ಮುಂಬೈ, ಆಗಸ್ಟ್ 9 ಮೂತ್ರಪಿಂಡ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ನಟ ಅನುಪಮ್ ಶಾಮ್ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ.ಅವರಿಗೆ 63 ವರ್ಷ ವಯಸ್ಸಾಗಿತ್ತು.
ಮೂತ್ರಪಿಂಡ ತೊಂದರೆಗಾಗಿ ಅವರನ್ನು ಕಳೆದವಾರ ಇಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಅವರ ಸ್ನೇಹಿತ ಹಾಗೂ ನಟ ಯಶ್ಪಲ್ ಶರ್ಮಾ ಹೇಳಿದ್ದಾರೆ.
ಅವರು ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಅವರ ಇಬ್ಬರು ಸಹೋದರರು ಆಸ್ಪತ್ರೆಯಲ್ಲೇ ಇದ್ದರು ಎಂದು ಹೇಳಲಾಗಿದೆ. ಸ್ಲಂ ಡಾಗ್ ಮಿಲೇನಿಯರ್ ಮತ್ತು ಬ್ಯಾಂಡಿಟ್ ಕ್ವೀನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಶಾಮ್ ನಟಿಸಿದ್ದರು. ಜೊತೆಗೆ ಟಿವಿ ಶೋಗಳ ಮೂಲಕ ಅವರು ಜನಪ್ರಿಯರಾಗಿದ್ದರು .