ಬರುವ ವರ್ಷದ ಆದಿ ಭಾಗದಲ್ಲಿ ಕೋವಿಡ್ ಲಸಿಕೆ: ಸೌಮ್ಯ ಸ್ವಾಮಿನಾಥನ್

ಬರುವ ವರ್ಷದ ಆದಿ ಭಾಗದಲ್ಲಿ ಕೋವಿಡ್ ಲಸಿಕೆ: ಸೌಮ್ಯ ಸ್ವಾಮಿನಾಥನ್
ನ್ಯೂಯಾರ್ಕ್, ಅ 13  ಡಿಸೆಂಬರ್ ಅಂತ್ಯ ಇಲ್ಲವೆ ಮುಂದಿನ 2021ರ ಆದಿ
ಭಾಗದಲ್ಲಿ ಬಹು ನಿರೀಕ್ಷಿತ ಕೋವಿಡ್ 19 ಸೋಂಕಿಗೆ ಲಸಿಕೆ ದೊರೆಯುವ ನಿರೀಕ್ಷೆ ಇದೆ ಎಂದು
ವಿಶ್ವ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಹಾಗೂ ಭಾರತೀಯ ಮೂಲದ ಸೌಮ್ಯ
ಸ್ವಾಮಿನಾಥನ್ ಹೇಳಿದ್ದಾರೆ.
ಕೋವಿಡ್ ಲಸಿಕೆ ಕುರಿತ ಬೆಳವಣಿಗೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ
ಅವರು, ವಿಶ್ವದಾದ್ಯಂತ ವಿವಿಧ ಬಗೆಯ 40 ಲಸಿಕೆಗಳ ಕ್ಲಿನಿಕಲ್ ಪರೀಕ್ಷೆ ವಿವಿಧ
ಹಂತಗಳಲ್ಲಿದ್ದು, ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ ಎಂದು ಹೇಳಿದರು.
ಈ ಪೈಕಿ 10 ಲಸಿಕೆಗಳ ಪರೀಕ್ಷೆ ಮೂರನೇ ಹಂತದಲ್ಲಿ ನಡೆಯುತ್ತಿದೆ. ಮೂರನೇ ಹಂತದ
ಬಳಿಕ ಲಸಿಕೆಗಳ ಸಾಮಥ್ರ್ಯ ಮತ್ತು ಸುರಕ್ಷತೆಯನ್ನು ಪರಿಗಣಿಸಿ ಮಾನವ ಬಳಕೆಗೆ ಅವಕಾಶ
ಕಲ್ಪಿಸಲಾಗುವುದು ಎಂದಿದ್ದಾರೆ.
ಕ್ಲಿನಿಕಲ್ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ದೊರೆಯುವ ಸಂಭವವಿದೆ. ಹಲವು
ದೇಶಗಳು ಲಸಿಕೆ ಅನ್ವೇಷಣೆಯಲ್ಲಿ ತೊಡಗಿದ್ದರೂ, ವಿಶ್ವ ಆರೋಗ್ಯ ಸಂಘಟನೆಯ
ಅನುಮೋದನೆ ಇನ್ನೂ ದೊರಕಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದ ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ಸಮೀಕ್ಷೆ ಪ್ರಕಾರ, ಜಗತ್ತಿನಾದ್ಯಂತ
37 ದಶಲಕ್ಷಕ್ಕೂ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ
ಲಸಿಕೆ ಕಂಡುಹಿಡಿಯುವ ಪ್ರಯತ್ನ ಎಲ್ಲೆಡೆ ತೀವ್ರಗತಿಯಲ್ಲಿ ನಡೆಯುತ್ತಿವೆ. ಶೀಘ್ರದಲ್ಲೇ
ಉತ್ತಮ ಫಲಿತಾಂಶ ದೊರೆಯಲಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *