಸ್ಯೆಗಳ ಪರಿಶೀಲನೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಬೆಳಗ್ಗೆ 6.00 ಗಂಟೆಯಿಂದ ಕಾಲ್ನಡಿಗೆಯ ಮೂಲಕ ಎನ್.ಇ.ಎಸ್ ಬಸ್ ನಿಲ್ದಾಣದಿಂದ 16ನೇ ಎ ಕ್ರಾಸ್ ಸರ್ವೀಸ್ ರಸ್ತೆ, ಶೇಷಾದ್ರಿಪುರಂ ಕಾಲೇಜು ರಸ್ತೆ, ಶರಾವತಿ ಹೋಟೆಲ್ ರಸ್ತೆ, ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣ, ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆ ಹಾಗೂ ಅಟ್ಟೂರುವರೆಗೆ ಸುಮಾಡು 4.00 ಕಿ.ಮೀ ರಸ್ತೆಯನ್ನು ಪರಿಶೀಲನೆ ನಡೆಸಲಾಯಿತು.

ಎನ್.ಇ.ಎಸ್ ಬಸ್ ನಿಲ್ದಾಣ, 16ನೇ ಎ ಕ್ರಾಸ್ ಸರ್ವೀಸ್ ರಸ್ತೆ ಮಾರ್ಗವಾಗಿ ಪರಿಶೀಲನೆ:

• ರಸ್ತೆ ಮಧ್ಯಭಾಗದ ಖಾಲಿ ಜಾಗದಲ್ಲಿ ಹಾಕಿರುವ ಮರದ ಕೊಂಬೆಗಳ ರಾಶಿಯನ್ನು ತೆರವುಗೊಳಿಸಿ ಶೆಡ್ಡರ್ ಮೂಲಕ ಪುಡಿ ಮಾಡಲು ಸೂಚನೆ.
• ಕಟ್ಟಡ ನಿರ್ಮಾಣಕ್ಕಾಗಿ ಪಾದಚಾರಿ ಮಾರ್ಗದಲ್ಲಿ ಶೆಡ್ ನಿರ್ಮಿಸಿದ್ದು, ಕೂಡಲೆ ತೆರವುಗೊಳಿಸಲು ಸೂಚನೆ.
• ಪಾದಚಾರಿ ಮಾರ್ಗ ಹಾಗೂ ಶೋಲ್ಡರ್ ಡ್ರೈನ್ ಗಳ ದುರಸ್ತಿ ಕಾರ್ಯಮಾಡಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚನೆ.
• ರಸ್ತೆ ಮೇಲೆ ಬೀಳುವ ಮಳೆ ನೀರು ಗ್ರೇಟಿಂಗ್ ಮೂಲಕ ಸರಾಗವಾಗಿ ಚರಂಡಿಗಳಿಗೆ ಹರಿದು ಹೋಗಬೇಕು. ಅದಕ್ಕಾಗಿ ಎಲ್ಲೆಲ್ಲಿ ಗ್ರೇಟಿಂಗ್ ಇಲ್ಲ ಗುರುತಿಸಿ ಕೂಡಲೆ ಅಳವಡಿಸಿ.
• ಮರ ರಸ್ತೆ ಭಾಗಕ್ಕೆ ವಾಲಿಕೊಂಡಿದ್ದು, ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗಲಿದೆ. ಈ ಸಂಬಂಧ ಕೂಡಲೆ ಮರ ಟ್ರೆಮಿಂಗ್ ಗೊಳಿಸಲು ಸೂಚನೆ ನೀಡಿದರು.
• ಪಾದಚಾರಿ ಮಾರ್ಗದಲ್ಲಿ ನೇತಾಡುವಂತಹ ಒ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಿ.

ಶೇಷಾದ್ರಿಪುರಂ ಕಾಲೇಜು ರಸ್ತೆ ಪರಿಶೀಲನೆ:

• ಪಾದಚಾರಿ ಮಾರ್ಗದಲ್ಲಿ ವಾಲಿರುವ ಚಿಕ್ಕ ಗಿಡ ಹಾಗೂ ದೊಡ್ಡ ಮರದ ಬುಡವಿದ್ದು, ಅದನ್ನು ತೆರವುಗೊಳಿಸಿ ಆ ಜಾಗದಲ್ಲಿ ಸಸಿಗಳನ್ನು ನೆಡಲು ಸೂಚನೆ
• ಮೆಜರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆಯಲ್ಲಿ ಬೃಹತ್ ಮರದ ದೊಡ್ಡ ಕೊಂಬೆ ರಸ್ತೆ ಮೇಲೆ ಬಂದಿರುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದ್ದು, ರಸ್ತೆ ಮೇಲೆ ಬಂದಿರುವ ಕೊಂಬೆಯನ್ನು ತೆರವುಗೊಳಿಸಲು ಸೂಚನೆ.
• ಈ2ಈ ರೈಲ್ ಶಾಂಪಿಂಗ್ ಮುಂಭಾಗ ದೊಡ್ಡ ಜನರೇಟರ್ ರಸ್ತೆ ಭಾಗದಲ್ಲಿಟ್ಟಿದ್ದು, ಅದನ್ನು ಬೇರೆಡೆ ಸ್ಥಳಾಂತರಿಸಲು ಸೂಚನೆ. ಜೊತೆಗೆ ಪಾದಚಾರಿ ಮಾರ್ಗ ಸರಿಪಡಿಸಲು ಸೂಚನೆ.

ಶರಾವತಿ ಹೋಟೆಲ್ ರಸ್ತೆ ಪರಿಶೀಲನೆ:

• ಆರ್.ಟಿ.ಒ ಕಾಂಪ್ಲೆಕ್ಸ್ ಬಳಿ 8ನೇ ಬಿ ಸೆಕ್ಟರ್ ರಸ್ತೆಯಲ್ಲಿ ಚರಂಡಿ ಹಾಳಾಗಿದ್ದು, ಅದನ್ನು ಸರಿಪಡಿಸಲು ಸೂಚನೆ
• ಯಲಹಂಕ ಆರ್.ಟಿ.ಒ ಕಾಂಪ್ಲೆಕ್ಸ್ ಬಳಿ ಕಟ್ಟಡ ನಿರ್ಮಾಣಕ್ಕಾಗಿ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿದ್ದು, ಅದನ್ನು ತೆರವುಗೊಳಿಸಲಾಯಿತು
• ಪಾಲಿಕೆಯ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಸ್ಕ್ರ್ಯಾಪ್ ಹಾಕಿದ್ದು, ಅದನ್ನು ಹರಾಜು ಮಾಡಲು ಸೂಚನೆ ನೀಡಿದರು.
• ರಸ್ತೆ ಬದಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ
• ಯಲಹಂಕ ನ್ಯೂ ಟೌನ್ ಕೆಂಪೇಗೌಡ ಉದ್ಯಾನವನ ಪರಿಶೀಲನೆ ನಡೆಸಿ ವಾಯು ವಿಹಾರ ಮಾರ್ಗ, ಕೂರಲು ಆಸನಗಳ ಸರಿಯಾದ ವ್ಯವಸ್ಥೆ ಮಾಡಲು ಸೂಚನೆ. ನಾಗರಿಕರು ಯೋಗ ಮಾಡಲು ಮಂಟಪ ನಿರ್ಮಾಣ ಮಾಡಲು ಮನವಿ ಮಾಡಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು

ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣ ಪರಿಶೀಲನೆ:

• ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣದ ಬಳಿ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಬೇರೆಡೆ ಸ್ಥಳಾವಕಾಶ ಕಲ್ಪಿಸಲು ಸೂಚನೆ
• ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ಸೂಚನೆ
• ಚರಂಡಿ ಕಾಮಗಾರಿ ನಡೆಯುತ್ತಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ.

ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆ ಪರಿಶೀಲನೆ:

• ಅರೋಮಾ ಬೇಕರಿ ಮುಂಭಾಗ ಪಾದಚಾರಿ ಮಾರ್ಗ ಹಾಳಾಗಿದ್ದು, ಅದನ್ನು ಸರಿಪಡಿಸಲು ಸೂಚನೆ
• ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆಯಲ್ಲಿರುವ ಮ್ಯಾನ್ ಓಲ್ ಗಳು ರಸ್ತೆ ಮಟ್ಟಕ್ಕಿಂತ ಮೇಲ್ಭಾಗದಲ್ಲಿದ್ದು, ಅದನ್ನು ಸರಿಪಡಿಸಲು ಸೂಚನೆ
ರಸ್ತೆ ಬದಿಯ ಚರಂಡಿಗಳಲ್ಲಿ ಹೂಳನ್ನು ತೆರವುಗೊಳಿಸಲು 15 ಮೀಟರ್ ಗೆ ಒಂದು ಚೇಂಬರ್ ಮಾಡಿಕೊಂಡು, ಆಗಿಂದಾಗ್ಗೆ ಹೂಳನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಚನೆ ನೀಡಿದರು.
• ರಸ್ತೆ ಬದಿ ಚರಂಡಿಗಳಿಗೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿರುವ ಕಡೆ ತ್ಯಾಜ್ಯ ಚರಂಡಿಗೆ ಹೋಗದಂತೆ ಗ್ರೇಟಿಂಗ್ ಗಳನ್ನು ಹಾಕಲು ಸೂಚನೆ ನೀಡಿದರು
• ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವ ಕಡೆ ತೆರವು ಮಾಡಲು ಸೂಚನೆ
ಡಿ ಮಾರ್ಟ್ ಬಳಿ ರಸ್ತೆಯಲ್ಲು ನೀರು ಸೋರಿಕೆಯಾಗುತ್ತಿದ್ದು, ಅದನ್ನು ಪರಿಶೀಲಿಸಿ ಕೂಡಲೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು
• ಮದರ್ ಡೈರಿ ಪಕ್ಕದಲ್ಲಿರುವ ಪ್ರಸ್ಟೀಜ್ ಫ್ಲಾಜಾದಿಂದ ಪಾದಚಾರಿ ಮಾರ್ಗದಲ್ಲಿ ರ್ಯಾಂಪ್ ಹಾಕಿದ್ದು, ಅದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗದಲ್ಲಿದೆ. ಆದ್ದರಿಂದ ರ್ಯಾಂಪ್ ಅನ್ನು ಕೂಡಲೆ ತೆರವುಗೊಳಿಸಿ ಪಾದಚಾರಿ ಮಾರ್ಗವನ್ನು ಸರಿಪಡಿಸಲು ಸೂಚನೆ ನೀಡಿದರು.
ಅಟ್ಟೂರು ಬಳಿ ನೇತಾಡುವ ಕೇಬಲ್ ಗಳನ್ನು ತೆರವುಗೊಳಿಸಲು ಸೂಚನೆ
• ರಸ್ತೆ ಬದಿ ಕಟ್ಟಡ ನಿರ್ಮಾಣದ ವೇಳೆ ಪಾದಚಾರಿ ಮಾರ್ಗದಲ್ಲಿ ರ್ಯಾಂಪ್ ಮಾಡಿಕೊಳ್ಳದಂತೆ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪ‌ ವಲಯ ಅರಣ್ಯಾಧಿಕಾರಿಯನ್ನು ಮಾತೃ ಇಲಾಖೆಗೆ ಕಳುಹಿಸಲು ಸೂಚನೆ:

ಉಪ‌ ವಲಯ ಅರಣ್ಯಾಧಿಕಾರಿ ಆರ್. ಕೃಷ್ಣ ರವರು ರಸ್ತೆ ಬದಿಯ ಮರಗಳ‌ ಕೊಂಬೆಗಳು, ಅಪಾಯ ಸ್ಥಿತಿಯಲ್ಲಿರುವ ಮರ/ಮರದ ಕೊಂಬೆಗಳನ್ನು ತೆಗೆಯಲು ಅಗತ್ಯ ಕ್ರಮ ಕೈಗೊಳ್ಳದೇ ಇರುವುದರಿಂದ ಕೂಡಲೆ ಅವರನ್ನು ಮಾತೃ ಇಲಾಖೆಗೆ ಕಳುಹಿಸಲು ಸೂಚನೆ ನೀಡಿದರು.

ಈ ವೇಳೆ ಸ್ಥಳೀಯ ಶಾಸಕರಾದ ವಿಶ್ವನಾಥ್, ವಲಯ ಆಯುಕ್ತರಾದ ರಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್, ವಲಯ ಮುಖ್ಯ ಅಭಿಯಂತರರಾದ ರಂಗನಾಥ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

,

Leave a Reply

Your email address will not be published. Required fields are marked *