ರಾಜ್ಯದಲ್ಲಿ ಒಂದೇ ಸಲ ಅನ್ಲಾಕ್ ಮಾಡುವುದು ವೈಜ್ಞಾನಿಕವಲ್ಲ:ಸಚಿವ ಸುಧಾಕರ್

ರಾಜ್ಯದಲ್ಲಿ ಒಂದೇ ಸಲ ಅನ್ಲಾಕ್ ಮಾಡುವುದು ವೈಜ್ಞಾನಿಕವಲ್ಲ:ಸಚಿವ ಸುಧಾಕರ್

ಬೆಂಗಳೂರು,ಜೂ10  ರಾಜ್ಯದಲ್ಲಿ ಒಂದೇ ಸಲ ಅನ್ಲಾಕ್ ಮಾಡುವುದು ವೈಜ್ಞಾನಿಕವಲ್ಲ.ಒಂದೇಸಲಕ್ಕೆ ಅನ್ಲಾಕ್ ಮಾಡಿದರೆ ವೈರಾಣು ಹೆಚ್ಚುವ ಸಾಧ್ಯತೆಯಿರುವುದರಿಂದ ಹಂತಹಂತವಾಗಿ ಅನ್ಲಾಕ್ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ‌.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್,ಅನ್ಲಾಕ್ ಮಾಡುವ ಬಗ್ಗೆ ಸಿಎಂ ಇಂದು ಸಂಜೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆಯಂತೆ ಹಂತಹಂತವಾಗಿ ಅನ್ ಲಾಕ್ ಮಾಡಬೇಕಾಗುತ್ತದೆ.ಕೆಲವೊಂದು ಚಟುವಟಿಕೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಯವುದು.ಎರಡನೇ ಡೋಸ್ ಲಸಿಕೆ ಸಂಪೂರ್ಣ ಮುಗಿಯುವವರೆಗೆ ಅಲ್ಲಿಯವರೆಗೆ ತಕ್ಷಣ ಅನ್ಲಾಕ್ ಮಾಡುವುದಕ್ಕೆ ಆಗುವುದಿಲ್ಲ.ಇಡೀ ರಾಜ್ಯದಲ್ಲಿ ಒಟ್ಟಾರೆ 5000 ಕೇಸ್‌ಗಿಂತ ಕಡಿಮೆ ಬರಬೇಕು.ಮಹಾರಾಷ್ಟ್ರ ನೋಡಿದ್ದೇವೆ ಹೇಗೆ ಹಂತ ಹಂತವಾಗಿ ಅನ್ಲಾಕ್ ಮಾಡಬೇಕು.ಒಂದೇ ಸಲ ಅನ್ ಲಾಕ್ ಮಾಡೋದು ವೈಜ್ಞಾನಿಕ ಅಲ್ಲ.ಹಾಗೆ ಮಾಡುವುದಕ್ಕೂ ಆಗುವುದಿಲ್ಲ.ಎಂಟು‌ಜಿಲ್ಲೆಗಳಲ್ಲಿ ಏಕೆ ಇನ್ನೂ ಪಾಸಿಟಿವಿಟಿ ಹೆಚ್ಚಿದೆ ಎನ್ನುವ ಬಗ್ಗೆ ಚರ್ಚೆ ಮಾಡುತ್ತೇವೆ‌ ಎಂದು ಸುಧಾಕರ್ ಹೇಳಿದರು.

, ,

Leave a Reply

Your email address will not be published. Required fields are marked *