ಡೊನಾಲ್ಡ್ ಟ್ರಂಪ್ ಪುತ್ರನಿಗೆ ಕೊರೊನಾ

ಡೊನಾಲ್ಡ್ ಟ್ರಂಪ್ ಪುತ್ರನಿಗೆ ಕೊರೊನಾ
ವಾಷಿಂಗ್ಟನ್, ಅ 16 ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 14
ವರ್ಷದ ಪುತ್ರ ಬ್ಯಾರನ್ ಟ್ರಂಪ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು
ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ತಿಳಿಸಿದ್ದಾರೆ.
ತಾವು, ತಮ್ಮ ಪತಿ(ಟ್ರಂಪ್)ಗೆ ಕೊರೊನಾ ಸೋಂಕು ಕಂಡುಬಂದ ನಂತರ ಬ್ಯಾರೆನ್
ಪ್ರತ್ಯೇಕವಾಗಿ ವಾಸವಾಗಿದ್ದಾನೆ ಎಂದು ವಿವರಿಸಿದ್ದಾರೆ. ಅಂದಿನಿಂದ ಬ್ಯಾರೆನ್ ನಿತ್ಯ
ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದ, ಹೊಸದಾಗಿ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್
ವರದಿ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಹದಿನಾಲ್ಕು ವರ್ಷದ ಬಾಲಕ ಬ್ಯಾರೆನ್ ಟ್ರಂಪ್ ಗೆ ಯಾವುದೇ ಸೋಂಕು
ಲಕ್ಷಣಗಳು ಕಂಡು ಬಂದಿಲ್ಲ ಎಂದು ಮೆಲಿನಿಯಾ ಹೇಳಿದ್ದಾರೆ.
ತಮ್ಮ ಕುಟುಂಬದ ಮೂವರಿಗೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಕೊರೊನಾ
ಸೋಂಕಿಗೆ ಒಳಗಾಗಿದ್ದು, ಪರಸ್ಪರ ಬೆಂಬಲವಾಗಿ ನಿಂತು ಬಿಕ್ಕಟ್ಟಿನಿಂದ ಹೊರ
ಬಂದಿದ್ದೇವೆ. ಪ್ರಸ್ತುತ ತಮಗೆ ನೆಗೆಟಿವ್ ವರದಿ ಬಂದಿದೆ. ಕೊರೊನಾ ಚಿಕಿತ್ಸೆಗಾಗಿ
ಟ್ರಂಪ್ ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆಲಾನಿಯಾ ಶ್ವೇತ
ಭವನದಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರು. ಒಂದು ರೀತಿಯಲ್ಲಿ ತಾವು ತುಂಬಾ
ಅದೃಷ್ಟಶಾಲಿಯಾಗಿದ್ದು, ಲಘು ರೋಗ ಲಕ್ಷಣಗಳೊಂದಿಗೆ ಚೇತರಿಸಿಕೊಂಡಿರುವುದಾಗಿ
ಮೆಲಾನಿಯಾ ಹೇಳಿದ್ದಾರೆ.
ಕೊರೊನಾ ಸಮಯದಲ್ಲಿ ಮೈನೋವು, ಕೆಮ್ಮು ಹಾಗೂ ಆಯಾಸದಿಂದ ಬಳಲುತ್ತಿದೆ.
ಚಿಕಿತ್ಸೆಯ ಕ್ರಮವಾಗಿ ಹೆಚ್ಚಿನ ಜೀವಸತ್ವ ಹಾಗೂ ಪೋಷಕಾಂಶಗಳನ್ನು ತೆಗೆದುಕೊಂಡು
ಚೇತರಿಸಿಕೊಂಡಿದ್ದೇನೆ. ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಮೆಲಾನಿಯಾ ಧನ್ಯವಾದ
ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *