ಗಾಂಜಾ ನಶೆಯಲ್ಲಿದ್ದ ಐದಾರು ಪುಂಡರು ಅಂಗಡಿಗೆ ಹೊರಟಿದ್ದ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ನಡೆದಿದೆ.
ರಿಚರ್ಡ್ (24) ಮತ್ತು ಅಂಥೋನಿ(52) ಬಂಧಿತರು. ಶಾಂತಿ ಎಂಬಾಕೆ ನೊಂದ ಯುವತಿ.
ಮನೆಗೆ ಬೇಕಾದ ವಸ್ತುಗಳನ್ನು ತರಲು ಸಂಜೆ ವೇಳೆ ಮನೆಯಿಂದ ಹೊರಟಿದ್ದ ಶಾತಿಯನ್ನು ಕಂಡ ಗಾಂಜಾ ನಶೆಯಲ್ಲಿದ್ದ ಆರೋಪಿಗಳು ಚುಡಾಯಿಸಿ ಅಶ್ಲೀಲವಾಗಿ ಸನ್ನೆ ಮಾಡಿ ಕರೆದು ಹಾಡುಹಗಲೇ ನಡು ರಸ್ತೆಯಲ್ಲಿ ಮೈ ಕೈ ಮುಟ್ಟಿ ದುರುಳತನ ತೋರಿದ್ದಾರೆ. ಪ್ರ
ತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಹಲ್ಲೆ ಪ್ರಯತ್ನವನ್ನೂ ನಡೆಸಿದ್ದಾರೆ ಎಂದು ಶಾಂತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮುಂದುವರೆದು ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡು ಬಂದರೂ ಮನೆಗೆ ನುಗ್ಗಿ ಗಲಾಟೆ ಮಾಡಿದ್ದು 5 ಜನರ ಗುಂಪು ಇತ್ತು. ನೆರವಿಗೆ ಧಾವಿಸಿದ ಸ್ಥಳೀಯರ ಮೇಲೂ ಹಲ್ಲೆ ಮಾಡಿದ್ದಾರೆ ಎಂದರು.
ಹಲ್ಲೆ ಮತ್ತು ದೌರ್ಜನ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಉಳಿದ ಇಬ್ಬರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಇನ್ಸ್ಪೆಕ್ಟರ್ ತಿಳಿಸಿದರು. ಗಲಾಟೆಯಾಗಿದೆ ವೇಳೆ ಮಹಿಳೆಗೆ ಅಲ್ಪ ಸ್ವಲ್ಪ ಗಾಯಗಳು ಆಗಿದ್ದು ಮರು ದಿನ ಬೆಳಗ್ಗೆ ದೂರು ನೀಡಿದ್ದಾರೆ ಎಂದರು.
ಪ್ರತಿ ದೂರು
ನೊಂದ ಮಹಿಳೆ ಘಟನೆ ನಂತರ ಪರಿಚಯವಾದ ಜಿಮ್ ಟ್ರೈನರ್ ಗೆ ಫೋನಯಿಸಿದ್ದು ಆರೋಪಿಗಳು ದೂರು ನೀಡಿದ್ದಾರೆ. ವಿಚಾರಣೆ ನಡೆಸಿ ತಪ್ಪಿತಸ್ತರ ಮೇಲೆ ಕ್ರಮ ವಹಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿ ವೈ ಎಸ್ಪಿ ಮೋಹನ್ ತಿಳಿಸಿದ್ದಾರೆ. ಅಡಿಶನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಇದ್ದರು.